ಮೌನವೇ ಸಂಜೀವಿನಿ
ಮೌನವೇ ಸಂಜೀವಿನಿ


ನೋವಿಗೆ ಪರಿಹಾರವಾಗದಿರುವಾಗ
ಭಾವನೆಗಳಿಗೆ ಸ್ಪಂದಿಸದಿರುವಾಗ
ಮಾತಲ್ಲಿ ಹೇಳಲಾಗದ್ದು ಅಷ್ಟಿರುವಾಗ
ಬರೀ ಪ್ರಶ್ನೆಗಳೇ ಉಳಿದಿರುವಾಗ
ತೋರಿಕೆಯ ಮಾತದೆಷ್ಟು ಅಸಹನೀಯ!
ನಿಷಬ್ಧದಲಿ ಮನಸಿನಾಳಕೆ ಇಳಿದು
ತನುವ ಸಂತೈಸುವ ಕೇಳಿಸದ
ಮೌನವೇ ಎಲ್ಲ ಪ್ರಶ್ನೆಗೂ ಉತ್ತರ
ಮೌನವೆಂಬುದು ಅದೆಷ್ಟು ಸಹನೀಯ!