ಬರುತ್ತಾನವನು...
ಬರುತ್ತಾನವನು...
ಹೃದಯದ ಬಾಗಿಲನು
ಮುಚ್ಚದಿರು ಗೆಳತೀ
ಮತ್ತೆ ಸೂರ್ಯ ಬರುವನು
ನೋವ ಮರೆಸುವನು
ಬದುಕು ಸಾಕೆಂದೆಣಿಸದಿರು
ಕೊರಗದಿರು ಅವಗೆ
ಪ್ರೀತಿ ಸಿರಿ ತರುವನು
ಅವನೆಡೆಗೆ ಅರಳು
ತಿಳಿಯಾಗಲೇಬೇಕಲ್ಲವೇ
ಕಾರ್ಮೋಡದ ಕತ್ತಲು
ಹೊಂಬೆಳಕಿನ ಕಿರಣಗಳು
ಮೂಡದೆ ಇರದು ಬಾನಲಿ
ಶಾಶ್ವತವಲ್ಲವದು ಕತ್ತಲು
ಮತ್ತೆ ಮೂಡಲೇಬೇಕು
ನೀನು ಅರಳಲೇಬೇಕು
ಅವನು ಬರಲೇಬೇಕು

