Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Vijaya Bharathi

Abstract Romance Classics

3.9  

Vijaya Bharathi

Abstract Romance Classics

ಚಹಾ ಬೆಸೆದ ಪ್ರೇಮ

ಚಹಾ ಬೆಸೆದ ಪ್ರೇಮ

2 mins
223



ಪೀಯೂಷ್ ಗೆ ಪ್ರೀತಿಯ ದಾರಿಯನ್ನು ಕಾದು ಕಾದು ಸಾಕಾಯಿತು.ಎಂದಿನಂತೆ ಚಹಾ ಸಮಯದಲ್ಲಿ ತನ್ನ ಪ್ರೀತಿ ಗಾಗಿ ಕಾಯುತ್ತಾ ಕುಳಿತನು. ಇಂದೇಕೋ ಇವಳು ಇನ್ನೂ ಬಂದಿಲ್ಲ." ಏನಾಯಿತು?,ಟೀ ಬ್ರೇಕ್ ಸಮಯ ಇನ್ನೇನು ಮುಗಿಯುತ್ತ ಬರುತ್ತಿದೆ.ಬೇಗ ಸೆಕ್ಷನ್ ಗೆ ಮರುಳಬೇಕು.",

ಅವನ ಮನಸ್ಸು ಚಡಪಡಿಸುತ್ತಿತ್ತು.

"ಸರ್, ಚಹಾ ಕೊಡ್ಲಾ?ಅಥವಾ ಮೇಡಂ ಬಂದ ಮೇಲೆ ಕೊಡ್ಲಾ?" ಅಂಗಡಿಯವನು ಕೇಳಿದಾಗ,

"ಈಗ ಬೇಡ,ಆಮೇಲೆ ಬರುತ್ತೀನಿ" ಎಂದು ಹೇಳಿದ ಪೀಯೂಷ್ .

ಅಲ್ಲಿಂದ ಎದ್ದು ಆಫೀಸಿಗೆ ಹೊರಟ.

ಅವನು ಇನ್ನೇನು ಆಫೀಸ್ ತಲುಪುವ ವೇಳೆಗೆ

ಪ್ರೀತಿ ದಾರಿಯಲ್ಲಿ ಸಿಕ್ಕಿದಳು.

"ಸಾರಿ ಮೈ ಡಿಯರ್, ನಾನು ಟೀ ಗೆ ಹೊರಡುವ ವೇಳೆಗೆ ಕಸ್ಟಮರ್ ಕಾಲ್ ಒಂದು ಬಂದಿದ್ದರಿಂದ ಅದನ್ನು ಅಟೆಂಡ್ ಮಾಡಿಯೇ ಬರಬೇಕಾಯಿತು.ಐ ಆಮ್ ಹೋಂ ಸಾರಿ"

ಅವಳ ಮೇಲೆ ಸ್ವಲ್ಪ ಸಿಟ್ಟು ಬಂದರೂ, ಅದನ್ನು ತೋರಿಸಿ ಕೊಳ್ಳದೆ ಪೀಯೂಷ್ ಅವಳೊಂದಿಗೆ ಹೋಗಿ ಬೈ ಟು ಚಹಾ ಕುಡಿದು, ಮತ್ತೆ ಕೆಲಸಕ್ಕೆ ಮರಳಿದ.

ಆಫೀಸ್ ಮುಗಿಸಿ ಹೊರಗಡೆ ಬಂದ ಪೀಯೂಷ ತನ್ನ ಪ್ರೀತಿ ಗಾಗಿ ಕಾದಿದ್ದು,ಅವಳ ಕಾರು ಹೊರಡುವವರೆಗೂ ನಿಂತು,ಬೈ ಹೇಳಿ ತನ್ನ ಕಾರನ್ನು ಸ್ಟಾರ್ಟ್ ಮಾಡಿದ.

ಒಂದೇ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ಪೀಯೂಷ್ ಹಾಗೂ ಪ್ರೀತಿ ಯನ್ನು ಬೈ ಟು ಚಹಾ ಹತ್ತಿರ ತಂದಿತ್ತು.

ತನ್ನ ಕೈ ಕೆಳಗೆ ಸಹಾಯಕಿ ಯಾಗಿ ಕೆ ಲಸ ಮಾಡುತ್ತಿದ್ದ ಪ್ರೀತಿ,ಒಂದು ದಿನ ಚಹಾ ಅಂಗಡಿ ಯಲ್ಲಿ ಒಬ್ಬಳೇ ಕುಳಿತು ಚಹಾ ಗಾಗಿ ಕಾಯುತ್ತಾ ಇದ್ದಾಗ,ತನ್ನ ಬಾಸ್ ಬಂದಿದ್ದನ್ನು ಕಂಡು ತನಗಾಗಿ ಆರ್ಡರ್ ಮಾಡಿದ್ದ ಒಂದು ಚಹಾದಲ್ಲಿ ಇಬ್ಬರೂ ಬೈ ಟು ಮಾಡಿ ಕೊಂಡಿದ್ದರು.ಅಂದಿನಿಂದ ಬೆಳೆದ ಇವರಿಬ್ಬರ ಸ್ನೇಹ ಹಾಗೇ ಮುಂದುವರಿದು,ಈಗ ಪ್ರೇಮದ ಪರಾಕಾಷ್ಠೆ ತಲುಪಿದೆ.ಇವರಿಬ್ಬರ ಸ್ನೇಹ ದ ವಿಷಯ ಆ ಚಹಾ ಅಂಗಡಿ ಯವನಿಗೂ ಗೊತ್ತಾಗಿದ್ದು,,ಒಂದು ದಿನ ಇವರಿಬ್ಬರಲ್ಲಿ ಒಬ್ಬರು ಬರದಿದ್ದರೂ ಅವನು ವಿಚಾರಿಸುತ್ತಿದ್ದ.

ಬೈ ಟು ಚಹಾದಿಂದ ಆರಂಭವಾದ ಪೀಯೂಷ್ ಹಾಗೂ ಪ್ರೀತಿ ಯ ಸ್ನೇಹ ಗಾಢವಾಗುತ್ತಾ ಹೋಗಿ, ಇದೀಗ ಪ್ರೀತಿ ಗೆ ತಿರುಗಿದೆ.ಹೀಗಾಗಿ ಅವರಿಬ್ಬರು ಒಬ್ಬರನ್ನೊಬ್ಬರು ಬಿಟ್ಟು ಬದುಕಲಾರೆ ವೆಂಬ ಪರಿಸ್ಥಿತಿ ಗೆ ತಲುಪಿದ್ದಾರೆ.

ಮುಂದೆ ಇವರಿಬ್ಬರ ಪ್ರೀತಿಯ ವಿಷಯ ಅವರವರ ಮನೆಗೆ ಮುಟ್ಟಿದಾಗ,ಇಬ್ಬರ ನಡುವೆ ಜಾತಿಯ ಸಮಸ್ಯೆ ಮಧ್ಯೆ ಅಡ್ಡ ಬಂದಿದ್ದು, ಇಬ್ಬರಿಗೂ ಇಬ್ಬಗೆ ಕಾಡತೊಡಗಿತು. ಎರಡೂ ಕಡೆಯ ಮನೆಯ ಹಿರಿಯರ ಒಪ್ಪಿಗೆ ಪಡೆಯದೇ ಮದುವೆ ಯಾಗುವುದು ಅವರಿಗೂ ಕಷ್ಟವೇ.

ಅಸ್ಸಾಂ ಮೂಲದ ಪೀಯೂಷ್, ಮರಾಠಿ ಮೂಲದ ಪ್ರೀತಿ ಒಟ್ಟಿಗೆ ಬಾಳುವುದು ಸುಲಭದ ಮಾತಲ್ಲ.ಆದರೂ ಅವರಿಬ್ಬರೂ ಪ್ರೇಮಿಗಳು.ಒಬ್ಬರನ್ನೊಬ್ಬರು ಬಿಡಲಾರರು.

ಇಬ್ಬರೂ ಬಹಳ ಕಷ್ಟಪಟ್ಟು ತಮ್ಮ ತಮ್ಮ ಮನೆಯವರನ್ನು ಒಪ್ಪಿಸಿ, ಮದುವೆಯ ಹಂತಕ್ಕೆ ತಲುಪಿದಾಗ,ಬಹಳ ದಿನಗಳಿಂದ ಒಬ್ಬರನ್ನೊಬ್ಬರು ನೋಡಲು ಸಾಧ್ಯವಾಗದ ಅವರು,ಇಂದು ತಮ್ಮ ಸಂತೋಷಕ್ಕಾಗಿ  ಅದೇ ಹಳೆಯ ಚಹಾ ಅಂಗಡಿಗೆ ಬಂದು,ಬೈ ಟು ಚಹಾ ಆರ್ಡರ್ ಮಾಡಿ ಒಬ್ಬರನ್ನೊಬ್ಬರು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಕುಳಿತಿದ್ದಾಗ,ಚಹಾದ ಅಂಗಡಿ ಯ ಮಾಲೀಕರು ಇವರ ಮುಂದೆ ಚಹಾ ಇಟ್ಟು

"ಸಾರ್,ಚಹಾ ತೊಗೊಳ್ಳಿ" ಎಂದಾಗ, ಇಬ್ಬರೂ ತಮ್ಮ ಕನಸಿನ ಪ್ರಪಂಚದಿಂದ ಹೊರಬರುತ್ತಾರೆ.

ಇಬ್ಬರೂ ತಮ್ಮ ಗ್ಲಾಸ್ ಗಳನ್ನು ಮುಟ್ಟಿಸುತ್ತಾ

ತಮ್ಮಿಬ್ಬರನ್ನೂ ಜೀವನ ಸಂಗಾತಿ ಯನ್ನಾಗಿ ಬೆಸೆದ ಚಹಾವನ್ನು ಪ್ರೀತಿ ಯಿಂದ ದಿಟ್ಟಿಸುತ್ತಾ, "ಚಿಯರ್ಸ್"ಎನ್ನುತ್ತಾ ಮೆಲ್ಲ ಮೆಲ್ಲಗೆ ಚಹಾ ಹೀರುತ್ತಾ ತಮ್ಮ ಪ್ರಾರಂಭದ ದಿನಗಳ ನೆನಪುಗಳನ್ನು ಮೆಲುಕು ಹಾಕುತ್ತಾ, ನೆಮ್ಮದಿ ಯಿಂದ ಕುಳಿತಿದ್ದಾರೆ.ಇವರಿಬ್ಬರ

ಪ್ರೀತಿ ಗೆ ಕಾರಣವಾದ ತನ್ನ ಅಂಗಡಿಯ ಚಹಾದ ಬಗ್ಗೆ ಚಹಾ ಅಂಗಡಿಯ ಮಾಲೀಕ ಹೆಮ್ಮೆ ಯಿಂದ ಬೀಗುತ್ತಾ ಆ ದಿನದ ಚಹಾ ತನ್ನ ಕಡೆಯ ಗಿಫ್ಟ್ ಎಂದಾಗ,ಪೀಯೂಷ್ಹಾಗೂ ಪ್ರೀತಿ ಪರಸ್ಪರ ಮಂದಹಾಸ ಬೀರುತ್ತಾ ಅವನಿಗೆ

"ಥ್ಯಾಂಕ್ಸ್" ಹೇಳುತ್ತಾ ಮನೆ ಕಡೆ ಹೊರಡುತ್ತಾರೆ.

ಮುಂದೆ ಅವರಿಬ್ಬರೂ ಮದುವೆಯಾದ ನಂತರ ಬೇರೆ ಬೇರೆ ಊರುಗಳಲ್ಲಿ ಇದ್ದರೂ,ಪುಣೆಗೆ ಬಂದಾಗ ಇದೇ ಚಹಾ ಅಂಗಡಿಗೇ ಬಂದು ಬೈ ಟು ಚಹಾ ಕುಡಿಯದೇ ಬಿಡುವುದಿಲ್ಲ.

ಹೇಗಿದೆ ಬೈ ಟು ಚಹಾದ ಸೊಗಡು?



Rate this content
Log in

Similar kannada story from Abstract