ಹಾರೈಕೆ
ಹಾರೈಕೆ
ಅಂಜದಿರು ಗೆಳೆಯಾ
ನೋವು ಬರಲಿ ಬಿಡು
ಅವುಗಳಿಗೇನು ಬರವೇ
ಬರಲೇಬೇಕು ಅವು
ಜೀವನವಲ್ಲವೇ !?
ಬರಿ ಸುಖವೇ ಬಂದರೂ
ಕಲಿಯುವುದು ಹೇಗೆ?
ಶಿಲೆಯು ದೇವರಾದುದು
ಶಿಲ್ಪಿ ಕೊಟ್ಟ
ನೋವಿನಿಂದಲ್ಲವೇ?
ಬರಲಿ ಬಿಡು ನೋವು..
ನೋವಿನುಸಿರಲೂ
ಕೊಳಲನಾದ ಹೊಮ್ಮಿಸು..I
ಹಾರೈಸುತ್ತೇನೆ ನಿನಗೆ
ಯಾವುದೇ ಬಿಟ್ಟರೂ
ನೋವುಗಳು ಬಿಡದಿರಲಿ
ನಿನ್ನ ಗಟ್ಟಿ ಮಾಡಲು II
