ಚಿತ್ತಾರದ ಗೆಳತೀ..
ಚಿತ್ತಾರದ ಗೆಳತೀ..
ಒಲವೇ ನೀನು ಬಾಲೆ
ನೀ ಹೃದಯದಾ ಸೆಲೆ
ಎನ್ನ ಮನಸ ಪರದೆ
ಮೇಲೆ ಮೂಡುವಾ ಕಲೆ
ನಿನ್ನ ಸೊಗಸ ನೋಟದಿ
ಕುಂಚವನ್ನು ಬಿಗಿ ಹಿಡಿ
ಎನ್ನ ಪರದೆ ಬದುಕು
ಬೀಳದಂತೆ ಸೆರೆ ಹಿಡಿ
ಬರಿಯ ಪರದೆಯಲ್ಲ
ಅಲ್ಲಿ ನಾನೇ ಇರುವೆನಲ್ಲ
ನಿನ್ನ ಪ್ರೀತಿ ಕುಂಚದಲ್ಲಿ
ಎನ್ನ ಜೀವವಿದೆಯಲ್ಲ
ಎನ್ನ ಮನದ ಪರದೆಯಲ್ಲಿ
ನಿನ್ನ ದೃಷ್ಟಿ ಕುಂಚದಲ್ಲಿ
ನಮ್ಮ ಬದುಕ ಚಿತ್ತಾರ
ಬರೆದು ಬಿಡುವ ಬಾಲೆ
ರಾಗ ನೀನು ತಾಳ ನಾನು
ನನ್ನ -ನಿನ್ನ ಮಿಲನವು
ಭೂಮಿಬಾನು ಹಾಲುಜೇನು
ರಾಗ ನೀನು ತಾಳ ನಾನು

