STORYMIRROR

Pushpa Prasad

Others

3  

Pushpa Prasad

Others

ಹಾಯ್ಕುಗಳು

ಹಾಯ್ಕುಗಳು

1 min
9

ಬಿಸಿಲ ಉರಿ 
ದಿನದಿಂದ ದಿನಕ್ಕೆ 
ಹೆಚ್ಚಾಗುತಿದೆ!!

ಬೇಸಿಗೆಯಲ್ಲಿ 
ಬಿಸಿಲಿನ ಧಗೆಯು 
ಹೆಚ್ಚುತಲಿದೆ!!

ಬಿಸಿಲ ಬೇಗೆ 
ಬಂದು ಅಪ್ಪಳಿಸಿದೆ 
ನಮ್ಮ ನಾಡಿಗೆ!!

ಬೇಸಿಗೆಯಲ್ಲಿ 
ಪ್ರಾಣಿ ಪಕ್ಷಿಗಳಿಗೆ 
ನೀರು ಅವಶ್ಯ!!

ಸೂರ್ಯನ ತಾಪ 
ಹೆಚ್ಚಿ ಗಿಡಮರವು 
ಒಣಗುತ್ತಿದೆ!!

ಉರಿ ಬಿಸಿಲು 
ಹೆಚ್ಚಾಗಿ ಹಳ್ಳಕೊಳ್ಳ 
ಬತ್ತಿಹೋಗಿದೆ!!

ಪೋಲು ಮಾಡದೆ 
ನೀರನ್ನು ಸಂರಕ್ಷಣೆ 
ಮಾಡಬೇಕಿಂದು!!

ಮಿತವಾಗಿಯೇ 
ಬಳಸಬೇಕು ನಾವು 
ನೀರನ್ನು ಇಲ್ಲಿ!!

ಬಾಯಾರಿಕೆಯು 
ಅತೀಯಾಗಿದೆ ಇಂದು 
ಬಿಸಿಲಿನಲಿ!!

ಬೇಸಿಗೆ ಸೆಕೆ 
ಧಗ ಧಗಿಸುವುದು 
ಬಿಸಿಲು ಜೋಕೆ!!

ಬಿಸಿಲ ತಾಪ 
ತತ್ತರಿಸಿದೆ ಧರೆ 
ಮಳೆ ಇಲ್ಲದೆ!!

ಸುಟ್ಟು ಹೋಗುವ 
ಮುನ್ನ ಇಳೆಗೆ ಬೇಕು 
ತಂಪಾದ ಮಳೆ!!

✍️ ಪುಷ್ಪ ಪ್ರಸಾದ್  ಉಡುಪಿ 


Rate this content
Log in