ಮಾತನಾಡಿರಿ ಕನ್ನಡ
ಮಾತನಾಡಿರಿ ಕನ್ನಡ
ಓದಿರಿ ಕನ್ನಡದ ಪುಸ್ತಕವನ್ನು
ಮಾತನಾಡಿರಿ ಕನ್ನಡ ನುಡಿಯನ್ನು
ಸಾರೋಣ ಎಲ್ಲೆಡೆ ಕನ್ನಡ ಕಂಪನ್ನು
ಎತ್ತಿ ಹಿಡಿಯೋಣ ಹಳದಿ, ಕೆಂಪು ಬಾವುಟವನ್ನು
ತೋರಿಸೋಣ ನಾಡ ನುಡಿಯ ಅಭಿಮಾನವನ್ನು
ನಮಿಸೋಣ ನೆಲ, ಜಲ ಭಾಷೆಗಿನ್ನೂ,
ಆದರಿಸೋಣ ಕನ್ನಡದ ಸಾಧಕರನ್ನು
ಪಸರಿಸೋಣ ಎಲ್ಲಡೆ ಕರ್ನಾಟಕದ ಕೀರ್ತಿಯನ್ನು
ಸತ್ಕರಿಸೋಣ ಕನ್ನಡದ ಪಂಡಿತರನ್ನು
ಉಳಿಸೋಣ ಕನ್ನಡ ನಾಡಿನ ಸಂಸ್ಕೃತಿಯನ್ನು
ಕಲಿಸೋಣ ಗೊತ್ತಿಲ್ಲದವರಿಗೆ ಕನ್ನಡ ಭಾಷೆಯನ್ನು
ಜೈ ಎನ್ನೋಣ ತಾಯಿ ಭುವನೇಶ್ವರಿಗೆ ನಾವಿನ್ನು.
