ನಗು
ನಗು


ಕಣಿವೆ ಅಂಚಲಿ ಕೊಂಚ ಚಿಲಿಪಿಲಿ,
ಹೃದಯ ನೀಡಿದೆ ಅಂದು ಪ್ರೀತಿ
ಉಸ್ತುವಾರಿಯ ಮಾಮೂಲಿ...
ಮರಳಿ ಬಯಸಿ ನನ್ನ ನಗಿಸಿ
ಸೇರಿದೆ ನಿನ್ನಲಿ, ಕಂಡು ಕಾಣದ
ನಿನ್ನ ನೋಟವೆ ರುಜುವೆನ್ನ ಮನದಲಿ...
ತರಲೆ ಮಾತಲಿ ಹಲವು ಮುಗ್ದ ಮುತ್ತಿವೆ,
ನೀರಿಕ್ಷಿಸಿದೆ ನಯನ ನಿನ್ನ ಜೀವವ
ಸದಾ ಪ್ರೀತಿ ಹಂಗಲಿ...
ನಡೆದೆ ಜೊತೆಯಲಿ ನಗುತ
ಕನಸಲಿ ಕ್ಷಣ ನನಸಲಿ,
ಪುಟ್ಟ ಪುಟ್ಟ ಸಂಭ್ರಮಗಳು
ಮೋಡಿ ಮಾಡಿದೆ ನನ್ನಲಿ...