ಬದ್ಧತೆ, ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಯಾವುದೇ ಆರೋಗ್ಯಕರ ಸಂಬಂಧದ ನಿರ್ಮಾಣ ಘಟಕಗಳು
ಬದ್ಧತೆ, ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಯಾವುದೇ ಆರೋಗ್ಯಕರ ಸಂಬಂಧದ ನಿರ್ಮಾಣ ಘಟಕಗಳು


ಸಂಬಂಧಗಳು ಮಾನವರ ನಡುವಿನ ಕೊಂಡಿಗಳಂತೆ,
ಆದರೆ ನಿಭಾಯಿಸಲು ಜನರು ದುರ್ಬಲರಾಗಿದ್ದಾರೆ.
ಸಂಬಂಧದಲ್ಲಿ ಇರಬೇಕಾದ ಬಂಧವು ಸಡಿಲವಾಗಿದೆ.
ಸಮಯದೊಂದಿಗೆ ಆದ್ಯತೆಗಳು ಬದಲಾಗುತ್ತಿವೆ.
ಪಾರದರ್ಶಕತೆ ಒಂದು ಮುಕ್ತ ಕಿಟಕಿಯಂತೆ,
ಹೊಸ ಆಲೋಚನೆಗಳಿಗೆ ಅವಕಾಶವಿದ್ದು
ಸಂಬಂಧಗಳು ಉತ್ತಮಗೊಳ್ಳುತ್ತದೆ.
ಪಾರದರ್ಶಕತೆ ಮತ್ತು ಸತ್ಯತೆ ನಮ್ಮ ಹೃದಯದಲ್ಲಿನ
ಭಾವನೆಗಳನ್ನು ಬಹಿರಂಗಪಡಿಸುತ್ತದೆ.
ಸೌಂದರ್ಯವು ದೇವರ ಅಮೂರ್ತರೂಪ,
ಸತ್ಯ ಮತ್ತು ಪ್ರಾಮಾಣಿಕತೆಯಲ್ಲಿದೆ..
ಹಿಮಬಿಂದು, ವಜ್ರ ಮತ್ತು ಮಗುವಿನ
ಕಣ್ಣುಗಳ ಸೌಂದರ್ಯ ನಿಚ್ಚಳ, ನಿಷ್ಕಲ್ಮಶ...
ಬದ್ಧತೆ ಮತ್ತು ವಿಶ್ವಾಸಾರ್ಹತೆ ಸಂಗಾತಿಗಳು.
ಬದ್ಧರಾಗಿರುವವರನ್ನು ಜನರು ಗುರುತಿಸುತ್ತಾರೆ..
ಬದ್ಧತೆ ಇಲ್ಲದವರನ್ನು ಬೊಗಳೆ ದಾಸ ಎಂದು ಕರೆಯಲಾಗುತ್ತದೆ.
ಸರ್ವಜ್ಞನ ವಚನ 'ಆಡದೆ ಮಾಡುವನು ರೂಢಿಯೊಳಗುತ್ತಮನು,
ಆಡಿ ಮಾಡುವನು ಮಧ್ಯಮ, ಅಧಮ ತಾನಾಡಿಯೂ ಮಾಡದವನು'
ಎಂಬುದು ಬದ್ಧತೆಯ ಮಹತ್ವವನ್ನು ಎತ್ತಿಹಿಡಿದಿದೆ