ಜೀವನ ಪಲ್ಟಿ ಆಯ್ತು
ಜೀವನ ಪಲ್ಟಿ ಆಯ್ತು
ಜೀವನ ಪಲ್ಟಿ ಆಯ್ತು
ಹೆಂಡ ಕುಡಿದು ಅಬ್ಬರಿಸು
ತೀರ್ಥ ಸಸ್ತಾ ಆಯ್ತು
ಹುಡುಗಿ ಮುಂದೆ ಅಲ್ಲಾಡ್ಸು
ನಕ್ಕಾಗ ಇಲ್ಲಿ ಬಿಟ್ಟಂಗೆ ಹಲ್ಲಿ
ಚೆಲ್ಲಾಟ ಚೆಲ್ಲಿ ಚೆನ್ನಂತೆ ಮಲ್ಲಿ
ಹೇಳ್ದಂಗೆ ನಾವು ಕೇಳ್ದಂಗೆ
ಹೇಳ್ದಂಗೆ ನಾವು ಕೇಳ್ದಂಗ್ಯೆ ತಾವು
ಬೆಳಿಗ್ಗೆ ಎದ್ರೆ ಲಾಗಿನ್ನು ಅಂತೆ
ಫೋಟೋ ತೆಗೆದ್ರೆ ಸ್ಟೇಟಸು ಚಿಂತೆ
ವೀಕೆಂಡಿಗೆ ಒಮ್ಮೆ ಔಟಿಂಗು ಅಂತೆ
ಹ್ಯಾಷ್ಟ್ಯಾಗ್ ಅಲ್ಲೇ ಜೀವನ ಸಂತೆ
ಕೆಂಪು ಸೀರೆ ಮಲ್ಲಿಗೆ ತೊಟ್ಟು
ಬೀದಿ ಕೊನೆಗೆ ಪ್ರೀತಿ ಸುಟ್ಟ
ು
ಪ್ರೀತಿ ಗೀತಿ ಬಾಡಿಗೆ ಕೊಟ್ಟು
ಜೀವನ ತೀರಾ ಎಡವಟ್ಟು
ಆನ್ಲೈನಲ್ಲಿ ಅತ್ಯಾಚಾರ
ಆಫ್ಲೈನಲ್ಲಿ ಅನಾಚಾರ
ಕಾಲ್ ಬ್ಯಾಕೇ ಉಪಚಾರ
ಯಾಕಿದು ನಮ್ಗೆ ಗ್ರಹಚಾರ
ಅಂತ ಇಂತು ಅಸೆಸ್ಮೆಂಟ್ ಬಂತು
ವರ್ಷ ಪೂರ್ತಿ ಕಂತು ಕಂತು
ಸಕ್ಕರೆ ಬಿಪಿ ಎರಡು ಬಂತು
ಹುಡ್ಗುರು ಜೀವನ ಇಷ್ಟೆ ಅಂತು
ಹುಡುಗರ ಕ್ವೋಟು ಹುಡುಗಿರ ಡೌಟು
ಸುಸ್ತು ಸುಸ್ತು ನೈಟು ಟೈಟು
ಸೈಟು ಸ್ವೀಟು ಲೈಟು ವೇಟು
ಮಸ್ತು ಮಸ್ತು ಲೇಟು ಫೈಟು
ದೀಪಕ್ ಡಿಎಂಜಿ