Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Pushpa Prasad

Others

3  

Pushpa Prasad

Others

ನಾನೊಂದು ಕನಸು ಕಾಣಬೇಕು

ನಾನೊಂದು ಕನಸು ಕಾಣಬೇಕು

1 min
6


ಕಾಣಬೇಕು ನಾನೊಂದು 
ಕನಸನ್ನು ಕಾಣಬೇಕು
ಬಾನಲ್ಲಿ ನಾ ಹಾರಾಡಬೇಕು
ಅದಕ್ಕೆ ನನಗೆ ರೆಕ್ಕೆಗಳು ಬೇಕು
ಗರಿಬಿಚ್ಚಿ ತೇಲಾಡಬೇಕು!!

ತೇಲಾಡುತ್ತಾ ನಾನು 
ಮೋಡದಿಂದಿಳಿಯುವ 
ಮಳೆಯಾಗಬೇಕು ನಾನು 
ಭುವಿಯ ಸೇರುವ 
ತವಕ ಅನುಭವಿಸಬೇಕು!!

ಭುವಿಗಿಳಿಯುತ್ತಾ ಪ್ರಕೃತಿ 
ಸೌಂದರ್ಯವ ಸವಿಯಬೇಕು
ಸೌಂದರ್ಯವ ಸವಿಯುತ್ತಾ 
ನಾನೇ ಪ್ರಕೃತಿಯಾಗಬೇಕು
ತೇಲುವ ಹೂವಿನ 
ಸುಗಂಧವಾಗಬೇಕು!!

ತೇಲುತ್ತಾ, ಹಾರುತ್ತಾ 
ಹಕ್ಕಿಗಳ ಕಲರವ ನಾನಾಗಬೇಕು
ಎಲ್ಲವೂ ನಾನಾಗಬೇಕು
ಹೃದಯ ಹೊಮ್ಮಿಬರಬೇಕು
ನಾನು ಕನಸು ಕಾಣಬೇಕು 
ಕನಸನ್ನು ನನಸಾಗಿಸುತ್ತಾ ಸಾಯಬೇಕು!!

✍️ ಪುಷ್ಪ ಪ್ರಸಾದ್ 


Rate this content
Log in