STORYMIRROR

Lakumikanda Mukunda

Fantasy

2  

Lakumikanda Mukunda

Fantasy

ಗೊಂಬೆ

ಗೊಂಬೆ

1 min
151

ನನ್ನ ಗೊಂಬಿ ಅಂದ ಚೆಂದದ ಗೊಂಬಿ

ನನ್ನ ಜೊತೆಯಾಡೂ ಗೊಂಬಿ..

ನಾನೇ ಎಲ್ಲ ಅದಕೆ,ಅದು ನನ್ನ ಬದುಕೆ

ನನ್ನಯ ಗೊಂಬಿ ಸಣ್ಣ ಗೊಂಬಿ..


ದಿನವು ನಾನು ಆಡುವೆ ಕೂಡಿ

ದುಃಖನ್ನೆಲ್ಲ ಆಚೆಗೆ ದೂಡಿ..

ಯಾರೂ ಇರದೆ ಇದ್ರೇನು,ನಂಗೆ

ಗೊಂಬಿನೇ ನನ್ನಯ ಜೋಡಿ.‌.


ಹಠವ ಮಾಡಲು,ತಿನ್ನದೆ ಮಲಗಿದೆ

ಶಿರಮೊಟಕಿ ಉಣಿಸಿ ರಮಿಸಿದೆ..

ವರವಿತ್ತು ಹರನೇ ಕರುಣಿಸು ಒಲವ

ಗೊಂಬೆಗೂ ಜೀವ ಬರಬೇಕಿದೆ..


ನನ್ನ ಗೊಂಬಿ ಸಣ್ಣಯ ಗೊಂಬಿ

ಬೇಲೂರ ಬಾಲೆ ಸೊಗಡಿದೆ ನಂಬಿ

ಆಹಾ ಎಂತ ಪುಳಕ,ಕೇಳೆನ್ನ ಜನಕ

ನನ್ನ ಚೆಂದುಳ್ಳ ಚೆಲ್ವೆಯ ಗೊಂಬಿ..


Rate this content
Log in

Similar kannada poem from Fantasy