STORYMIRROR

Vijaya Bharathi.A.S.

Abstract Inspirational Children

3  

Vijaya Bharathi.A.S.

Abstract Inspirational Children

ವಿಜೇತ

ವಿಜೇತ

1 min
161

ರಾಮ,ಭೀಮ ಮತ್ತು ಸೋಮನೆಂಬ ಮೂವರು ಗೆಳೆಯರು, ಕಾಂಚನಗಂಗಾ ಪರ್ವತವನ್ನೇರಲು

ನಿರ್ಧರಿಸಿ, ದೂರದಿಂದ ಪರ್ವತದ ಶಿಖರವನ್ನು ನೋಡುತ್ತಿದ್ದಾಗ, ಭೀಮನಿಗೆ ತುಂಬಾ ಭಯವಾಗಿ, ಋಣಾತ್ಮಕ ಚಿಂತನೆಗಳು ಮೂಡಿದವು. ತನ್ನ ಕೈಯ್ಯಲ್ಲಿ ಈ ಪರ್ವತಾರೋಹಣ ಕಷ್ಟವೆಂದು ಹೇಳುತ್ತಾ, ರಾಮ ಮತ್ತು ಸೋಮನ ಆತ್ಮವಿಶ್ವಾಸವನ್ನು ಕುಗ್ಗಿಸುತ್ತಾ ಹೋದ. ಅವನು ಭಯದಿಂದ ಕಣ್ಣು ಮುಚ್ಚಿದ. 

ಇತ್ತ ಸೋಮ ಸ್ವಲ್ಪ ಧೈರ್ಯ ಶಾಲಿಯೆಂಬಂತೆ ಪೋಸ್ ಕೊಡುತ್ತಾ, ತಾನೇನೋ ಹತ್ತಬಲ್ಲೆ ಎಂದು ಹೇಳುತ್ತಾ, ರಾಮ ಮತ್ತು ಭೀಮ ಇಬ್ಬರಿಗೂ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದ. 


ಇವರಿಬ್ಬರನ್ನೂ ಗಮನಿಸಿದ ರಾಮ, ಯಾವ ಮಾತನ್ನೂ ಆಡದೆ, ಪರ್ವತವನ್ನೇರಲು ಪ್ರಾರಂಭಿಸಿದ. ಮೊದಮೊದಲು ರಾಮನ ಜೊತೆಗೆ ಸೋಮನೂ ಬೆಟ್ಟವನ್ನೇರಲು ಶುರು ಮಾಡಿದ. ಅದೇನನ್ನಿಸಿತೋ, ಅವನೂ ಸಹ ಸ್ವಲ್ಪ ದೂರ ಬಂದು ಅಲ್ಲೇ ಕುಳಿತು ಬಿಟ್ಟ. 

ಕಡೆಗೆ ರಾಮ, ತನ್ನ ದೃಢ ನಿರ್ಧಾರದಿಂದ ಪರ್ವತದ ತುತ್ತ ತುದಿಯವರೆಗೂ ಏರಿ, ತನ್ನ ಕೈಯ್ಯಲ್ಲಿ ಹಿಡಿದುಕೊಂಡು

ತಂದಿದ್ದ ನಕಾಶೆಯನ್ನು ಹಾರಿಸಿ, ಗೆಲುವಿನ ಮೆಟ್ಟಿಲು ಏರಿದ್ದ.


ಹಿಡಿದ ಕೆಲಸವನ್ನು ಸಾಧಿಸಲು ನಮ್ಮೊಳಗೇ ದೃಢ ನಿಶ್ಚಯ ಇರಬೇಕೆಂಬುದನ್ನು ಸಾಧಿಸಿ ತೋರಿಸಿದ್ದ.



Rate this content
Log in

Similar kannada story from Abstract