kaveri p u

Horror Inspirational Others

3.4  

kaveri p u

Horror Inspirational Others

ಆಪ್ತಮಿತ್ರ

ಆಪ್ತಮಿತ್ರ

2 mins
610


ನಾನ್ ಸ್ಟಾಪ್ ನವೆಂಬರ್ - ಮಧ್ಯಂತರ 


ನೋಡುಗರನ್ನು ಭಯಗೊಳಿಸಿದ ಹಾರರ್ ಚಿತ್ರಗಳಲ್ಲಿ ಆಪ್ತಮಿತ್ರ ಚಿತ್ರವೂ ಒಂದು. ನಾಗವಲ್ಲಿ, ಗಂಗಾ, ರಮೇಶ್, ವಿಷ್ಣು ಅವರ ನಟನೆ ನಿಜವಾಗಿಯು ಸುಂದರವಾಗಿ ಮೂಡಿಬಂದಿದೆ.


ಚಿತ್ರದಲ್ಲಿ ನಾಯಕಿಯಾದ ಗಂಗಾ, ನಾಗವಲ್ಲಿ ಎಂಬ ಆತ್ಮವನ್ನು ತಾನೇ ಎಂದು ಭ್ರಮಿಸುತ್ತಾಳೆ. ನೃತ್ಯ ಮೇಷ್ಟ್ರರನ್ನು ನಾಗವಲ್ಲಿಯ ಆತ್ಮ ಬಯಸುತ್ತದೆ. ಅಲ್ಲದೇ, ವಿಷ್ಣುವನ್ನು ಕೊಂದು ತನ್ನ ಸೇಡು ತೀರಿಸಿಕೊಳ್ಳಬೇಕೆಂದು ಗಂಗಾ ಪ್ರತಿಜ್ಞೆ ಮಾಡಿರುತ್ತಾಳೆ. ಇದು ಚಿತ್ರದ ತಿರುಳು. ಇದನ್ನು ನನ್ನ ದೃಷ್ಟಿಕೋನದಂತೆ ಬದಲಾಯಿಸಿದಾಗ,


ಗಂಗಾ : ವಿಜಯ್, ಶುಕ್ರವಾರ ಹುಣ್ಣಿಮೆ ಇದೆ, ನಾವು ಅವತ್ತು ಗುಡ್ಡಕ್ಕೆ ಹೋಗೋ ಪ್ಲಾನ್ ಮಾಡಿದ್ವಿ ನೆನಪಿದೆಯಾ.


ವಿಜಯ್ : ಹಾ ಗಂಗಾ ನೆನಪಿದೆ.


ಗಂಗಾ : ಅಂದ ಹಾಗೆ ವಿಜಯ್, ಅವತ್ತು ನಮ್ಮ ಸೌಮ್ಯನ ಮದ್ವೆ ಆಗೋ ಗಂಡು ತಾರಾನಾಥ್ ಇದಾನಲ್ಲ, ಅವನನ್ನು ಕರ್ಕೊಂಡು ಹೋಗೋಣ್ವಾ?


ವಿಜಯ್ : ಅವ್ನ್ ಯಾಕೆ ಗಂಗಾ. ಇನ್ನೂ ಬೇಕಿದ್ರೆ ನಿನ್ನ ಗಂಡ ರಮೇಶನ್ನೇ ಕರಿ. ಎಲ್ರು ಹೋಗೋಣ.


ಗಂಗಾ : ಅಯ್ಯೋ ನಿಮಗೆ gottalva ವಿಜಯ್, ರಮೇಶ್ ಎಷ್ಟು ಬ್ಯುಸಿ ಅಂತ. ಸುಮ್ನೆ ಯಾಕೆ ಕೇಳೋದು, ನಾನು ನೀವು, ತಾರಾನಾಥ್ ಹೋಗೋಣ.


ವಿಜಯ್ : ಸರಿ ಗಂಗಾ. ತಾರಾನಾಥನ ಕೇಳ್ತೀನಿ.


ಗಂಗಾ : ವಿಜಯ್ ಒಂದ್ ವಿಷ್ಯ. ಮದ್ವೆ ಆಗೋ ಹುಡುಗಿ ಹುಣ್ಣಿಮೆ ದಿನ ಬರೋದು ಬೇಡ, ಅತ್ತೆ ಮಾವ ಅವಳನ್ನ ಕಳ್ಸಲ್ಲ, ಸೋ ಅವಳನ್ನ ಕರೀಲೇ ಬೇಡಿ, ನಾವ್ ಮೂವರೇ ಹೋಗೋಣ, ಬಂದ್ಮೇಲೆ ಮನೆಯವರಿಗೆ ಹೇಳೋಣ.


ವಿಜಯ್ : ಆಯ್ತು ಗಂಗಾ.


         -----------------


ಗಂಗಾ : ಫೈನಲಿ ವಿ ಆರ್ ಗೋಯಿಂಗ್. ತಾರಾನಾಥ್ ನಿಮಗೆ ಸಂತೋಷ ಆಗ್ತಿಲ್ವಾ?


ತಾರಾನಾಥ್ : ಇಲ್ಲಾ ಹಾಗೇನಿಲ್ಲ. ಅವಳನ್ನು ಕರ್ಕೊಂಡ್ ಬರ್ಬೇಕಿತ್ತು. ಅವಳನ್ನ ಬಿಟ್ಟು ನಾನೇಲ್ಲೂ ಹೋಗಿರ್ಲಿಲ್ಲ. ಮನಸಾರೆ ಅವಳನ್ನ ಪ್ರೀತ್ಸಿದಿನಿ, ಇಲ್ಲಿವರೆಗೂ ಒಮ್ಮೆನೂ ಅವಳಿಗೆ ಸುಳ್ಳು ಹೇಳಿಲ್ಲ, ಅಂತದ್ರಲ್ಲಿ ಇವತ್ತು ಸುಳ್ ಮೇಲೆ ಸುಳ್ ಹೇಳಿ ಬಂದೆ. ನಾನು ಬರಬಾರದಿತ್ತು ಗಂಗಾ ಅವರೇ. ನನ್ನ ಹುಡುಗಿಗೆ ಮೋಸ ಮಾಡಿದ್ದು ನನ್ನನ್ನ ಕಾಡ್ತಿದೆ.


ಗಂಗಾ (ನಾಗವಲ್ಲಿಯ ಆತ್ಮ ಗಂಗಾಳ ಮೈ ಸೇರಿರುತ್ತದೆ ) : ಮತ್ತೇ ನನ್ನ ಬಿಟ್ಟಿದ್ದಕ್ಕೆ ನಿನಗೆ ಬೇಜಾರಾಗ್ತಿಲ್ವಾ? ನನ್ನ ಮರ್ತು ಅವಳನ್ನ ಮದ್ವೆ ಆಗ್ತಿಯೇನೋ?


ತಾರಾನಾಥ್ : ಗಂಗಾ ಅವರೇ ಏನಾಗಿದೆ ನಿಮಗೆ? ನಾನ್ ನಿಮ್ಮನ್ನ ನೋಡಿದ್ದೆ ಈಗ ಒಂದು ವಾರದಿಂದ. ನಾನ್ ನಿಮಗೆ ಹೇಗೆ ಮೋಸ ಮಾಡ್ತೀನಿ. ನಾನು ನಿಮ್ಮ ನಾದಿನಿಯನ್ನ ಪ್ರೀತಿ ಮಾಡ್ತಿದೀನಿ. ವಿಜಯ್ ಸರ್ ನೀವಾದ್ರೂ ಹೇಳಿ.


ವಿಜಯ್ : ಗಂಗಾ ಏನಾಗಿದೆ ನಿಮಗೆ. ಯಾಕೆ ನಿಮ್ ಕಣ್ಣೆಲ್ಲಾ ಕೆಂಪಾಗಿದೆ.


ಗಂಗಾ : ಯಾರೋ ನೀನೂ ವಿಜಯ್ ಅಂದ್ರೆ? ನಾನು ಗಂಗಾ ಅಲ್ಲಾ ನಾಗವಲ್ಲಿ. ನಾಗವಲ್ಲಿ! ಇವನು ನನ್ನ ಪ್ರೇಮಿ ತಾರಾನಾಥ್. ನಾನು ಇವತ್ತು ಇಲ್ಲಿ ಬಂದಿದ್ದೆ ಇವನನ್ನ ನನ್ನ ಜೊತೆ ತಗೊಂಡ್ ಹೋಗೋಕೆ. (ಕಾರಿನ ಬಾಗಿಲು ತೆಗೆದು ವಿಜಯನನ್ನು ದೂಡಿ, ಗಂಗಾ ತಾನೇ ಕಾರನ್ನು ವೇಗವಾಗಿ ಓಡಿಸುತ್ತಾಳೆ, ತಾರಾನಾಥ್ ಕೂಗಾಡುತ್ತಲೇ ಇರುತ್ತಾನೆ. ವಿಜಯ್ ಹೇಗೋ ಎದ್ದು, ಮನೆಗೆ ಫೋನ್ ಮಾಡಿ ವಿಷಯ ತಿಳಿಸಿ ಎಲ್ಲರನ್ನೂ ಗುಡ್ಡದ ಹತ್ತಿರ ಬರಲು ಹೇಳುತ್ತಾನೆ )


ಗಂಗಾ : ತಾರಾನಾಥ್ ಏನು ಹೇಳಬೇಡ, ನೀನೂ ನನ್ನವನು. ಹೋದ ಜನ್ಮದಲ್ಲಿ ನಾವಿಬ್ರು ಒಂದಾಗ್ಲಿಲ್ಲ, ಈ ಜನ್ಮದಲ್ಲಿ ನಮ್ಮನ್ನ ಯಾರೂ ಬೇರೆ ಮಾಡೋಕೆ ಆಗಲ್ಲಾ. ಬಾ, ನನ್ನೊಂದಿಗೆ ಒಂದಾಗು.

(ಗಂಗಾ ಗುಡ್ಡದ ತುದಿಯಿಂದ ನೇರವಾಗಿ ಕಾರನ್ನು ಪ್ರಪಾತಕ್ಕೆ ಬೀಳಿಸುತ್ತಾಳೆ.

ಮನೆಯವರೆಲ್ಲರೂ ಬರುವಷ್ಟರಲ್ಲಿ ಗಂಗಾ, ತಾರಾನಾಥನ ಪ್ರಾಣಪಕ್ಷಿ ಹಾರಿ ಹೋಗಿದ್ದವು)


Rate this content
Log in

Similar kannada story from Horror