ಕಲ್ಪನೆಯಲ್ಲೇ ಚಂದ
ಕಲ್ಪನೆಯಲ್ಲೇ ಚಂದ
ಅವನು ನನ್ನನ್ನು ಪ್ರೀತಿಸಲಿ ಎಂದು ನಾನು ಅವನನ್ನು ಪ್ರೀತಿಸಿಲ್ಲ,
ನನಗಾಗಿ ನಾನು ಅವನನ್ನು ಪ್ರೀತಿಸುವೆ...
ಅವನು ನನಗಾಗಿ ಸಮಯ ನೀಡಲಿ ಎಂದು ನಾನು ಕಾಯುವುದಿಲ್ಲ,
ಅವನಿಗಾಗಿ ಕಾಯುವುದೇ ನನ್ನ ಸಿಹಿಯಾದ ಕಾಯಕ...
ಅವನು ನನ್ನ ಜೊತೆಗೆ ಜೀವನ ಕಳಿಯಲಿ ಎಂದು ಕೇಳುವುದಿಲ್ಲ,
ಅವನ ನೆನನಪಲ್ಲೇ ಇಡೀ ಜೀವನ ಕಳೆಯುವುದೇ ನನ್ನ ಬಯಕೆ..
ಕಲ್ಪನೆಯಲ್ಲೆ ಹಿತವಾಗಿ ಅವನು ಜೊತೆಯದಾಗ...
ವಾಸ್ತವದಲ್ಲಿ ಅವನ ಉಪಸ್ಥಿತಿಯು ನನಗೆ ಬೇಕಿಲ್ಲ..
