ಒಲವಿನ ಹೂಗಳು
ಒಲವಿನ ಹೂಗಳು

1 min

51
ಮನಸೆಂಬ ಬನದೊಳಗೆ
ಅರಳಿದ ರಂಗಿನ ಭಾವದ ಹೂಗಳು
ಕಾಯುತ್ತಿದ್ದವು ಪ್ರೀತಿಯ
ಮಳೆಯ ಹನಿಗಾಗಿ ಬಾಯಾರಿ
ಒಮ್ಮೆಲೇ ಬಂದ ಭಾರೀ ವರ್ಷಧಾರೆಗೆ
ನಲುಗಿದವು ನನ್ನ ಮನದೊಳಗಿನ
ಒಲವಿನ ಹೂಗಳು ಮುದುಡಿದವು,
ಬಾಗಿದವು ಕೊನೆಗೆ ಬಾಡಿದವು
ನೆಲವನಪ್ಪಿದವು ಮಣ್ಣೊಳಗೆ
ಹೂತು ಮಾಯವಾದವು.