ದೇವರುಗಳೆಂದರೆ..?
ದೇವರುಗಳೆಂದರೆ..?


ಕೊರೊನ ಎಂಬ ವೈರಸ್ ಬರಲು
ಜನ ಹೆದರಿ ಹೊರಬರದೆ ಒಳಗೆ ಉಳಿದರು
ದೂರ ಪ್ರಯಾಣ ನಿಲ್ಲಿಸಿದರು
ಮನೆಯಿಂದಲೇ ಕೆಲಸ ಮಾಡಿದರು!
ದೇವಾಲಯಗಳಿಗೆ ನಿರ್ಬಂಧ ಹೇರಿದರು!
ಸುಳ್ಳು ಸೇರಿಸಿ ಬಿತ್ತರಿಸಿದರು ಮಾಧ್ಯಮದವರು!
ಆದರೆ...!!
ತಮ್ಮ ಜೀವದ ಹಂಗು ತೊರೆದಿಹರು
ಬಂದ ರೋಗಿಗಳಿಗೆ ಧೈರ್ಯ ಹೇಳುತಿಹರು
ಹಗಲು ರಾತ್ರಿ ಎನ್ನದೆ ಆರೈಕೆ ಮಾಡುತಿಹರು
ಅಸಹಾಯಕರಾದಾಗ ಕಣ್ಣೀರು ಸುರಿಸಿದರು
ಕೆಲವೊಮ್ಮೆ ತಮ್ಮ ಪ್ರಾಣವನ್ನೇ ಬಿಟ್ಟರೂ!!
ಆದರೂ ಹೆದರದೆ ,ಎದೆಗುಂದದೆ
ಎದೆಯಾಳದ ನೋವ ಸಹಿಸುತಾ
ತಮ್ಮ ವೃತ್ತಿ ಧರ್ಮವ ಮೆರೆಯುತಿಹರು
ವೈದ್ಯರು ಮತ್ತೂ ಶುಶ್ರೂಷಕರು(ಸಹಾಯಕರು)
ಇವರೇ ಅಲ್ಲವೇ ನಿಜ ದೇವರುಗಳೆಂದರೆ...?