STORYMIRROR

Deepak Gondkar

Romance Classics Others

3  

Deepak Gondkar

Romance Classics Others

ಸಾಗುತಿದೆ ಮುಗಿಯದ ಪಯಣ

ಸಾಗುತಿದೆ ಮುಗಿಯದ ಪಯಣ

1 min
22

ಹೆಜ್ಜೆಯ ಮೇಲೆ 
ಹೆಜ್ಜೆಯ ಹಾಕುತ
ಸಾಗುತಿದೆ ಮುಗಿಯದ ಪಯಣ
ಆದಿ ಪುಟಕು ಅಂತ್ಯ ಪುಟುಕು
ನೋವು ನಲಿವಿನ ಅಂಕಣ
ಕಥೆಯು ರೋಚಕ
ಒಲವು ಸೂಚಕ
ಸೋಲು ಗೆಲುವಿನ ದ್ಯೋತಕ
ಬಿದ್ದು ಹೋದ ಭ್ರಮೆಯ ಬದುಕ
ಕಲಿಕೆಯೊಂದೆ ನಾಟಕ

ಇರುಳು ನನ್ನದು
ಬೆಳಕು ನಿನ್ನದು
ನನ್ನಿ ಮನದ ಅಂತಪುರ
ಪ್ರೀತಿ ಕುರುಡು
ಜಾಣ ಕಿವುಡು
ನಲಿವು ಒಂದು ಗೋಪುರ
ದೂರ ಕಾಣದು
ಮನವು ತಿಳಿಯದು
ಬಂಧ ಸಾಗದು ನಿರಂತರ

ಕಂಬನಿ ಕರಗದ ಜೀವನ
ನೂರು ನೋವಿನ ಕಥನ
ಬಳ್ಳಿ ಬಾಗಿ ಬೀಗು ಸಮ್ಮತಿ
ಬೈಗು ಬೆಳಗು ಬೊಗಸೆ ಪ್ರೀತಿ
ನೋವು ಸ್ಪರ್ಶ ಸಂಗತಿ
ಮರೆಯಾಗಿ ಮರೆಯಲ್ಲಿ ಅಡಗಿ 
ಕೋಳಿ ಕೂಗಿಗೆ ಶುಷ್ಕ ಸುಲಿಗೆ
ಬದುಕಲು ಕಲಿತೆ ಬೆಡಗಿ








ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance