ಬಂಧನದಲ್ಲಿ...
ಬಂಧನದಲ್ಲಿ...

1 min

121
ಬಿಡ್ತೀವಿ ಬೇಕಾದ್ರೆ ಒಂದೊತ್ತೂಟ
ಇರಾಂಗಿಲ್ಲ ಇಲ್ಲದೇ ಮೊಬೈಲ್ ಡೇಟಾ!
ಪ್ರಪಂಚದ ಸುದ್ದಿಯೆಲ್ಲಾ ನಮಿಗೊತ್ತು
ಪಕ್ಕದ್ಮನೆಯವರ ಹೆಸರೊಂದು ಬಿಟ್ಟು!
ಬಸ್ಸಲ್ಲಿ ಕೂತಾಗ್ಲು ರಸ್ತೆ ದಾಟ್ವಾಗ್ಲು
ಊಟಕ್ಕೂತಾಗ್ಲು ಸುಮ್ನೆ ನಿಂತಾಗ್ಲು
ಕೇಳ್ತೀವಿ ನೋಡ್ತೀವಿ ಮಾತಾಡ್ತೀವೀ
ಆದ್ರೆ ಪಕ್ಕ ಕೂತಿರೋರ್ನೆ ಮರಿತೀವಿ!
ಮೊಬೈಲೆಂಬ ಜೈಲಿನೊಳಗೆ ನಾವು ಬಂಧಿ
ವಾಟ್ಸಪ್ ಫೇಸ್ಬುಕ್ಗಳೇ ಎಣಿಸ್ತೀರೋ ಕಂಬಿ
ತಲೇಲಿರೋದು ಬರೀ ದ್ವಂದ್ವದ ದೊಂದಿ
ನಮ್ಮ ತಲೇಲಿದ್ದ ಬುದ್ಧಿ ಚಿಂದೀ ಚಿಂದಿ !