ತಂಗಾಳಿ ತೆವಳುವಾಗ
ತಂಗಾಳಿ ತೆವಳುವಾಗ
ತಂಗಾಳಿ ತೆವಳುವಾಗ
ಕುಸುಮ ಕುಣಿದಂತೆ
ಅರಳಿತ್ತು ನಿನ್ನ ಮುಖ
ನಾ ಅಂದು ಆ ಮಡಿಲಲ್ಲಿ
ಮತ್ತೇರಿದ ಗುಬ್ಬಚ್ಚಿಯಾಗಿದ್ದೆ
ತುಟಿ ಅರಳಿ ನಗು ಕಂಡಾಕ್ಷಣ
ತುದಿರಹಿತ ಆಗಸಕ್ಕೆೇರುತಿತ್ತು
ಈ ಮನ …
ನಗು ಪುಷ್ಪ,
ಮುಖ ಬೀರಿ ನಿಂತಾಗ
ನಗುವೇ ಮರೆತೊಯಿತು
ಕಣ್ಣೀರು ನನ್ ಜೀವ
ಕಾರ್ಮೊಡ ಕಂಡು ಗರಿ ಬಿಚ್ಚಿ
ನಲಿಯೊ ನವಿಲಿನಂತಿದ್ದ ಹೃದಯ
ಕಣ ಕಣದ ಸುಖ ಮರೆತು
ಸರ್ವಸ್ವದ ಸಾವು ಬಯಸುತ್ತಿದೆ
