ಹೃದಯ ವೈಶಾಲ್ಯ
ಹೃದಯ ವೈಶಾಲ್ಯ
ಹೃದಯ ವೈಶಾಲ್ಯವಿರಬೇಕು
ಅದ್ಯಾರೊ ಮೈಕಲ್ಲಿ
ಮುನ್ನೂರು ಜನರೆದುರು
ಬಾಯಿಬಿರಿಯೆ ಭಾಷಣ ಬಿಗಿದ
ಸಭೆಯ ಸಂಚಾಲಕರು
ಆತನಿಗೆ ಕೊಡಬೇಕಾಗಿದ್ದ ಹಣ ಕೊಡುವಲ್ಲಿ
ತುಸು ವಿಳಂಬವಾಯಿತು ನೋಡಿ,
ಭಾಷಣಕಾರನ ಹೃದಯವೈಶಾಲ್ಯ
ಬರೀ ಭಾಷಣಕ್ಕಷ್ಟೇ ಸೀಮಿತವೆಂದು ಅರಿತ ಜನರು
ಕುರ್ಚಿ ಖಾಲಿ ಮಾಡಿ,
ಮನೆಯ ದಾರಿ ಹಿಡಿದರು!
