ಕಣ್ಸನ್ನೆ
ಕಣ್ಸನ್ನೆ
ನಿನ್ನ ಮೊದಲ ಥಟ್ಟನೆಯ ನೋಟ,
ನಾಚಿಕೆಯ ಪ್ರತಿಬಿಂಬಕ
ಹೃದಯ ಬಡಿತದ ಸೂಚ್ಯಂಕ...
ಕಾಣದಿರಲು ಕನವರಿಸಿ
ಕಾಣಸಿಗಲು ಮನವೊರೆಸಿ,
ಕಾಯುತ ಪ್ರೀತಿಗೆ ಕಣ್ಣೊರೆಸುದೆ ಕಾಯಕ...
ಪಂಕ್ತಿ ಮರೆತ ಮನಃ ಬಡಿತ ಸೇರಿದೆ
ನಿನ್ನ ನಗುವಿನ ತೋಳನು,
ವರ್ಣನೆಗಂದೆ ನಾನಾದೆ ನೇಮಕ...
ಅಳಿಯದೆ ಉಳಿಯಿತು ಹೆಜ್ಜೆ ಗುರುತುಗಳು,
ಮರಳಿ ನಡೆಯಲಾರೆ ಹುಡುಕುತ ನೆಮ್ಮದಿಯ ಫಲಕ...
💛❤