Exclusive FREE session on RIG VEDA for you, Register now!
Exclusive FREE session on RIG VEDA for you, Register now!

Vijaya Bharathi

Abstract Inspirational Others


2  

Vijaya Bharathi

Abstract Inspirational Others


ಸಹಸ್ರಚಂದ್ರ ದರ್ಶನ

ಸಹಸ್ರಚಂದ್ರ ದರ್ಶನ

3 mins 105 3 mins 105

ಇಂದು ’ರಾಮ್ ಪುರ" ದ ಆ ದೊಡ್ಡ ತೊಟ್ಟಿಮನೆಯಲ್ಲಿ ಸಡಗರವೋ ಸಡಗರ. ಆ ಮನೆಯ ಹಿರಿಯ ಮಗ ರಂಗರಾವ್ ಗೆ ಸಹಸ್ರಚಂದ್ರ ದರ್ಶನ ದ ಸಂಭ್ರಮ. ಎಂಭತ್ತು ವಸಂತಗಳನ್ನು ಮುಗಿಸಿದ್ದ ರಂಗರಾವ್ ಗೆ ಮನೆಯ ಎಲ್ಲಾ ಕಿರಿಯ ಸದಸ್ಯರೂ ಸೇರಿ

"ಸಹಸ್ರಚಂದ್ರ ದರ್ಶನ ಶಾಂತಿ"ಯನ್ನು ಮಾಡಲು ಏರ್ಪಾಡು ಮಾಡಿದ್ದಾರೆ. ಇವೆಲ್ಲಾ ನನಗೆ ಬೇಡವೆಂದು ರಂಗರಾವ್ ಹೇಳಿದರೂ, ಆ ಮನೆಯವರಾರೂ ಕೇಳುತ್ತಿಲ್ಲ. ಇದರ ಜೊತೆಗೆ

 "ಶ್ರೀ ರಾಮ ಪಟ್ಟಾಭಿಷೇಕ"ವನ್ನೂ ಹಮ್ಮಿಕೊಂಡಿರುವುದು ಮತ್ತೊಂದು ವಿಶೇಷ. ಇದಕ್ಕೆ ಕಾರಣವಿಲ್ಲದಿಲ್ಲ.

ರಂಗರಾವ್ ಮತ್ತು ರಾಜೇಶ್ವರಿ ದಂಪತಿಗಳು ತಮ್ಮ ಐವತ್ತು ವರ್ಷಗಳ ದಾಂಪತ್ಯ ಜೀವನವನ್ನು ಸಾರ್ಥಕವಾಗಿ ಮುಗಿಸಿದ್ದು,ಆ ಕುಟುಂಬಕ್ಕಷ್ಟೆ ಅಲ್ಲದೇ ಆ ಹಳ್ಳಿ 'ರಾಂ ಪುರ' ಕ್ಕೇ ಆದರ್ಶ ದಂಪತಿಗಳಾಗಿ ಮಾದರಿಯಾಗಿ ಬಾಳುತ್ತಿರುವವರು. ಅವರದು

" ಶ್ರೀ ಸೀತಾರಾಮ"ರ ಆದರ್ಶ ದಾಂಪತ್ಯವೆಂದು ಎಲ್ಲರೂ ಹೇಳುವವರೇ. ಅದು ಸತ್ಯವೂ ಕೂಡ. ಹೀಗಾಗಿ ಈ ಸಂದರ್ಭದಲ್ಲಿ ಜಗತ್ತಿಗೇ ಮಾದರಿಯಾಗಿರುವ

”ಶ್ರೀ ರಾಮ ಸೀತೆಯ"ರ ಆದರ್ಶ ಜೀವನದ ಪ್ರತೀಕವಾಗಿ, "ಶ್ರೀ ಸೀತಾರಾಮ ಕಲ್ಯಾಣ" ಪಾರಾಯಣದ ಏರ್ಪಾಟುಗಳೂ ಆಗಿವೆ.

ಸಮಾರಂಭಕ್ಕೆ ಬಂದವರ ಬಾಯಿಯಲ್ಲಿ ಆದರ್ಶ ದಂಪತಿಗಳಾಗಿರುವ ರಂಗರಾವ್ ಮತ್ತು ರಾಜಮ್ಮನವರ ಆದರ್ಶ ದಾಂಪತ್ಯದ ಗುಣಗಾನವೇ ನಡೆದಿತ್ತು.  

"ರಂಗರಾವ್ ಮತ್ತು ರಾಜಮ್ಮ ದಂಪತಿಗಳು ಆ ಕುಟುಂಬಕ್ಕೇ ಹಿರಿಯ ದಂಪತಿಗಳು. ನಾಲ್ಕು ಜನ ತಮ್ಮಂದಿರು ಮೂರು ಜನ ತಂಗಿಯರೊಂದಿಗೆ ಆಡಿ ಬೆಳೆದ ರಂಗರಾವ್ ಆ ಮನೆಯವರಿಗೆಲ್ಲಾ "ರಂಗಣ್ಣ"ನೇ ಆಗಿದ್ದಾರೆ.ತಮ್ಮ ತಂದೆಯ ನಂತರ ಕುಟುಂಬದ ಎಲ್ಲಾ ಜವಾಬ್ದಾರಿಗಳನ್ನು ಹೊತ್ತು, ಇಬ್ಬರು ತಮ್ಮ್ಂದಿರು ಹಾಗೂ ಒಬ್ಬಳ ತಂಗಿಯ ಮದುವೆಯ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿ, ತಮ್ಮ ತಾಯಿಯನ್ನು ಕಡೆಯ ತನಕ ತಮ್ಮ ಮನೆಯಲ್ಲೇ ಇಟ್ಟುಕೊಂಡು ಮಾತೃ ಸೇವೆಯನ್ನೂ ಮಾಡಿ ಕೃತಾರ್ಥರಾದವರು. ನಂತರ ತಮ್ಮಇಬ್ಬರು ಮಕ್ಕಳಿಗೆ ಮದುವೆ ಮಾಡಿ ಮುಗಿಸುವ ತನಕ ಎಂದೂ ಜವಾಬ್ದಾರಿಯಿಂದ ಹಿಂದೆ ಸರಿದವರಲ್ಲ.

ತಮಗೆ ಅಳಿಯ ಮತ್ತು ಸೊಸೆ ಬರುವ ಹೊತ್ತಿಗೆ ಅವರಿಗೂ ಅರವತೈದು ವರ್ಷಗಳಾಗಿದ್ದು , ನಂತರ ಸತ್ಸಂಗ, ಭಜನೆ, ತೀರ್ಥ ಯಾತ್ರೆ ಗಳಲ್ಲಿ ಕಾಲ ಕಳೆಯುತ್ತಾ ಭಗವಂತ ಕೊಟ್ಟಿರುವ ಅಧ್ಬುತವಾದ ಮಾನವ ಜನ್ಮವನ್ನು ಸಾರ್ಥಕ ಮಾಡಿಕೊಳ್ಳುತ್ತಿರುವ

ರಂಗಣ್ಣ ನವರಿಗೆ ಈಗ ಎಂಭತ್ತರ ಹರಯ. ಕಷ್ಟಪಟ್ಟು ದುಡಿದಿರುವ ಅವರಿಗೆ ಯಾವ ರೀತಿಯ ಖಾಯಿಲೆ ಕಸಾಲೆಗಳು ಹತ್ತಿರ ಸುಳಿದಿಲ್ಲ. ಇವರ ತುಂಬು ಆರೋಗ್ಯ ವನ್ನು ನೋಡಿದವರೆಲ್ಲರೂ ಅವರ ಆರೋಗ್ಯದ ಗುಟ್ಟೇನು ಅಂತ ಕೇಳಿದಾಗ, ಮನಸ್ಸು ಮತ್ತು ದೇಹಗಳನ್ನು ಸುಸ್ಥಿತಿಯಲ್ಲಿ ಕಾಪಾಡಿಕೊಂಡು ಬಂದಿರುವುದೇ ತಮ್ಮ ಆರೋಗ್ಯದ ಗುಟ್ಟೆಂದು ಹೇಳಿ ನಕ್ಕು ಬಿಡುತ್ತಿದ್ದರು.

ಧಾರವಾಡ ದ ಸರ್ಕಾರಿ ಕಾಲೇಜ್ ನಲ್ಲಿ ಉಪನ್ಯಾಸಕ ವೃತ್ತಿಯಲ್ಲಿದ್ದ ರಂಗಣ್ಣನವರು, ತಮ್ಮ ತಂದೆಯು ತೀರಿಕೊಂಡ ನಂತರ ತುಂಬು ಕುಟುಂಬದ ಜವಾಬ್ದಾರಿಯನ್ನು ಗಮನದಲ್ಲಿ ಟ್ಟುಕೊಂಡು, ನೌಕರಿಗೆ ರಾಜೀನಾಮೆ ಕೊಟ್ಟು ,ತಮ್ಮ ಹಳ್ಳಿ " ರಾಮ್ ಪುರ" ಕ್ಕೆ ಹಿಂತಿರುಗಿ, ಆ ಹಳ್ಳಿಯಲ್ಲಿ ತಂದೆ ನೋಡಿಕೊಳ್ಳುತ್ತಿದ್ದ,ತೋಟ,ಜಮೀನು,ಗದ್ದೆಗಳನ್ನು ನೋಡಿಕೊಳ್ಳುತ್ತಾ, ಹಸುಕರುಗಳನ್ನು ಅಕ್ಕರೆಯಿಂದ ಸಾಕುತ್ತಾ, ಬಿಡುವಿನ ವೇಳೆಯಲ್ಲಿ ಹಳ್ಳಿಯ ಮಕ್ಕಳಿಗೆ ಪಾಠ ಹೇಳಿಕೊಡುತ್ತಾ ಸಮಾಧಾನವಾಗಿ ಜೀವನ ನಡೆಸುತ್ತಾ ಇದ್ದುಬಿಟ್ಟರು. ಇಬ್ಬರು ತಮ್ಮ, ತಂಗಿಯರನ್ನು ಪದವೀಧರರನ್ನಾಗಿ ಮಾಡಿಸಿ, ಅವರೆಲ್ಲರೂ ತಮ್ಮ ಮುಂದಿನ ಜೀವನಕ್ಕೆ ಉದ್ಯೋಗ ವನ್ನರಸುತ್ತಾ ಬೆಂಗಳೂರನ್ನು ಸೇರಿದಾಗ, ತಮ್ಮ ತಾಯಿಯ ಜವಬ್ದಾರಿಯನ್ನು ತಾವೊಬ್ಬರೇ ಹೊತ್ತರು.

ಇವರಿಗೆ ತಕ್ಕನಾದ ಹೆಂಡತಿ ರಾಜೇಶ್ವರಿ. ಇಂತಹ ಕೂಡು ಕುಟುಂಬಕ್ಕೆ ಹಿರಿಯ ಸೊಸೆಯಾಗಿ ಕಾಲಿಟ್ಟ ರಾಜೇಶ್ವರಿ, ಸ್ನಾತಕೋತ್ತರ ಪದವೀಧರೆಯಾಗಿದ್ದರೂ, ನಿಗರ್ವಿ. ಮನೆಯ ಎಲ್ಲರನ್ನೂ ಪ್ರೀತಿಯಿಂದ ಗೆದ್ದು, ಗಂಡನ ಸಹವರ್ತಿನಿಯಾಗಿ ಬಾಳುತ್ತಿರುವ ಸದ್ಗೃಹಿಣಿ.

ಹೀಗಾಗಿ ಆ ಮನೆಯ ಎಲ್ಲರಿಗೂ ಅಕ್ಕರೆಯ ಹಿರಿಯಣ್ಣ ಮತ್ತು ಅತ್ತಿಗೆಯ ಮೇಲೆ ಅಪಾರವಾದ ಗೌರವ.

ಇಷ್ಟು ದೊಡ್ಡ ಕುಟುಂಬವನ್ನು ನಿಭಾಯಿಸುವಾಗ ಎದುರಾಗಬಹುದಾದ ಎಲ್ಲಾ ಕಷ್ಟಗಳನ್ನು ಸಮಾಧಾನವಾಗಿ ಎದುರಿಸಿ ಗೆದ್ದಿದ್ದರು ಈ ದಂಪತಿಗಳು.

ಪತಿಗೆ ನೋವಾಗದಂತೆ ಸಲಹೆಗಳನ್ನು ನೀಡುತ್ತಾ, ಮನೆಯ ಒಳಗೆ ಎಲ್ಲರ ಮನಸನ್ನೂ ಗೆಲ್ಲುತ್ತಾ, ಕೆಲವು ಸಂಧಿಗ್ಧ ಸಮಯದಲ್ಲಿ ಗಂಡನ ಜವಾಬ್ದಾರಿಗೆ ಹೆಗಲುಕೊಡುವಾಗ, ತಮ್ಮ ಒಡವೆ ವಸ್ತ್ರಗಳನ್ನು ತ್ಯಾಗ ಮಾಡುತ್ತಾ, ನೆಂಟರಿಷ್ಟರು, ಅತಿಥಿ ಅಭ್ಯಾಗತರನ್ನು

ಸತ್ಕರಿಸುತ್ತಾ, ದೊಡ್ಡ ತೊಟ್ಟಿ ಮನೆಯ ಕುಟುಂಬದ ಜವಾಬ್ದಾರಿಗಳನ್ನು ನಿರ್ವಹಿಸುವುದೆಂದರೆ ಸಾಮಾನ್ಯದ ಕೆಲಸವಲ್ಲ. ರಾಜೇಶ್ವರಿಯವರು ತಮ್ಮ ಕುಶಲತೆಯಿಂದ

"ಯೋಗಃ ಕರ್ಮಸುಕೌಶಲಮ್" ಎಂಬಂತೆ ಕೂಡು ಕುಟುಂಬವನ್ನು ನಿರ್ವಹಿದವರು. ಲೋಕಮಾತೆ ಸೀತಾದೇವಿಯು ಹೇಗೆ ತನ್ನ ಪತಿ ಶ್ರೀ ರಾಮಚಂದ್ರನನ್ನು "ಸೀತಾಪ್ಯನುಗತಾರಾಮಮ್ ಶಶಿನಂ ರೋಹಿಣೀಯಚ" ಎಂಬಂತೆ ಅನುಸರಿಸಿದಳೋ, ರಾಜೇಶ್ವರಿಯವರೂ ಸಹ ಸುಖದಲ್ಲೂ ದುಃಖದಲ್ಲೂ ಅವರ ನೆರಳಿನಂತೆ ತಮ್ಮ ಪತಿ ರ್ಂಗರಾವ್ ಗೆ ಬೆಂಬಲವಾಗಿ ನಿಂತವರು.ಅದೇ ರೀತಿ ತಮ್ಮ ಪತ್ನಿಗೆ ಗೌರವಾದರಗಳನ್ನು ನೀಡಿ, ಅವಳ ತವರಿನವರ ಕಷ್ಟ ಸುಖಗಳಲ್ಲೂ ಭಾಗಿಯಾಗುತ್ತಿದ್ದ ರಂಗರಾವ್,ಒಬ್ಬ ಆದರ್ಶ್ ಪತಿ ಎನಿಸಿಕೊಂಡಿದ್ದರು.

ಇವರಿಬ್ಬರ ಅನ್ಯೋನ್ಯ ದಾಂಪತ್ಯವನ್ನು ನೋಡಿ

ಇದ್ದರೆ. ಇವರಂತೆ ಇರಬೇಕು ಅಂದು ಕೊಳ್ಳುತ್ತಿದ್ದವರೆಷ್ಟೋ?

ಹೀಗೆ ಗಂಡ ಹೆಂಡತಿಯ ಪರಸ್ಪರ ಸಹಕಾರದಿಂದ ಹೊಂದಾಣಿಕೆಯಿಂದ ಅವರ ದೊಡ್ಡ ಸಂಸಾರ ಸುಗಮವಾಗಿ ನಡೆದು ಈಗಎಲ್ಲವೂ ಒಂದು ಘಟ್ಟ ತಲುಪಿದ್ದವು. ಮಗಳು ಮದುವೆಯಾಗಿ ದೆಹಲಿ ಸೇರಿದ್ದರೆ,ಮಗ ಒಳ್ಳೆಯ ಕಂಪನಿಯೊಂದರಲ್ಲಿ ಸಾಫ್ಟ್ವೆರ್ ಇಂಜಿನಿಯರ್ ಆಗಿ ಬೆಂಗಳೂರಿನಲ್ಲಿದ್ದ. ಮಕ್ಕಳು ಎಷ್ಟೇ ಬಲವಂತ ಮಾಡಿ ಕರೆದರೂ ರಂಗರಾವ್ ದಂಪತಿಗಳು ತಾವು ಬಾಳಿದ ರಾಂಪುರ ವನ್ನು ಬಿಟ್ಟು ಹೊರಡಲು ಸಿದ್ಧವಾಗಿರಲಿಲ್ಲ.

ಅವರ ಸಹಸ್ರ ಚಂದ್ರ ದರ್ಶನ ಶಾಂತಿ ಮತ್ತು ವಿವಾಹ ವಾರ್ಷಿಕೋತ್ಸವವನ್ನು, ಅವರ ಮಕ್ಕಳು, ಮಕ್ಕಳ ಸಮಾನರಾಗಿದ್ದ ತಮ್ಮಂದಿರು ತಂಗಿಯರು ಎಲ್ಲರೂ ಸೇರಿ ಸಾಂಗವಾಗಿ ನೆರವೇರಿಸಿದರು. ಹೋಮ, ಹವನ ಉದಕ ಶಾಂತಿ,ಮಾಂಗಲ್ಯ ಧಾರಣೆ, ಸೀತಾರಾಮ ಕಲ್ಯಾಣ ಪಾರಾಯಣ ,ಎಲ್ಲವೂ ಮುಗಿದು, ಹಿರಿಯ ದಂಪತಿಗಳ

ಕೊರಳಿಗೆ ಹಾರ ಹಾಕಿ, ಆರತಕ್ಷತೆಯ ಚೇರ್ ಮೇಲೆ ಕೂರಿಸಿದಾಗ ಅಲ್ಲಿಗೆ ಬಂದವರೆಲ್ಲರೂ ಸೀತಾರಾಮರಂತಿರುವ ಅವರಿಗೆ ಉಡುಗೊರೆ ಗಳನ್ನು ನೀಡುತ್ತಾ, ಅವರಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡು, ಧನ್ಯತಾ ಭಾವದಿಂದ ಹೋಗುತ್ತಿದ್ದರು.

ರಂಗರಾವ್ ಮತ್ತು ರಾಜೇಶ್ವರಿ ದಂಪತಿಗಳು ತುಂಬು ಮನಸ್ಸಿನಿಂದ ಎಲ್ಲರನ್ನೂ ಹರಸಿಬೀಳ್ಕೊಡುತ್ತಿದ್ದರು.

ಅವರ ಆದರ್ಶ ದಾಂಪತ್ಯ ಕಿರಿಯ ದಂಪತಿಗಳಿಗೆ

ದಾರಿದೀಪವಾದವು. 

ವರ್ತಮಾನದಲ್ಲಿ, ಅಲ್ಪಾಯುಷಿಗಳಾಗಿಯೇ, ಸಾವಿನ ಮನೆಯ ಕದ ತಟ್ಟುತ್ತಾ ಅರವತ್ತು ವಸಂತ ಗಳನ್ನು ಮುಗಿಸುವುದೇ ದುಸ್ತರ ವಾಗಿರುವಾಗ, ರಂಗಣ್ಣನ ವರು ಎಂಭತ್ತು ವಸಂತ ಗಳನ್ನು ಸಾರ್ಥಕವಾಗಿ ಮುಗಿಸಿರುವುದನ್ನು ಹಾಗೂ ದಂಪತಿಗಳಿಬ್ಬರೂ ಅನ್ಯೋನ್ಯತೆ ಯಿಂದ ಇಷ್ಟು ದೀರ್ಘವಾದ ವೈವಾಹಿಕ ಜೀವನವನ್ನು ಯಶಸ್ವಿಯಾಗಿ ಪೂರೈಸಿ ಇಂದು ಸಹಸ್ರಚಂದ್ರ ದರ್ಶನ ಮಾಡುವ ಭಾಗ್ಯ ವನ್ನು ಪಡೆದಿರುವ ಬಗ್ಗೆ ಬಂದವರೆಲ್ಲರೂ ಹಮ್ಮೆಯಾಂದ ಸ್ಮರಿಸುತ್ತಾ ಮನಸಾರೆ ಶುಭಾಶಯಗಳನ್ನು ಕೋರುತ್ತಿದ್ದರೆ, ರಂಗಣ್ಣ ಹಾಗೂ ರಾಜೇಶ್ವರಿ ದಂಪತಿಗಳು ಎಲ್ಲರನ್ನೂ ಆಶೀರ್ವದಿಸುತ್ತಿದ್ದರು.ಇಂದಿನ ಕಾಲದಲ್ಲಿ ಇಂತಹ ಆದರ್ಶ ದಂಪತಿಗಳು ನೋಡಸಿಗುವುದೇ ಅಪರೂಪ.ಅವರ ದಾಂಪತ್ಯ ದ ಆದರ್ಶ ವನ್ನು ಎಲ್ಲರೂ ಪಾಲಿಸುವಂತೆ ಆಗಲಿ ಎಂದು ಆ ಊರಿನ‌ ಹಿರಿಯ ಜೀವಗಳು ಅಲ್ಲಿ ನೆರೆದಿದ್ದ ಕಿರಿಯರಿಗೆ ಕೂಗಿ ಹೇಳುತ್ತಿದ್ದರು.Rate this content
Log in

More kannada story from Vijaya Bharathi

Similar kannada story from Abstract