STORYMIRROR

Ranjitha Ranju

Tragedy Inspirational Others

4  

Ranjitha Ranju

Tragedy Inspirational Others

ಪ್ರವೇಶ ನಿಷಿದ್ಧವೆಂದರು;

ಪ್ರವೇಶ ನಿಷಿದ್ಧವೆಂದರು;

1 min
398


ಅರೆಬೆತ್ತಲೆ ಮೈಯ ಸವೆಸಿ

ಬೆವರನಿಳಿಸಿ ದುಡಿದ ನಿನಗೆ

ಆಗಾಗ ಒಂದಿಷ್ಟು ಬ್ರಾಂದಿ

ಉಪ್ಪಿನಕಾಯಿ ನೆಕ್ಕಿಸಿ

ಕಟ್ಟಿಸಿಕೊಂಡ ಗುಡಿಗೆ

ಪ್ರವೇಶ ನಿಷಿದ್ಧವೆಂದರು


ಒಂದೊತ್ತಿನ ಗಡದ್ ಊಟ 

ಖರ್ಚಿಗಷ್ಟು ಪುಡಿಗಾಸು

ಕೊಟ್ಟರೆ ನಿನ್ನ ಕೆಲಸ 

ಹೊತ್ತು ಮೀರಿ ಮುಂದೋಗುವುದು

ದೇವಸ್ಥಾನ ಅಲ್ಲವೆ ಎಂದು..

ಆದರೂ ಪ್ರವೇಶ ನಿಷಿದ್ಧವೆಂದರು


ಕಂಬ ಹೊತ್ತು ಬಾಗಿದ ಬೆನ್ನು 

ಬೊಕ್ಕೆ ಏಳುವಂತೆ ಹೇಗಿದ

ಕೈಗಳು ಬೆಚ್ಚನೆ ಕುಳಿತ

ಕಲ್ಲಿನ ಬಳಿ ಕೈ ಮುಗಿಯಲು

ಬಂದರೆ ಬೈದು ಅಟ್ಟುವರು

ಪ್ರವೇಶ ನಿಷಿದ್ಧವೆಂದರು


ಹುಂಡಿ ಕಾಸಿಗಿಲ್ಲದ ಮೈಲಿಗೆ

ಮಂಗಳಾರತಿ, ತೀರ್ಥ ಪ್ರಸಾದಕ್ಕಿದೆ

ಈ ಅಜ್ಞಾನಿಗಳ ಲೋಕದಲ್ಲಿ 

ನೆರಳು ಕೊಟ್ಟು ತಂಪನೀವ

ನಿನ್ನನ್ನೇ ಸುಡುವ ಸೂರ್ಯನತ್ತ ತಳ್ಳಿ

ಪ್ರವೇಶ ನಿಷಿದ್ಧವೆಂದರು


ವರುಷವೆಲ್ಲಾ ದಂಡಿಸಿದ ದೇಹಕ್ಕೆ

ದೇವರ ದಯೆಯೂ ಇಲ್ಲ

ದಾರಿದ್ರ್ಯವಂತೂ ತಪ್ಪಿಲ್ಲ

ಕಲ್ಲು ಗುಡಿಯ ಕಟ್ಟಿ ಕೊಳ್ಳೆ

ಹೊಡೆವವರಿಗಿಲ್ಲದ ಮಡಿ

ನಿನಗೆ ತಂದು ಪ್ರವೇಶ ನಿಷಿದ್ಧವೆಂದರು




Rate this content
Log in

Similar kannada poem from Tragedy