ಆತ್ಮ ಕೊಟ್ಟ ಆತ್ಮೀಯ!!!
ಆತ್ಮ ಕೊಟ್ಟ ಆತ್ಮೀಯ!!!
ತೊಟ್ಟ ಜುಬ್ಬ ಪಂಚೆಮಾಡಿ
ಕೈ ಕೈ ಅಪ್ಪಿ ಹಿಡಿದು
ದಾರಿ ಮಧ್ಯೆ ಓಡಿದ್ದು
ನೆನಪಿದೆಯೊ?
ನಿನಗೊಡೆದರೆ ನಾನು
ನನಗೊಡೆದರೆ ನೀನೆಂದು
ಮೆರೆದ ಕಾಲ
ನೆನೆಪಿದೆಯೊ?
ವ್ಯಾನ್ ಹತ್ತಿ ಹೋಗ್ವಾಗ ನೀ
ಕೈ ಎತ್ತಿ ಕರೆದಿದ್ದೆ ನಾ
ಗುರುವತ್ರ ಹೋಗ್ವಾಗ್ಲೂ ನಾ
ಮನೆಗ್ಬಂದು ಹೋಗ್ತಿದ್ದೆ
ಪ್ರೀತಿಯೆಂಬ ಕೀರ್ತಿಯಲ್ಲಿ
ಉಡದಂತೆ ದೃಢವಾಗಿ
ಮರಿಯಂತೆ ಮೃದುವಾದ
ಮನುಜನೀ ಮುಹೀಝ್..
ನೀ ನನ್ನತ್ರ ಇಲ್ಲಂದ್ರೆ ಕೇಳ್ತಾರೆ ಜನ
ನನ್ನತ್ರ ಬೆಲೆ ನಿಂಗೆ ಅಸಂಖ್ಯಾತ ಹಣ
ಎಳೆತನದ ನೆಪದಲ್ಲಿ ಕೊರಗುವನು
ಈ ಜೌಹರ್
ಎಳೆತನದ ಕಿರುಹಳ್ಳ ಕಳೆದೊಯ್ತಿ
ಓ ಮುಹೀಝ್
ಪ್ರೀತಿ ಎಂಬ ಅರಳಿದ
ಪುಷ್ಪ ಇದು ಎಲ್ಲಾ
ಕೀರ್ತಿಯಾಗಿ ಉಳಿಸು
ಬಾಡದಂತೆ ಅಲ್ಲಾ…..
