STORYMIRROR

Pushpa Prasad

Others

3  

Pushpa Prasad

Others

ಚಹದ ಗಮ್ಮತ್ತು

ಚಹದ ಗಮ್ಮತ್ತು

1 min
3

ಚಹ ಬೇಕಾ ಚಹ 
ಇದು ಮಸಾಲೆ ಚಹ 
ಯಾಲಕ್ಕಿ ಚಹ, ಶುಂಠಿ ಚಹ 
ಅಮ್ಮನು ಮಾಡಿದ ಚಾಕೊಲೇಟ್ ಚಹ!!

ಒಲೆ ಮೇಲೆ ಪಾತ್ರೆ ಇಟ್ಟು 
ನೀರು ಹಾಕಿ ಚಹ ಪುಡಿ ಹಾಕಿ 
ಚಹ ಪುಡಿ ಜೊತೆ ಮಸಾಲೆ ಹಾಕಿ
ರಸ ಬಿಡುವ ತನಕ ಕುದಿಸಬೇಕು ಚಹ!!

ಹಾಗೆ ಯಾಲಕ್ಕಿ ಶುಂಠಿ ಕುಟ್ಟಿ 
ನೀರಿಗೆ ಸ್ವಲ್ಪ ಸಕ್ಕರೆ ಹಾಕಿ ಕುದಿಸಿ 
ನಿಂಬೆಹಣ್ಣಿನ ರಸ ಸೇರಿಸಿ ಮಿಂಟ್ ಹಾಕಿ
ದಿನಾ ಬೆಳಗ್ಗೆ ಸಂಜೆ ಒಂದು ಕಪ್ ಕುಡಿಬೇಕು!! 

ಮನೆಗೆ ಯಾರಾದ್ರು ಬಂದ್ರೆ ಸಾಕು
ಅಂಗಳದಲ್ಲಿ ಬೆಳೆದ ಪುದಿನ ಎಲೆ ಇದ್ದು
ಒಂದೆರೆಡು ಎಲೆ ಚಹದೊಂದಿಗೆ ಸೇರಿಕೊಂಡು 
ಬಂದ ಅತಿಥಿಗಳಿಗೆ ನೀಡಿದರೆ ಸ್ವರ್ಗಲೋಕದ ಚಹ!!

ನನ್ನ ಗೆಳೆಯ ಒಬ್ಬ ವಿದೇಶದಿಂದ ಬಂದ ನೋಡಿ 
ನಮ್ಮಮ್ಮ ಒಂದು ಲೋಟ ನಿಂಬೆ ಚಹ ಕೊಟ್ಟಳು 
ಅವ ಹೇಳಿದ ಅಮ್ಮ ನಾನು ಇಲ್ಲೇ ಇದ್ದುಬಿಡುವೆನು 
ಈ ಚಹ ಕುಡಿದು ಇಲ್ಲೇ ಹಾಯಾಗಿ ಸ್ವರ್ಗವನ್ನು ಕಾಣುವೆ!!

✍️ ಪುಷ್ಪ ಪ್ರಸಾದ್ 


Rate this content
Log in