ರಂಗು
ರಂಗು
ನಿನ್ನ ಕಣ್ಣಿನ ತುಂಟ ನೋಟವೇ ಸಾಕು ನಾನು ರಂಗೇರಲು!
ಇನ್ಯಾಕೆ ಬೇಕು ಬೇರೆ ಬಣ್ಣಗಳು!
ನಿನ್ನ ಗುಂಗಿನಲ್ಲಿ ರಂಗು ರಂಗಾಗಿರುವ ನನ್ನ ಮುಂದೆ
ಕಾಮನಬಿಲ್ಲಿನ ಬಣ್ಣಗಳು ಕೂಡ ಕಡಿಮೆ ಎನಿಸುತ್ತವೆ!
ನಿನ್ನ ಮನಸ್ಸಲ್ಲಿ ವಿಧ ವಿಧವಾದ ಬಣ್ಣಗಳು ಇರುವಾಗ
ಕೃತಕ ಬಣ್ಣಗಳು ಬೇಡವಾಗಿವೆ!
ನಿನ್ನಲ್ಲಿರುವ ನನ್ನ ವರ್ಣಮಯವಾದ ಜಗತ್ತನ್ನು
ವರ್ಣಿಸಲು ನನಗೆ ಅಸಾಧ್ಯವಾಗಿದೆ!
ನಿನ್ನ ರಾಧೆ...

