ನೀನಿಲ್ಲದ ಹೊತ್ತು*****
ನೀನಿಲ್ಲದ ಹೊತ್ತು*****
ನೀ ಎದುರಿಗಿಲ್ಲದಿದ್ದರೂ ನಾ ಅನುಭವಿಸಬಲ್ಲೆ ಮನದಲ್ಲೇ
ನಿನ್ನೊಳಗಿನ ಬಿಸಿ ಉಸಿರ ಒಲವ ತಾಪಕೆ ನಾ ದಹಿಸಬಲ್ಲೆ
ಭಾವನೆಗಳ ಮಳೆಯಲಿ ತೊಯ್ದು ಕವಿತೆ ಗೀಚಬಲ್ಲೆ
ನಿನ್ನ ಕಣ್ಣ ಭಾಷೆಯ ಪದಗಳಿಗೆ ರಾಗ ಹೊಮ್ಮಿಸಬಲ್ಲೆ
ನೀನಿಲ್ಲದ ಹೊತ್ತು ಸಹ ಸವಿದ ಮುತ್ತುಗಳ ಎಣಿಸಬಲ್ಲೆ
ನೀಬಿಟ್ಟ ಕುರುಹುಗಳ ಸವರಿ ಮತ್ತಿನಲಿ ಕರಗಬಲ್ಲೆ
ನಾನಿರಬಲ್ಲೆ ನಲ್ಲಾ ನಿನ್ನ ಇರವ ಬಿಟ್ಟು ಮನಕೆ ಹತ್ತಿರವಾಗಿ
ನನ್ನ ಬಿಟ್ಟಿರಲಾರೆಯೆಂದು ಬಲ್ಲೆ ನಾನು ಅದಕೇ ಈ ಪೀಟಿಕೆ
ಗಲ್ಲ ಅರಳಿ ಹುಸಿನಗೆ ಮೂಡಿತು ನೋಡು ನಿನ್ನೊಳಗೆ
ಮೆಲ್ಲನೆ ತಾಗಿತದು ನನ್ನೆದೆಯ ವೀಣೆ ತಂತಿಯ ಮೀಂಟಿ...
ಸಲ್ಲದು ನಲ್ಲಾ ಈ ದೂರ ಒಲ್ಲದ ಬದುಕಿಗೆ ಬಲುಭಾರ
ಕಲ್ಲು ಕೂಡ ಕರಗುವುದು ನನ್ನೀ ಹೃದಯ ಪ್ರೀತಿ ಸಾಗರ..

