ಹನಿಯ ಪ್ರೇಮ ಕಾವ್ಯ..!
ಹನಿಯ ಪ್ರೇಮ ಕಾವ್ಯ..!

1 min

201
ಮೇಘದಿಂದ
ಜಾರಿ ಬಿದ್ದ ನೀರ
ಬಿಂದು ಧರೆಯ ಬೆರೆಯೆ,
ಬೀಜವೊಂದು
ಮೊಳಕೆಯಾಗಿ
ಸೃಷ್ಟಿ ಮೂಲವಾಯಿತು…..
ಬಿದ್ದ ಹನಿಯು
ಕಡಲ ತಡಿಯ ಚಿಪ್ಪ
ಸೇರಿ ಮುತ್ತಾಗಿ
ಪ್ರೇಮಿಕೆಯ ಕೊರಳ
ಸೇರೆ, ಅವಳ
ಒಲವು ಪ್ರೇಮಿಗೊಲಿದು
ಅಲ್ಲೇ ಪ್ರೇಮ
ಕಾವ್ಯ ಸೃಷ್ಟಿಯಾಯಿತು….