ದಿಯಾ
ದಿಯಾ


ದೊರೆಯದಾಯಿತು ಮೊದಲ ಪ್ರೀತಿ
ಮರೆಯದಾಯಿತು ಆ ನೋವು
ನೊಂದ ಹೃದಯವದು ನಿಂತಿತು
ಬರುವ ರೈಲಿಗೆ ಇದಿರಾಗಿ!
ರೈಲ ಹಳಿಯಂತೆ ನೇರವಾಗಿಹುದು
ಸಂಕುಚಿತ ಮನಸಿನ ಆ ಭಾವ!
ಕಣ್ಣು ಮುಚ್ಚಿತು ನೋಡಲಾರದೆ
ಎದುರು ಬರುತಿರುವ ಆ ಸಾವ!
ನೆನಪಿನಾಳದಲಿ ತಿರುಗಿತು ಮನಸು
ನಲಿದ ಕ್ಷಣಗಳ ನೆನೆ ನೆನೆದು
ನೋವ ಕ್ಷಣವದು ಇದಿರಿಗೆ ಬರಲು
ಕಣ್ಣು ತೆರೆಯಿತು ನಡುಕದಲಿ!
ಎದುರು ಬರುತಿಹ ರೈಲು ನೋಡಲು
ಕೀರುವ ಅದರ ದನಿಯ ಕೇಳಲು
ಮನವು ಕಂಪಿಸಿತು ಒಂದಿನಿತು!
ಸಾವ ಭಯಕೆ ಅಂಜಿದ ಜೀವ ಪಕ್ಕಕೆ ಜಿಗಿದಿತ್ತು!
ಕಣ್ಣು ಬಿಡಲು ರೈಲದು ಚೀರುತ ದೂರ ಹೋಗಿತ್ತು!