Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Pushpa Prasad

Others

3  

Pushpa Prasad

Others

ಅವಳೊಬ್ಬಳು ಹೆಣ್ಣು

ಅವಳೊಬ್ಬಳು ಹೆಣ್ಣು

1 min
2


ನಗುವ ಹಿಂದೆ ತನ್ನೊಳಗಿನ
ನೋವುಗಳನ್ನೆಲ್ಲ ಬಚ್ಚಿಡುವವಳು
ಹೊರಗೆ ನೋಡಲು ಬಲು
ಬಜಾರಿಯಾಗಿ ತೋರುವವಳು!!

ನೂರೆಂಟು ಸಮಸ್ಯೆಗಳ
ಹೊತ್ತು ಹೆಣಗುವವಳು
ಏನನ್ನೂ ಹೇಳಿಕೊಳ್ಳಲಾರದ
ಸಂಕೋಚವ ಹೊತ್ತವಳು!!

ಕೆಲವು ವೇಳೆಯಲ್ಲಿ ನನ್ನ ಮಾತು
ಕೇಳಿಸಿಕೊಳ್ಳುವವರ ಅಗತ್ಯವಿರುವವಳು
ನನ್ನನ್ನು ಸಂತೈಸಲು ಹೃದಯವಂತರು
ಇರಲಿ ಎಂದು ಹಂಬಲಿಸುವವಳು!!

ತನ್ನ ಸಮಸ್ಯೆಗಳಿಗೆ ಕರಗುವ ತಾಯ
ಕರುಳು ಇರಲಿ ಎಂದು ಕರುಬುವವಳು
ತಾನು ಅಳುವಾಗ ತನ್ನ ಕಣ್ಣಾಲಿಗಳ ನೀರನ್ನು
ಒರೆಸುವವರು ಬೇಕೆಂದು ಮರುಗುವವಳು!!

ತನ್ನನ್ನು ಪ್ರೀತಿಸುವ ಹೃದಯ ಬೇಕೆಂದು
ದೇವರಲ್ಲಿ ಪ್ರಾರ್ಥಿಸುವವಳು
ಯಾರಿಗೂ ತಿಳಿದಿಲ್ಲ ಅವಳ ನೈಜ ಆಂತರ್ಯ
ಯಾರಿಗೂ ತಿಳಿದಿಲ್ಲ ಅವಳ ದಿನನಿತ್ಯದ ಬವಣೆಗಳು!!

ಯಾರಿಗೂ ತಿಳಿದಿಲ್ಲ ತೆವಳಿ ಸವೆಸುವ ಹಾದಿ
ಯಾರಿಗೂ ತಿಳಿದಿಲ್ಲ ತನ್ನನ್ನು ತಾನೇ ಮರೆತವಳು
ದಿನವೂ ಅಳುತ್ತಾ ರಾತ್ರಿ ನಿದ್ದೆಯ  ಕರೆವವಳು
ತನ್ನ ತನವನ್ನೆಲ್ಲಾ ಸೀಸೆಯೊಳಗೆ ಬಂಧಿಸಿರುವವಳು!!

✍️ ಪುಷ್ಪ ಪ್ರಸಾದ್



Rate this content
Log in