ಅವರು -ಇವರು
ಅವರು -ಇವರು
ನಗುವ ಮೊಗವೊಂದು
ಔಷಧಿಯು ಮನಕೆ
ನೂರಾರು ಕಷ್ಟಗಳ
ಹಾಕುವುದು ಹೊರಗೆ!!
ನಂಬಿಕೆ ಎಂದೆಂದೂ
ಇರಲಿ ಸರಿಯಾದ ದಾರಿಯಲಿ
ಸತ್ಯ ಮಾರ್ಗವ ಬಿಟ್ಟು
ಹೋಗದಿರಲಿ ಪರದಾರಿಗೆ ಎಂದೂ !!
ಅಂದು ನೀನ್ಯಾರೋ ನಾನ್ಯಾರೋ
ತಿಳಿದಿರಲಿಲ್ಲ ಯಾರಿಗೂ
ಇಂದು ನಮ್ಮ ನಡುವೆ ಹಬ್ಬಿದೆ
ಸ್ನೇಹವೆಂಬ ಹೂಬಳ್ಳಿ!!
ಸ್ನೇಹಕ್ಕೆ ಮಾಡದಿರೆಂದೂ
ಕನಸಿನಲ್ಲಿಯೂ ವಂಚನೆ
ಆತ್ಮಕ್ಕೆ ವಂಚಿಸಿ ನಡೆದರೆ
ಮುಂದಿದೆ ಬಹು ದೊಡ್ಡ ದಂಡನೆ!!
ಅನ್ಯರ ಬಗ್ಗೆ ನೀ
ನುಡಿಯದಿರು ಮಿತ್ಯ
ಸಿಗಲಾರದು ನಿನಗೇನೇನ
ೂ
ಸುಳ್ಳನ್ನು ನುಡಿದರೂ ನಿತ್ಯ!!
ನಿನ್ನ ಊಹೆ ನಿನಗೆ
ಸಂತಸ ನೀಡಬಹುದಿಂದು
ಮರೆಯದಿರು ಆ ಕೆಟ್ಟ ಅಮಲಲ್ಲಿ
ನಿನ್ನತನ ಮಣ್ಣಾಗುವುದೆಂದು!!
ನಿನ್ನ ನಡೆ ನುಡಿಯು
ನಿನ್ನ ಗುರಿಯ ಕಡೆಗೆ ಮಾತ್ರ ಇರಲಿ
ಹೋದ ನಂಬಿಕೆ ಮತ್ತೆಂದೂ
ಬಾರದು ಮನಸಿಗೆ ಮರಳಿ!!
ನೇರ ನುಡಿಯುವವನಿಗಿದೆ
ಕಷ್ಟದ ಸರಮಾಲೆ
ಕೊನೆಗೆ ಸಿಗುವುದು ಸತ್ಯಕ್ಕೆ ಜಯ
ಅದಕ್ಕಿಲ್ಲ ಯಾವುದೇ ಲೀಲೆ!!
ಇದ್ದಷ್ಟು ದಿನ ಮಾತ್ರ
ನಲಿವು-ನೋವಿನ ಮರುಕ
ನನ್ನ ಬಾಳಲಿ ಬಂದಿರುವ
ಅವರೂ ಇವರೂ ಎಲ್ಲವೂ ಕ್ಷಣಿಕ!!
✍️ಪುಷ್ಪ ಪ್ರಸಾದ್