ಹಠ
ಹಠ
ಮತ್ತದೇ ಹಠ ನನ್ನದು
ಅಚ್ಚಳಿಯದೆ ನಿನ್ನ ಮನದಲ್ಲಿ
ಗಟ್ಟಿಯಾಗಿ ಉಳಿಯುವುದು.
ಹಳೆಯ ನೆನಪುಗಳನ್ನು ಅಳಿಸಿ,
ನನ್ನನ್ನು ಮಾತ್ರ ನಿನ್ನ ಸ್ಮೃತಿ
ಪಟಲದಲ್ಲಿ ಉಳಿಸುವುದು...,
ಕೂಗಿ ಕೂಗಿ ಹೇಳಬೇಕು
ಈ ಜನುಮಕೆ ನೀನು ನನ್ನವನು...!
ಖಜಾನೆಯಂತೆ ಕುಡಿಟ್ಟುಕೊಳ್ಳಬೇಕು
ನನ್ನೊಳಗೆ ನಿನ್ನನ್ನು....,
ಆದರೆ ಇದೆಲ್ಲ ಆಗದ ವಿಷಯ,
ಕಲ್ಪನೆಯ ಕುದುರೆ ಏರಿ ಹೊರಟ ನನ್ನ ಮನವನ್ನು
ಸಂಭಾಳಿಸಲೋ..?
ನನ್ನಿಂದ ದೂರ ಹೋದ ನಿನ್ನ ಮನವನ್ನು
ಹಿಂಬಾಲಿಸಲೋ..?

