ಇಬ್ಬನಿ --- ಹನಿ*
ಇಬ್ಬನಿ --- ಹನಿ*
ಇಬ್ಬನಿ ಸರಿಸಿ ನೋಡು
ನಾನಿಲ್ಲೇ ಅವಿತಿರುವೆ
ಮೌನತುಟಿಯರಳಿಸಿ
ಕೊರೆವ ಚುಮುಚುಮು ಚಳಿಗೆ
ದೊರೆವ ಬಿಸಿಯಪ್ಪುಗೆಯ ನೆನೆದೆ
ಸುರಿವ ಮಂಜಲಿ ನೆನೆನೆನೆದು ಕಾದೆ
ತಬ್ಬು ನೀ ಬಂದು, ಕರಗೀತು ಇಬ್ಬನಿ
ಹನಿ ಹನಿಯಲಿ ಹೊಳೆದೀತು
ಚೆಲ್ಲಿ ಸವಿಯಾದ ಜೇನ ಹನಿ...

