ಹೆಣ್ಣು
ಹೆಣ್ಣು
ಹೆಣ್ಣಿವಳು ನಿಮ್ಮ ಮನೆಯ ಅನಿಷ್ಟವಲ್ಲ,
ಮನೆ ಮನವ ಬೆಳಗುವವಳು ಮನೆಯ ಕಳಂಕವಲ್ಲ,
ತಂದೆ ತಾಯಿಯ ಮನದಿ ಪೂಜಿಸುವವಳು ಹೊರೆಯಲ್ಲ,
ಮನೆಯ ಅದೃಷ್ಟ ಇವಳು ಅಪಶಕುನವಲ್ಲ,
ಮನೆತನದ ಹೆಮ್ಮೆ ಇವಳು ಕಪ್ಪು ಚುಕ್ಕೆಯಲ್ಲ,
ನಿಮ್ಮ ಮಗಳಿವಳು ಭ್ರೂಣ ಹತ್ಯೆ ತಪ್ಪಿಸಿರಲ್ಲ,
ಸಮಾಜದ ಕಣ್ಣಿವಳು, ಕಾಮ ಪೈಶಾಚಿಕ ಕೃತ್ಯ ನಿಲ್ಲಿಸಿರಲ್ಲ,
ಸಾಧನೆಗೆ ಸ್ಪೂರ್ತಿ ಇವಳು ಎಂದಿಗೂ ಅಬಲೆಯಲ್ಲ.
