STORYMIRROR

Pushpa Prasad

Romance Others

3  

Pushpa Prasad

Romance Others

ಬಯಸಿದೆ ನಿನ್ನನೇ

ಬಯಸಿದೆ ನಿನ್ನನೇ

1 min
7


ಈ ಕಣ್ಗಳು ನಿನ್ನನ್ನು ಮೊದಲ 
ಬಾರಿ ನೋಡಿದ ವೇಳೆ
ನಿನ್ನಯ ಹೆಸರನೆ ಸೂಚಿಸಿವೆ 
ಬಾಳ ಪುಸ್ತಕದ ಹಾಳೆ!!

ಬಯಸಿದೆ ತಡ ಮಾಡದೆ  
ಹೃದಯವು ನಿನ್ನನ್ನು ಈಗಲೇ 
ಹೆಜ್ಜೆಯ ಇಡುತ್ತ ಇಡುತ್ತ 
ಕಿರುಬೆರಳುಗಳು ತುಸು ತಾಗುತ್ತಲೇ!! 

ಈ ಅದ್ಭುತ ನಿನ್ನಯ ಪ್ರೀತಿಗೆ 
ನಾ ತಲೆ ಬಾಗಲೇ
ಕಣ್ತುಂಬ ನಿನ್ನ ಅಂದವ 
ಸವಿಯುತ್ತ ಕೂರಲೇ!! 

ಹಿಡಿಸಿದೆ ಹೃದಯಕೆ 
ನಿನ್ನ ಮಾತಿನ ಸರಳತೆ
ಕಾಡಿದೆ ಮನಸಿಗೆ 
ನೀ ಜೊತೆಗಿರದ ವಿರಳತೆ!!

ಸೋಕಿದೆ ಇಂದು ನನ್ನ ಬಾಳಿಗೆ 
ಪ್ರೀತಿಯ ಹೂವಿನ ಲತೆ
ಬೀಸಿದೆ ನನ್ನಯ ಮನಸಿಗೆ 
ಪ್ರೇಮದ ಹೂವಿನ ಚಾರುಲತೆ!!

✍️ ಪುಷ್ಪ ಪ್ರಸಾದ್ 

 



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance