ಭಾವದ ಅಲೆಗಳು
ಭಾವದ ಅಲೆಗಳು
ಒಮ್ಮಿಂದೊಮ್ಮೆಲೆ ಭಾವದ ಅಲೆಗಳು
ಮನದ ತುಂಬಾ ಏಳಲು ನಿರೀಕ್ಷೆಗಳು
ಹೆಚ್ಚುತ್ತವೆ
ಹುಡುಕಿದಾಗ ಸಿಗದ ಭಾವಕ್ಕಾಗಿ
ಕಣ್ಣು ತನ್ನದೇ ಭಾವವನು ಹೊರ
ಸೂಸುತ್ತದೆ
ಅದಕ್ಕೆ ಕಣ್ಣೀರು
ಎನ್ನಬಹುದೇನೋ
ಅದು ಒಂದು ಭಾವವೇ
ಕೆಲವೊಮ್ಮೆ ಕಾರಣವಿಲ್ಲದೆಯೋ
ಬರುವ ಅತಿಥಿಯಂತೆ
ಮೌನದ ಮೊರೆ ಹೊಕ್ಕಾಗ
ಭಾವಗಳು ಮನದೊಳಗೆ
ಮೂಕವಾಗಿ ಉಳಿದುಬಿಡುತ್ತವೆ
ಎಷ್ಟೋ ಮಾತುಗಳು ಆಚೆ
ಬರಲಾರದೆ ಮನಸಿನೊಳಗೆ
ಕುಳಿತಿರುವಂತೆ
ಬೇಸರ ಕವಿದಾಗ ಭಾವಗಳು
ಕೂಡ ಮೌನವಾಗುತ್ತವೆ
ಯಾವುದೇ ರೂಪಗಳಿಲ್ಲದೆ
ಅಸ್ಪಷ್ಟವಾದ ಅನಿಶ್ಚಿತತೆಯೊಳಗೆ
ಸೇರಿ ಮಾಯವಾಗುತ್ತವೆ