ಕಲ್ಪನೆ!
ಕಲ್ಪನೆ!


ಶಿಲ್ಪಿಯ ಕಲ್ಪನೆಯಲಿ
ಕಗ್ಗಲ್ಲು ಶಿಲ್ಪವಾಯಿತು!
ಬಡಗಿಯ ಕಲ್ಪನೆಯಲಿ
ಕೊರಡು ನೇಗಿಲಾಯಿತು!
ಕಮ್ಮಾರನ ಕಲ್ಪನೆಯಲಿ
ಕಬ್ಬಿಣ ಕುಳವಾಯಿತು!
ಕುಂಬಾರನ ಕಲ್ಪನೆಯಲಿ
ಜೇಡಿಮಣ್ಣು ಮಡಕೆಯಾಯಿತು!
ಹೆಣೆಗಾರನ ಕಲ್ಪನೆಯಲಿ
ಬಿದಿರು ಬುಟ್ಟಿಯಾಯಿತು!
ಚಮ್ಮಾರನ ಕಲ್ಪನೆಯಲಿ
ಚರ್ಮ ಚಪ್ಪಲಿಯಾಯಿತು!
ರೈತನ ಕಲ್ಪನೆಯಲಿ
ಭತ್ತ ಪೈರಾಗಿ ಲೋಕಕೆ ಅನ್ನ ನೀಡಿತು!
ಕವಿಯ ಕಲ್ಪನೆಯಲಿ
ಇವರೆಲ್ಲ ಸೇರಿ ಕವಿತೆಯಾಯಿತು!