Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Pushpa Prasad

Romance Classics Others

4  

Pushpa Prasad

Romance Classics Others

ನಲ್ಲ

ನಲ್ಲ

1 min
2


ನಲ್ಲ,

ನಿನಗಿದೆಲ್ಲಾ

ಅರ್ಥವಾಗುವುದಿಲ್ಲ !!


ಅಂತರಾಳದಲೆಲ್ಲೋ

ಹುದುಗಿದ

ನೋವಿನ ಸೆಲೆ

ಮಡುಗಟ್ಟಿ 

ಬಿಕ್ಕಳಿಸುತ್ತಿದೆ!!


ಮೃದುವಾಗಿ ಎದೆಗಿತ್ತ

ಗುದ್ದನ್ನೆಲ್ಲಾ ಸಹಿಸಿ 

ನಿಟ್ಟುಸಿರು ನುಂಗುತ್ತ,

ಸಾಯಲಾಗದೆ

ಬದುಕಿದೆ ಆಗ!!


ನೀನಾದರೂ

ಸಂತೈಸಿ

ಮರು ಜೀವ

ಕೊಡುವೆಯೆಂದರೆ 

ನಲ್ಲ, ನಿನಗಿದೆಲ್ಲ

ಅರ್ಥವಾಗುವುದೇ ಇಲ್ಲ!!


ನೋವುಗಳ ಮಡು

ಕತ್ತಲಾಗಿ ಕಾಡುತಿದೆ

ಮಣ್ಣಿನಡಿ ಸಿಲುಕಿ

ಕನಸೆಲ್ಲಾ ಕಣ್ಮರೆಯಾಗಿದೆ!!


ಆಳ ಹೊಕ್ಕು

ನೋಡಲೆಂದರೆ

ಹೂತು ಹೋಗುವ ಅಂಜಿಕೆ 

ಸುಮ್ಮನೆ

ಮೌನದೊಳಗಿನ 

ರಿಂಗಣ !!

 

ನೀ

ಮತ್ತೆ ಮತ್ತೆ ಕಾಡುತ್ತಿರುವೆ 

ಏನಾಗಿದೆ ನಿನಗೆ ?

ನಾ ಮೌನದಲೇ ಉಸುರಿದೆ

ನಲ್ಲ, ನಿನಗಿದೆಲ್ಲ

ಅರ್ಥವಾಗುವುದೇ ಇಲ್ಲ!!


Rate this content
Log in

Similar kannada poem from Romance