STORYMIRROR

Pushpa Prasad

Romance Others

3  

Pushpa Prasad

Romance Others

ಪ್ರೇಮ ಸುಧೆ

ಪ್ರೇಮ ಸುಧೆ

1 min
11

ಕಿವಿಯಲ್ಲಿ ನೀ ಪಿಸುಗುಟ್ಟಿದ 
ಪ್ರೀತಿ ಎಂಬ ಎರಡಕ್ಷರವ ಕೇಳಿ 
ನಿನ್ನ ಸುಮಮಧುರ ಸ್ವರದೊಂದಿಗೆ 
ಈ ಮನ ರೋಮಾಂಚನಗೊಂಡಿತು!!

ನಾವಿಬ್ಬರು ಜೊತೆಗೂಡಿ ನಡೆದಾಗ
ನಿನ್ನ ಕೈಯ ಸ್ಪರ್ಶವಾಗಿ 
ಏನೋ ಒಂದು ಕಂಪನ
ಮನವೆರಡು ಬೆರೆತಂತ ಆ ಕ್ಷಣ!!

ಹೆಗಲಲ್ಲಿ ಕೈಯಿಟ್ಟು ನೀ ನನ್ನ ಬರಸೆಳೆದು 
ನನ್ನ ನಡು ಹಿಡಿದು ಅಪ್ಪಿ ತಬ್ಬಿದಾಗ
ನಾ ನಿನ್ನ ಮೊಗವ ನೋಡಲಾರದೆ 
ನಾಚಿ ನೀರಾಗಿ ಹೋದೆ!!

ಎದೆಬಡಿತ ಜೋರಾಗಿ
ಬಿಸಿಯುಸಿರು ಹಿತವಾಗಿ
ನನ್ನ ಎದೆಯಲಿ 
ನೀ ಅವಿತು ಹೋದೆ!!

ಏಕೆಂದು ತಿಳಿಯದು 
ದಿನವಿಡೀ ನಿನ್ನದೇ ಚಿಂತೆ
ಓಡುವ ಮನವನ್ನು, ಹಾರುವ ಕಣ್ಣುಗಳನ್ನು
ನೀ ತಡೆದು ನಿಲ್ಲಿಸಿದೆ!!

ಪ್ರೀತಿಯೆಂಬ ದಾರದಲ್ಲಿ ಬಂಧಿಸಿ
ಒಲವ ಮಳೆ ಸುರಿಸಿ 
ತಂಪಾದ ಗಾಳಿ ಬೀಸುತಲಿ 
ನೀ ಪ್ರೇಮ ಸುಧೆಯ ಹರಿಸಿದೆ!!

✍️ ಪುಷ್ಪ ಪ್ರಸಾದ್


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance