ಸುಂದರ ಸುಳ್ಳುಗಳು, ರುಚಿಯಲ್ಲಿ ಕಹಿ..
ಸುಂದರ ಸುಳ್ಳುಗಳು, ರುಚಿಯಲ್ಲಿ ಕಹಿ..


ಸುಳ್ಳಿಗೆ ಕಾಲಿಲ್ಲ,
ಅಲ್ಲದೆ, ಇದಕ್ಕೆ ತಲೆಯೂ ಇಲ್ಲ,
ದೇಹವೂ ಇಲ್ಲ ,
ಯಾವುದೇ ಅಸ್ತಿತ್ವವಿಲ್ಲ..
ಕೇವಲ ಶೂನ್ಯ, ಖಾಲಿ ..
ಭೂತವಿಲ್ಲ, ಭವಿಷ್ಯವಿಲ್ಲ ..
ಸುಂದರ ಸುಳ್ಳುಗಳು,
ರುಚಿಯಲ್ಲಿ ಕಹಿ..
ಸತ್ಯತೆ ಕಷ್ಟಪಟ್ಟು,
ಸಂಪಾದಿಸಿದ ಸಂಪತ್ತು,
ಮೊದಲು ಖರ್ಚು ಮಾಡಿ
ನಂತರ ಜಿ
ೕವನವನ್ನು
ಆನಂದಿಸುತ್ತೀರಿ..
ಸುಳ್ಳು ಕೇವಲ
ಸಾಲ; ಕ್ಷಣಿಕ ಸಂತೋಷದ
ಆಸೆಗೆ ಜೀವನವಿಡೀ ಪಾವತಿಸುತ್ತೀರಿ..
ಯಶಸ್ಸಿನ ರಹಸ್ಯವು ನಿಮ್ಮ ಶಕ್ತಿ ಕುಂಠಿತಗೊಳಿಸುವ
ಆ ಸುಂದರ ಸುಳ್ಳುಗಳನ್ನು ತಪ್ಪಿಸುವುದರಲ್ಲಿ ಅಡಗಿದೆ..
ಆರಾಮದ ಸುಳ್ಳಿನ ಬದುಕಿನ ಬದಲು,
ವಾಸ್ತವತೆ ಅರಿತು ಜಾಗೃತರಾಗಿರಿ..