Become a PUBLISHED AUTHOR at just 1999/- INR!! Limited Period Offer
Become a PUBLISHED AUTHOR at just 1999/- INR!! Limited Period Offer

Vijaya Bharathi

Abstract Romance Others

1  

Vijaya Bharathi

Abstract Romance Others

ಸ್ವಾಸ್ಥ್ಯ ನರ್ಸಿಂಗ್ ಹೋಂ

ಸ್ವಾಸ್ಥ್ಯ ನರ್ಸಿಂಗ್ ಹೋಂ

2 mins
104


ಮಧ್ಯಾಹ್ನ ದ ಲಂಚ್ ಬ್ರೇಕ್ ನಲ್ಲಿ ಎಲ್ಲಾ ವೈದ್ಯ ರೂ ಊಟ ಮಾಡಲು ಕ್ಯಾಂಟಿನ್ ಹಾಗೂ ರೆಸ್ಟ ರೂಮಿನ ಕಡೆ ಹೊರಟರು. ಬೆಳಿಗ್ಗೆ ಎಂಟು ಗಂಟೆಯಿಂದ ಒಂದೇ ಸಮನೆ ಪೇಷಂಟ್ ಗಳನ್ನು ನೋಡಿ ಸುಸ್ತಾಗಿದ್ದ ವೈದ್ಯರು, ತಮಗೆ ಇಷ್ಟ ಬಂದಂತೆ ತಮಗೆ ಬೇಕಾದವರೊಂದಿಗೆ ಹರಟೆ ಹೊಡೆಯುತ್ತಾ, ಇನ್ನು ಕೆಲವರು ತಮ್ಮ ಊಟದ ಡಬ್ಬಿ ಗಳನ್ನು ತೆಗೆದು ಕುಳಿತರು. 


ಬಹಳ ಆತ್ಮೀಯ ಗೆಳತಿ ಯರಾದ ಡಾ.ಸ್ಪೂರ್ತಿ ಹಾಗೂ ಡಾ ಸಾಕ್ಷಿ ಒಂದು ಟೇಬಲ್ ಹಿಡಿದು ತಮ್ಮ ತಮ್ಮ ಡಬ್ಬಿಗಳನ್ನು ತೆಗೆದರು. ಇಂದೇಕೋ ಡಾ.ಸಾಕ್ಷಿಗೆ ಊಟ‌ ಮಾಡಲು ಮನಸ್ಸಿಲ್ಲದೆ,ಅನ್ಯ ಮನಸ್ಕಳಾಗಿರುವುದನ್ನು ಗಮನಿಸಿದ ಡಾ.ಸ್ಫೂರ್ತಿ ಗೆಳತಿಯ ಚಿಂತೆಯ ಕಾರಣವನ್ನುಕೇಳಿದಾಗ, ಸಾಕ್ಷಿಯ ಕಣ್ಗಳು ತುಂಬಿಕೊಂಡವು.ಅದನ್ನು ನೋಡಿ

ಸ್ಫೂರ್ತಿಗೆ ಗಾಬರಿಯಾಗಿ ಗೆಳತಿಯನ್ನು ಒತ್ತಾಯ ಮಾಡಿದಾಗ, ಇಂದು ಬೆಳಿಗ್ಗೆ ತನ್ನ ಬಳಿ ತನ್ನ ಮಾಜಿ ಪತಿ ಪ್ರೊ.ರಂಜನ್ ,ತನ್ನ ಈಗಿನ ಪತ್ನಿ ನೇಹಳನ್ನು ಚೆಕ್ಅಪ್ ಗೆಂದು ಕರೆದುಕೊಂಡು ಬಂದ ವಿಷಯ ವನ್ನು ಡಾ.ಸಾಕ್ಷಿ ತಿಳಿಸಿ ನಿಟ್ಟುಸಿರು ಬಿಟ್ಟಳು.


ಗೆಳತಿಯ ಅನ್ಯಮನಸ್ಕತೆಯ ಕಾರಣ ತಿಳಿದ ಮೇಲೆ ಸ್ಫೂರ್ತಿ ಗೂ ತುಂಬಾ ನೋವಾಯಿತು. ಮೆಡಿಕಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಪ್ರೊ.ರಂಜನ್, ಡಾ. ಸಾಕ್ಷಿ ಯನ್ನು ಪ್ರೀತಿಸಿಯೇ ಮದುವೆಯಾದವರು. ಇಬ್ಬರಿಗೂ ಸುಮಾರು ಹದಿನೆಂಟು ವರ್ಷಗಳ ವಯಸ್ಸಿನ ಅಂತರವಿದ್ದರೂ, ಸಾಕ್ಷಿ ಯ ಮನೆಯವರ ವಿರೋಧ ವನ್ನೂ ಲೆಕ್ಕಿಸದೆ ಮದುವೆಯಾದವರು.


ಆದರೆ ಮದುವೆ ಯಾದ ವರ್ಷ ದೊಳಗೇಇಬ್ಬರೂ ವಿವಾಹ ವಿಚ್ಛೇದನ ಪಡೆದು ದೂರವಾಗಿದ್ದರು. ಇಬ್ಬರ ನಡುವಿನ ವಯಸ್ಸಿನ ಅಂತರದಿಂದ ಪೀಳಿಗೆ ಯ ಆಸಕ್ತಿ ಗಳು ತುಂಬಾ ವಿರುದ್ಧ ವಾಗಿರುತ್ತಿದ್ದರಿಂದ ಹಾಗೂ ಅನೇಕ ವೈಯಕ್ತಿಕ ಕಾರಣಗಳಿಂದ ಇಬ್ಬರೂ ದೂರವಾಗಿದ್ದರು.


ಎಂ.ಬಿ.ಬಿಎಸ್. ಮುಗಿಸಿದ ಕೂಡಲೇ ಮದುವೆ ಮಾಡಿ ಕೊಂಡಿದ್ದ ಡಾ.ಸಾಕ್ಷಿ ವಿಚ್ಛೇದನದ ನಂತರ ‌ತನ್ನ ಸ್ನಾತಕೋತ್ತರ ಪದವಿಯನ್ನು ಮುಗಿಸಿ ಗೈನಕಾಲಜಿಯಲ್ಲಿ ವಿಶೇಷ ಅಧ್ಯಯನ ಮಾಡಿ, ಸ್ವಾಸ್ಥ್ಯ ನರ್ಸಿಂಗ್ ಹೋಂನಲ್ಲಿ ತನ್ನ ವೃತ್ತಿಯನ್ನು ಪ್ರಾರಂಭಿಸಿದಳು. ಈಗ ಒಂದು ವರ್ಷ ದಿಂದ ತನ್ನ ವೃತ್ತಿಯಲ್ಲಿ ಮುಳುಗಿ ತನ್ನ ಹಳೆಯ ಜೀವನವನ್ನು ಮರೆಯುತ್ತಿದ್ದ ಅವಳಿಗೆ ಇಂದು ಅಚಾನಕ್ ಆಗಿ ಪ್ರೊ.ರಂಜನ್ ನನ್ನು ನೋಡಿ ಆಶ್ಚರ್ಯವಾಗುವುದರ ಜೊತೆಗೆ ಹಳೆಯ ನೆನಪುಗಳು ಮರುಕಳಿಸಿದಂತಾಯಿತು. 


ತನ್ನ ಬೇಸರಕ್ಕೆ ಕಾರಣವನ್ನು ಗೆಳತಿಯೊಂದಿಗೆ ಹಂಚಿಕೊಂಡಾಗ, ಡಾ.ಸ್ಫೂರ್ತಿ ಅವಳಿಗೆ, "ಹಳೆಯದನ್ನು ಮರೆತು , ನಿನಗಾಗಿ ಪರಿತಪಿಸುತ್ತಿರುವ ನಿನ್ನ ಬಾಲ್ಯದ ಗೆಳೆಯ ಸ್ಫೂರ್ತಿ ನರ್ಸಿಂಗ್ ಹೋಂನ ಒಡೆಯ ಡಾ. ಸುಶಾಂತ್ ನನ್ನು ಮದುವೆಯಾಗಿ ಸಂತೋಷ ವಾಗಿರಬಾರದೇಕೆ?" ಎಂದು ತನ್ನ ಸಲಹೆಯನ್ನು ನೀಡಿದಳು.


ಅದುವರೆಗೂ ಹಳೆಯ ನೆನಪು ಗಳ ಗೊಂದಲಗಳಲ್ಲಿ ಸಿಲುಕಿದ್ದ ಸಾಕ್ಷಿ ಗೆ ಗೆಳತಿಯ ಮಾತಿನಿಂದ ಹೊಸ ಮಿಂಚು ಹರಿದಂತಾಯಿತು.


"ಸ್ಫೂರ್ತಿ,ನೀನು ಹೇಳುವುದು ನಿಜ,ಪ್ರೊ.ರಂಜನ್ ಪ್ರೀತಿಸಿದ ನನ್ನನ್ನು ಮರೆತು ,ಹೊಸ ಹೆಂಡತಿ ಯೊಂದಿಗೆ ಸಂಸಾರ ನಡೆಸುತ್ತಿರುವಾಗ,ನಾನು ಮಾತ್ರ ಹಳೆಯ ನೆನಪುಗಳಿಂದ ಕೊರಗುತ್ತಾ ಜೀವನ ಸವೆಸಬೇಕಾ? ಅವರೆದುರು ನಾನು ಸೋಲನ್ನು ಒಪ್ಪಿಕೊಂಡಂತೆ ಆಗುತ್ತದೆ. ಹಾಗಾಗಬಾರದು. ಸರಿ. ಆದರೆ ಡಾ.ಸುಶಾಂತ್ ಗೆ ನನ್ನ ಹಳೆಯ ವಿಷಯ ಗೊತ್ತೋ ಇಲ್ಲವೋ? ಅವನಂತೂ ನನ್ನ ಹಿಂದೆ ಹಿಂದೆ ಸುತ್ತುತ್ತಾ, ನನ್ನ ನಗುವಿಗಾಗಿ ಕಾಯುತ್ತಾ, ನನ್ನೊಂದಿಗೆ ಮಾತನಾಡಲು ತವಕಪಡುತ್ತಿರುವುದು  ನನಗೆ ಗೊತ್ತಿಲ್ಲದ ವಿಷಯವೇನಲ್ಲ. ನೋಡೋಣ ಮುಂದೆ ಹೇಗಾಗುವುದೊ?", ಸಾಕ್ಷಿ ಗೆಳತಿಯೊಂದಿಗೆ ಹೇಳಿದಾಗ, "ಯು ಡೋಂಟ್ ವರಿ. ನಾನು ಮುಂದಿನದನ್ನು ನೋಡಿಕೊಳ್ತೀನಿ. ಒಟ್ಟಿನಲ್ಲಿ ನಿಮ್ಮಿಬ್ಬರ ನ್ನು ಒಂದು ಮಾಡುವುದು ನನ್ನ ಜವಾಬ್ದಾರಿ. ಚಿಯರ್ ಅಪ್. ಬೇಗ ಊಟ ಮಾಡಿ ಮುಗಿಸು".

ಗೆಳತಿಯ ಭರವಸೆಯ ಮಾತುಗಳಿಂದ ಸಾಕ್ಷಿ ಯನ್ನು ಆವರಿಸಿದ್ದ ದುಗುಡ ಮೋಡಗಳು ಕರಗಿಮನ ಹಗುರವಾದಂತಾಯಿತು. ಮನಸ್ಸಿನ ದುಗುಡ ಗಳು ಹಗುರವಾದಾಗ ಹಸಿವು ಕಾಣಿಸಿದಂತಾಗಿ , ತಾನು ತಂದಿದ್ದ ಊಟದ ಡಬ್ಬಿ ಯಲ್ಲಿ ಬೇಗ ಬೇಗ ಕೈಯ್ಯಾಡಿಸಿದಳು.


ಅಷ್ಟರಲ್ಲಿ ಡಾ.ಸ್ಫೂರ್ತಿಗೆ ಒ.ಟಿ.ಯಿಂದ ಕರೆ ಬಂದಿದ್ದರಿಂದ ಅವಳು ಗಡಬಡಿಸಿ ಎದ್ದು ಆಪರೇಷನ್ ಥಿಯೇಟರ್ ಕಡೆ ನಡೆದಾಗ, ಡಾ.ಸಾಕ್ಷಿ ಲೇಬರ್ ವಾರ್ಡ ಕಡೆ ಹೊರಟಳು.


ಮುಂದೆ ಒಂದೆರಡು ತಿಂಗಳಲ್ಲಿ ಸ್ಫೂರ್ತಿ ಯ ಮಧ್ಯಸ್ಥಿಕೆಯಿಂದ, ಸಾಕ್ಷಿ ಹಾಗೂ ಸುಶಾಂತ್ ನ ಮದುವೆ ನಡೆಯಿತು.


Rate this content
Log in

Similar kannada story from Abstract