Vijaya Bharathi

Abstract Drama Romance

4  

Vijaya Bharathi

Abstract Drama Romance

ಅವನು

ಅವನು

3 mins
365



ದೂರದ ಹಳ್ಳಿ ಯಿಂದ ಕಾಲೇಜು ವಿದ್ಯಾಭ್ಯಾಸ ಕ್ಕಾಗಿ

ಬೆಂಗಳೂರು ಸೇರಿದ ಸಂಹಿತಾ, ಹಾಸ್ಟೆಲ್ ಗೆ ಸೇರಿ

ಮನೆಯಿಂದ ದೂರ ಉಳಿದಾಗ,, ಅವಳಿಗೆ ಹೋಂ ಸಿಕ್ ಪ್ರಾರಂಭವಾಯಿತು.ದಿನಕ್ಕೆರಡು ಬಾರಿ ಮನೆಗೆ ಫೋನ್ ಮಾಡುತ್ತಾ ತನ್ನೊಳಗೆ ಹುದುಗಿರುವ ದು:ಖವನ್ನು ಸಮಾಧಾನ ಮಾಡಿಕೊಳ್ಳುತ್ತಿದ್ದಳು.ಎರಡು ಮೂರು ದಿನಗಳು ಒಟ್ಟಿಗೆ ರಜ ಬಂದ ಕೂಡಲೇ ತನ್ನ ಹಳ್ಳಿ ಹುಣಸನಹಳ್ಳಿಗೆ ಹೊರಟುಬಿಡುತ್ತಿದ್ದಳು.

ಒಂದು ಬಾರಿ ಗೌರಿ ಗಣೇಶ ಹಬ್ಬದ ಹಿಂದಿನ ದಿನ ಕಾಲೇಜು ಮುಗಿಸಿ ತನ್ನೂರಿಗೆ ಹೊರಟಳು.ಸಂಜೆ ಆರು ಗಂಟೆ ಯ ಬಸ್ ಹತ್ತಿದಳು. ಕಿಟಕಿಯ ಪಕ್ಕದಲ್ಲಿ ಸೀಟ್ ಸಿಕ್ಕಿದಾಗ ಅವಳಿಗೆ ತುಂಬಾ ಖುಷಿ ಯಾಯಿತು.ಇದು ಸಾಮಾನ್ಯವಾಗಿ ಎಲ್ಲರಿಗೂ ಆಗುವ ಆನಂದ. ಕೆಲವು ಸಾರಿ ಬಸ್ ಹತ್ತಿ ದಾಗ, ಮುಂದಿನಿಂದ ಹಿಂದಿನ ಸೀಟಿನ ತನಕ ಕಿಟಕಿಯ ಪಕ್ಕದ ಸೀಟ್ ಗಳು ಒಂದೊಂದೇ ಭರ್ತಿಯಾಗಿರುತ್ತದೆ.ಉಳಿದ ಸೀಟ್ ಗಳಲ್ಲಿ ನಂತರ ಹತ್ತಿರದವರು ಕುಳಿತು ಕೊಳ್ಳಬೇಕು.ಎಷ್ಟೋ ಬಾರಿ ಒಬ್ಬೊಬ್ಬರೇ ಗಂಡಸರು ಕಿಟಿಕಿಯ ಬಳಿ ಕುಳಿತಿದ್ದಾಗ ,ಇಬ್ಬರು ಹೆಂಗಸರು ಒಟ್ಟಿಗೆ ಕುಳಿತು ಕೊಳ್ಳಲು

'ಸ್ವಲ್ಪ ಮುಂದಿನ ಸೀಟ್ಗೆ ಹೋಗಿ, ಎರಡು ಸೀಟ್ ಗಳನ್ನು ಒಟ್ಟಿಗೆ ಬಿಟ್ಟು ಕೊಡಿ' ಅಂತ ಕೇಳಿಕೊಂಡಾಗಲೂ , ಕಿಟಕಿಯ ಸೀಟ್ ಅನ್ನು ಬಿಟ್ಟು ಕೊಡಲು ತಯಾರಾಗಿರುವುದಿಲ್ಲ.

ಇಂತಿಪ್ಪ ಕಿಟಕಿ ಸೀಟು, ನಮ್ಮ ಹಿರೊಯಿನ್ ಸಂಹಿತಾಗೆ ಸಿಕ್ಕಾಗ ಅವಳಿಗೆಷ್ಟು ಖುಷಿ ಯಾಗಿರಬೇಡ?ಹಾಯಾಗಿ ಕಿಟಕಿಗೆ ತಲೆ ಆನಿಸಿ ಕುಳಿತಳು.

ಬೆಂಗಳೂರಿನಿಂದ ಹುಣಸನಹಳ್ಳಿ ತಲುಪಲು ಸುಮಾರು ಮೂರರಿಂದ ನಾಲ್ಕು ಗಂಟೆಗಳು ಬೇಕು.ಹಾಗೇ ಕಣ್ಣು ಮುಚ್ಚಿ ಕುಳಿತಳು.

ಬಸ್ ಹೊರಟಿತು.ಬೆಂಗಳೂರನ್ನು ಬಿಟ್ಟು ಹೆದ್ದಾರಿ ಗೆ ಬರಲು ಸುಮಾರು ಒಂದು ಗಂಟೆ ಆಯಿತು.ಅಲ್ಲೀವರೆಗೂ ಮಂದಗತಿಯಲ್ಲಿ ಚಲಿಸುತ್ತಿದ್ದ ಬಸ್ ನಂತರ ತನ್ನ ವೇಗವನ್ನು ಹೆಚ್ಚಿಸಿತು.ಕಿಟಕಿಯಿಂದ ತಣ್ಣನೆ ಗಾಳಿ ಬೀಸುತ್ತಿರಲು, ಸಂಹಿತಾ ನಿದ್ರೆ ಗೆ ಜಾರಿದಳು.

ಒಮ್ಮೆ ಇದ್ದಕ್ಕಿದ್ದಂತೆ ಬಸ್ ನಿಂತಾಗ ಧಡಕ್ಕನೆ ಎಚ್ಚರ ಗೊಂಡು ಸುತ್ತಲೂ ಕಣ್ಣಾಡಿಸಿದಾಗ , ಬಸ್ ನಲ್ಲಿ ಅರ್ಧಕ್ಕರ್ಧ ಜನ ಖಾಲಿಯಾಗಿದ್ದರು.ಹೊರಗಡೆಯ ಬೋರ್ಡನಿಂದ ಅದು ಭೈರಪ್ಫನಹಳ್ಳಿ ಎಂದು ತಿಳಿದು, ನಿದ್ರೆ ಯಿಂದ ಪೂರ್ತಿಎಚ್ಚರ ಗೊಂಡು ಕುಳಿತಳು.ಇನ್ನೊಂದು ಹದಿನೈದು ನಿಮಿಷ ಗಳಲ್ಲಿ ಅವಳ ಹಳ್ಳಿ ಬರುತ್ತದೆ ಎಂದು ಅವಳಿಗೆ ತಿಳಿದಿತ್ತು.ಒಮ್ಮೆ ಎದ್ದು ಹಿಂದಿನ ಸೀಟಿನ ಕಡೆ ಕಣ್ಣು ಹಾಯಿಸಿದಾಗ, ಅವಳಿಗೆ ಆಶ್ಚರ್ಯವಾಯಿತು.ತನ್ನ ಕಾಲೇಜಿನ ಕಂಪ್ಯೂಟರ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಸೂರಜ್ ನಾಲ್ಕು ಸೀಟ್ ಹಿಂದೆ ಕುಳಿತಿದ್ದರು.ಅವರನ್ನು ಮಾತನಾಡಿಸುವಷ್ಟು ಧೈರ್ಯ ಸಾಲದೆ ಸುಮ್ಮನೆ ಕಿಟಕಿಯ ಹೊರಗೆ ದೃಷ್ಟಿ ಹಾಯಿಸುತ್ತ ಕುಳಿತಳು.

'ಇವರು ಇಲ್ಲಿ ಹೇಗೆ? ಯಾರ ಮನೆಗೆ ಹೊರಟಿದ್ದಾರೋ?'

ಮನದೊಳಗೆ ಲೆಕ್ಕಾಚಾರ ಹಾಕುತ್ತಿದ್ದ ಳು.

'ಅವರು ಎಲ್ಲಿಗೆ ಹೋದರೆ ತನಗೇನು?',, ತಟಸ್ಥ ನೀತಿ ಅನುಸರಿಸಿ ತೆಪ್ಪಗೆ ಕುಳಿತಳು.

ಅಂತೂ ಇಂತೂ ಬಸ್ ಹುಣಸನಹಳ್ಳಿ ತಲುಪಿದಾಗ ರಾತ್ರಿ ಒಂಬತ್ತು ವರೆಯಾಗಿತ್ತು.ಆಶ್ಚರ್ಯವೆಂದರೆ ಆ ಪ್ರೊ.ಮಹಾಶಯ ಸಹ ಅದೇ ಹಳ್ಳಿಯಲ್ಲಿ ಇಳಿದು ಹತ್ತಿರದ ಅಂಗಡಿಯಲ್ಲಿ ಯಾರದೋ ವಿಳಾಸ ವಿಚಾರಿಸುತ್ತಾ ನಿಂತಿದ್ದ.ಸಂಹಿತಾಳ ಮನೆ ಬಸ್ ಸ್ಟ್ಯಾಂಡ್ ಗೆ ತುಂಬಾ ಹತ್ತಿರವಾಗಿದ್ದು ದ್ದರಿಂದ ಅವಳು ಮನೆ ಕಡೆಗೆ ಹೊರಟಳು.

ಮನೆಯನ್ನು ತಲುಪಿ ದ ಸಂಹಿತಾ,ತನ್ನಅಪ್ಪ ಅಮ್ಮ ತಂಗಿಯ ಜೊತೆ ಉಭಯಕುಶಲೋಪರಿ ಮಾತನಾಡುತ್ತಾ ಇದ್ದಾಗ, ಮತ್ತೆ ಬಾಗಿಲು ಬಡಿದು ಶಬ್ದವಾಗಿ, ಅವಳ ತಂದೆ ರಾಜಣ್ಣ ಬಾ ಗಿಲು ತೆಗೆದು, 

"ಓ ಬಾಪ್ಪ ಸೂರಜ್ ಹೇಗಿದ್ದೀಯಾ ಮರಿ? ನಮ್ಮ ಸುಬ್ರಹ್ಮಣ್ಯ ಹೇಗಿದ್ದಾನೆ?"ಮಾತನಾಡುತ್ತಾ

ಆ ವ್ಯಕ್ತಿಯನ್ನು ಒಳಗೆ ಕರೆದುಕೊಂಡು ಬಂದಾಗ, ಸಂಹಿತಾ ಗೆ ಮತ್ತೊಂದು ಶಾಕ್.ಒಳಗೆ ಬಂದ ಸೂರಜ್ ನನ್ನೇ ನೋಡುತ್ತಾ ನಿಂತುಬಿಟ್ಟಳು. ಸಂಹಿತಾಳ ತಂದೆ ಸೂರಜ್ ನನ್ನು ಎಲ್ಲರಿಗೂ ಪರಿಚಯ ಮಾಡಿಸಿ,ಕಡೆಗೆ

"ಇವಳು ಸಂಹಿತಾ ,ಪಿ.ಯು.ಸಿ.ಫಸ್ಟ ಇಯರ್,ಬೆಂಗಳೂರಿನ ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ಓದುತ್ತಿದ್ದಾಳೆ ಈಗ ತಾನೇ ಬಸ್ ನಲ್ಲಿ ಬಂದಳು"ಎಂದಾಗ, ಸೂರಜ್ ಗೆ ಈ ಹುಡುಗಿ ಯನ್ನು ಎಲ್ಲೋ ನೋಡಿದ ನೆನಪಾಯಿತು.

ಕಡೆಗೆ ಅವಳನ್ನು ತನ್ನ ಕಂಪ್ಯೂಟರ್ ಕ್ಲಾಸ್ ನಲ್ಲಿ ಪ್ರತಿದಿನ ನೋಡುತ್ತಿದ್ದುದು ಜ್ಞಾಪಕಕ್ಕೆ ಬಂತು.

"ನಮಸ್ಕಾರ ಸರ್" ಎಂದು ಕೈ ಮುಗಿದಳು.

ಆದರೆ ಎಲ್ಲರ ಮುಖದಲ್ಲೂ ' ಇವನ್ಯಾರು ?'ಎಂಬ

ಪ್ರಶ್ನಾರ್ಥಕ ಚಿಹ್ನೆ ಯನ್ನು ಗಮನಿಸಿದ ಸಂಹಿತಾ ಳ ತಂದೆ ಸೇತುರಾವ್ ರವರು ಇವನ ಪರಿಚಯ ಮಾಡಿಕೊಟ್ಟರು.

"ನಿಮಗೆಲ್ಲರಿಗೂ ಈ ಹುಡುಗ ಯಾರೂ ಅಂತ ಗೊತ್ತಿಲ್ಲ ಅಲ್ವಾ, ನಾನು ಈಗ ಇವನ ಪರಿಚಯ ಮಾಡಿಸಿಕೊಡ್ತೀನಿ.

ಇವನು ಸೂರಜ್ ಅಂತ, ಕಂಪ್ಯೂಟರ್ ಸೈನ್ಸ್ ನಲ್ಲಿ ಪಿ.ಹೆಚ್.ಡಿ ಮಾಡುತ್ತಾ ಇದ್ದಾನೆ.'ಅರ್ನ್ ವೈಲ್ ಯು ಲರ್ನ್ 'ಎಂಬಂತೆ ಕಾಲೇಜಿನ ಲ್ಲಿ ಉಪನ್ಯಾಸಕ ವೃತ್ತಿಯನ್ನೂ ಸಹ ಮಾಡುತ್ತಿದ್ದಾನೆ.ಇವನು ನಮ್ಮ ದೂರದ ಸಂಬಂಧಿ ಯೂ ಆಗಬೇಕು.ಇವನ ಅಜ್ಜಿ ನಮ್ಮ ತಾತ ಇಬ್ಬರೂ ಅಣ್ಣ ತಂಗಿರು . ನಮ್ಮ ಸುಬ್ರಹ್ಮಣ್ಯ ನ ಮಗ.

ಹೊಕ್ಕಿ ಬಳಸುವುದು ಕಡಿಮೆ ಯಾದರೆ ಹೀಗೇ ಆಗೋದು ನೋಡಿ.ಮೊನ್ನೆ ಸಂಹಿತಾ ಳನ್ನು ಹಾಸ್ಟೆಲ್ ಸೇರಿಸಿ ಬಿಟ್ಟು ಬರುವಾಗ ದಾರಿಯಲ್ಲಿ ನಮ್ಮ ಸುಬ್ರಹ್ಮಣ್ಯ ಸಿಕ್ಕಿ,ಮನೆಗೆ ಕರೆದುಕೊಂಡು ಹೋಗಿದ್ದ.ಆಗ ಲೇ ನನಗೆ ಈ ಸೂರಜ್ ಪರಿಚಯ ಆಗಿದ್ದು.ಅವನದೇನೋ ಹಳ್ಳಿಗಳ ಉದ್ಧಾರದ ಮೇಲೆ ಪ್ರಾಜೆಕ್ಟ್ ಇದೆ ಅಂದಿದ್ದ,ನಾನೇ ನಮ್ಮ ಹಳ್ಳಿಗೆ ಬರಹೇಳಿದ್ದೆ.ಒಟ್ಟಿನಲ್ಲಿ ಈ ಸೂರಜ್ ನಮ್ಮ ದೂರದ ಸಂಬಂಧಿ" ಎಂದು ಹೇಳುತ್ತಾ ತಮ್ಮ ಮನೆಯವರಿಗೆ ಪರಿಚಯ ಮಾಡಿಕೊಟ್ಟರು.

ನಂತರ ಸೂರಜ್ ಇನ್ನೊಂದು ವಿಷಯ ಸೇರಿಸಿದ್ದ.

"ಸರ್, ಮತ್ತೊಂದು ವಿಷಯ ಅಂದ್ರೆ ನಾನು ನಿಮ್ಮ ಮಗಳಿಗೆ ಲೆಕ್ಚರರ್ ಕೂಡ ಆಗಿದ್ದೀನಿ"

"ಬಹಳ ಸಂತೋಷ ಕಣೋ ಮರಿ, ನೀನು ಅದೇ ಕಾಲೇಜಿನಲ್ಲಿ ಇರುವುದನ್ನು ತಿಳಿದು ನನಗೆ ಎಷ್ಟೋ ಧೈರ್ಯ ಬಂತು.ನಮ್ಮ ಸಂಹಿತಾಳ ಕಡೆ ನಿಗಾ ವಹಿಸು."

""ಅದಕ್ಕೇನಂತೆ ಅವರಿಗೆ ಏನಾದರೂ ಸಹಾಯ ಬೇಕಾದರೆ ನನ್ನನ್ನು ಕಾಂಟಾಕ್ಟ್ ಮಾಡಲಿ"ಸೂರಜ್ ಭರವಸೆ ಯಿತ್ತು,ಅತ್ತ ತಿರುಗಿದಾಗ, ಸಂಹಿತಾ ಎಲ್ಲರಿಗೂ ಊಟಕ್ಕೆ ತಟ್ಟೆ ಹಾಕುತ್ತಿದ್ದಳು.

ಊಟದ ನಂತರ ಸ್ವಲ್ಪ ಹೊತ್ತು ಲೋಕಾಭಿರಾಮವಾಗಿ ಮಾತನಾಡುತ್ತ ಇದ್ದ ಸೂರಜ್ ರಾತ್ರಿ ಹಾಯಾಗಿ ಮಲಗಿದಾಗ, ತುಂಬಾ ಸುಂದರವಾಗಿದ್ದ ಸಂಹಿತಾ ಳ ಬಗ್ಗೆ ಯೋಚಿಸುತ್ತಾ, ಏನೋ ಲೆಕ್ಕಾಚಾರ ಹಾಕಿದ.

ತನ್ನ ಕೆಲಸ ಮುಗಿಸಿ ಮತ್ತೆ ಬೆಂಗಳೂರಿಗೆ ಸೂರಜ್ ಹೊರಟಾಗ, ರಾಜಣ್ಣ ನವರು, "ನೋಡು ಮರಿ,ನಾನೂ ನಿಮ್ಮ ಅಪ್ಪ ಇಬ್ಬರೂ ಬಾಲ್ಯ ದ ದೋಸ್ತಿ ಗಳಪ್ಪ. ಇನ್ನೊಂದು ಸಾರಿ ನೀನು ಬರುವಾಗ ನಿಮ್ಮ ಅಪ್ಪ ಅಮ್ಮನನ್ನು ಕರೆದುಕೊಂಡು ಬರಬೇಕು.ನನ್ನ ಮಗಳು ಸಂಹಿತಾ ಕಡೆ ಸ್ವಲ್ಪ ಗಮನ ಕೊಡಪ್ಪ. ನೀನು ಅವಳ ಕಾಲೇಜಿನಲ್ಲಿ ಇರೋದು ನನಗೆ ಎಷ್ಟೋ ಧೈರ್ಯ ಕಣಪ್ಪ."ಎಂದು ಹೇಳಿದಾಗ,

"ನೀವು ಸಂಹಿತಾ ಳ ಬಗ್ಗೆ ಏನೂ ತಲೆ ಕೆಡಿಸಿಕೊಳ್ಳಬೇಡಿ ಅಂಕಲ್ ,ನಾನಿದೀನಲ್ಲ, ಧೈರ್ಯ ವಾಗಿರಿ" ಎನ್ನುತ್ತಾ  ಅವರಿಗೆ ನಮಸ್ಕರಿಸಿ ಹೊರಟ ಸೂರಜ್.

ಇದಾದ ನಂತರ ಕಾಲೇಜಿನಲ್ಲಿ ಸೂರಜ್ ಹಾಗೂ ಸಂಹಿತಾ ಇಬ್ಬರ ಗೆಳೆತನ ಬೆಳೆಯಿತು.

ಮುಂದೆ ಇದೇ ದೂರದ ಸಂಬಂಧಿ ಹುಡುಗ ಸೂರಜ್ ಸಂಹಿತಾಳ ಕುಟುಂಬಕ್ಕೆ ಹತ್ತಿರ ವಾಗುತ್ತಾ ಕಡೆಗೆ ಆ ಮನೆಯ ಅಳಿಯನೇ ಆದ.ಅಂದು ಬಸ್ನಲ್ಲಿ ಸಹ ಪ್ರಯಾಣಿಕನಾದ "ಅವನು" ಇಂದು ತನ್ನ ಬಾಳಲ್ಲೂ ಸಹಪ್ರಯಾಣಿಕನಾದದ್ದು ಸಂಹಿತಾಳ ಪಾಲಿಗೆ ಬಯಸದೇ ಬಂದ ಭಾಗ್ಯ ವಾಯಿತು.



Rate this content
Log in

Similar kannada story from Abstract