ಕಲ್ಲಾಗುವ ಮೊದಲು
ಕಲ್ಲಾಗುವ ಮೊದಲು
ಹೃದಯದ ವೇದನೆ
ಮಾತಿಗೆ ನಿಲುಕದು
ಗೆಳತೀ..
ಸುಲಭವಲ್ಲ ಬಿಡು
ಅಭಿವ್ಯಕ್ತಿ..
ಹೇಳಬಹುದು
ಕಣ್ಣೀರಿನಿಂದ..I
ಕಾಣಬೇಕಲ್ಲ
ದೂರತೀರದ ನಿನಗೆ..I
ಮನಸ್ಸು ಕಲ್ಲಾಗುವ
ಮೊದಲು
ನೆರಳಾಗಿಬಿಡು
ಬಾ ಗೆಳತೀ..I
ಜಾತಿಯ
ಅಸ್ಮಿತೆಗಾಗಿಯೇ
ಕೊಂದುಬಿಟ್ಟಾರು
ನಿನ್ನ, ನನ್ನೊಲವನ್ನ
ಬಂದು ಬಿಡು
ನಾ
ಕಲ್ಲಾಗುವ ಮೊದಲು II

