ಚೈತ್ರ ಚೈತ್ರ

Drama Romance

3.5  

ಚೈತ್ರ ಚೈತ್ರ

Drama Romance

ಉಸಿರು ನಿಂತ ಮೇಲೂ....

ಉಸಿರು ನಿಂತ ಮೇಲೂ....

6 mins
263



ಬಿಗಿದ ತಾಳಿಯ ಗಂಟು ಗಟ್ಟಿಯಾದೊಡನೆ, ಮನವೇಕೊ ಅವನ ಮೇಲೆ ತೀವ್ರ ಆಕ್ರೋಶ ಚೆಲ್ಲಿದೆ. ಸುಳ್ಳು ಮಾತುಗಳ ಸಿಹಿ ನೆನಪುಗಳು ಸೀಸದ ಬಳಪದಂತೆ ಅಳಿಸಿ ಹೋಗುತ್ತಿವೆ. ಎರಡು ಮನಸ್ಸಿನ ನಂಟು ಕಳಚಿ, ಆಕಸ್ಮಿಕ ಹೃದಯದ ಜೊತೆಗೆ ಮೂರು ಗಂಟಿನೊಡನೆ ಬಂಧಿಯಾಗಿ ಮೂಕವಾಗಿದೆ.


ಮೂರು ವರ್ಷಗಳು ನನ್ನನ್ನೇ ಆಳಿದ ಆ ಪ್ರೀತಿಗೆ ಅಂತ್ಯವಿಂದು ಬಂದು, ಮನಸ್ಸನ್ನು ಕಲಕಿದೆ. ಹೊತ್ತು ಹೊತ್ತಿಗೂ ನೆನೆದು, ಕಾಡಿದ ಪ್ರೀತಿ ನೆರಳಿನಂತೆ ಹಿಂಬಾಲಿಸಿ, ಒಂದಾಗದೆ ಕಣ್ಮರೆಯಾಗಿ ಹೋಗುತ್ತಿದೆ.

ಇಂದು ಎನ್ನ ಶೋಕಾಚರಣೆಯಲ್ಲ ಮದುವೆಯ ಶುಭಾಚರಣೆ ಎಂದು ಸಾರಿ ಬಾರಿ ಬುದ್ಧಿ ಎಚ್ಚರಿಕೆಯ ಕೊಟ್ಟು ಹೋಗುತ್ತಿದೆ. ಮದುವೆ ಮಂಟಪದ ಎದುರು ಅವನೆಲ್ಲೂ ಕಾಣಲಿಲ್ಲ, ಅವನಿಲ್ಲ ಎಂಬ ಭಾವ ಕೂಡ ಕಾಡುತ್ತಲೂ ಇಲ್ಲ. ಅರ್ಥವಾಗದ ದಿನದಂದು ಅಗಲಿಕೆಯ ನೋವು, ತವರು ಮತ್ತು ಇನಿಯನ ಆಶ್ರಯಕ್ಕೆ ಶಾಶ್ವತ ಶ್ರದ್ಧಾಂಜಲಿ.


ಹಣೆಯ ಕುಂಕುಮ ಎನ್ನ ಗರತಿ ಬಾಳಿನ ಸಂಕೇತ, ಬಾಹ್ಯ ಬದುಕಿನಲ್ಲಿ ಬದುಕಬೇಕಾದ ಅನಿವಾರ್ಯ. ನನ್ನ ಆಂತರಿಕ ಬದುಕಿನಲ್ಲಿ ಅವನಿತ್ತ ಮಾಂಗಲ್ಯ ಎಂದೆಂದಿಗೂ ಶಾಶ್ವತ. ಇಂದಿಗೂ ನನ್ನ ಗಂಡನ ಮುಖವನ್ನೇ ನೋಡದ ಗರತಿ ನಾನು. ನಾನು ಬರೆದ ಪತ್ರವು ನಿಮಗಾಗಿ, ಸತಿ ನಾನು ನಿಮಗೆ, ಪ್ರೇಮಿ ನಾನು ಅವನಿಗೆ.

ಪತ್ರ ಓದಿದವನ ಎದೆಯಲ್ಲಿ ಕಂಪನ, ಮನಸ್ಸಿನೊಡನೆ ಆಟವಾಡಿ, ಅತಿರೇಕವಾದ ಪರಿಸ್ಥಿತಿ ಇವನಿಗೆ. ಇವಳು ಹೋಗಿರಬಹುದಾದ ಜಾಗವನ್ನು ಹುಡುಕಿ ಹೊರಟ. ಅವಳೊಂದು ಊರಾಚೆಯ ಕೃಷ್ಣನ ಗುಡಿಯಲ್ಲಿ ತಟಸ್ಥ.

" ಮದುಮಗಳಿಗೆ ಇಲ್ಲೇನು ಕೆಲಸ" ಅವನ ಪ್ರಶ್ನೆಯ ಆಳ ತಿಳಿದ ಇವಳು ಆಕಾಶಕ್ಕೆ ದಿಟ್ಟ ದೃಷ್ಟಿಯ ಬಿಟ್ಟು ನಿಂತಳು, ಚಂಚಳ ಮನಸ್ಸಿನ ಹೆಣ್ಣು.


" ಕೃಷ್ಣನ ಗುಡಿಯಲ್ಲೇ ನಮ್ಮಿಬ್ಬಿರ ಪ್ರತಿದಿ‌ನದ ಬೇಟಿ, ಅವನ ಶರೀರದ ತುಂಬಾ ನಾನು, ನನ್ನ ಮನಸ್ಸಿನ ತುಂಬಾ ಅವನು. ನಾವಿಬ್ಬರು ಕೃಷ್ಣ ರಾಧಾ ಎಂದೇ ಕಲ್ಪಿಸಿ ಪ್ರೇಮಿಸಿದ್ದೆವು, ಮುಂದಿನ ಜೀವನದ ಸುಂದರ ಶ್ರೀಮಂತ ಕನಸುಗಳ ಗೂಡು ಕಟ್ಟಿ ಹೆಣೆದೆವು. ಯಾವ ಗಳಿಗೆಯಲ್ಲಿ ಯಾರ ದೃಷ್ಟಿ ಬಿತ್ತೋ ಹೆಣೆದಿದ್ದ ಕನಸುಗಳ ಕುರುಹು ಇಲ್ಲದೇ ಛಿದ್ರವಾಗಿ ಹೋಯಿತು. ಅವ ಇನ್ನೂ ಶಾಶ್ವತ ಎನ್ನ ಮನದ ಗುಡಿಯಲಿ. ಅವನನ್ನು ಸೇರಲು ತವಣಿಸುತ್ತಿದ್ದ ನಾನು ಇಂದೇಕೆ ಸುಮ್ಮನಾಗಿ ಇರುವೆ. ಅವನನ್ನು ಕಾಣದ ದಿನಗಳು ಮಹಾಮಳೆ ಬಂದಂತೆ ಭಯಾನಕ ಕ್ರೂರವಾಗಿ ಕಂಡಿವೆ. " ಎಂದವಳ ಮನಸ್ಸಿನ ಕಾದಾಟವು ನಿಲ್ಲಲಿಲ್ಲ, ಒರಗಿ ನಿಂತಿದ್ದ ಕಂಬವ ತಬ್ಬಿ ನಿಂತಳು.


"ಅಂದು ಅವನು ನಮ್ಮಿಬ್ಬರ ಹೆಸರನ್ನು ಒಂದಾಗಿ ಬರೆದ ಕಂಬವಿದು, ಅವನು ಇಲ್ಲಿ ಮಾತ್ರ ನನಗೆ ಸ್ವಂತ. ಮಣ್ಣಲ್ಲಿ ಸೇರಿದ ಅವನ ದೇಹವು ಮಾತ್ರ ನಶ್ವರ. " ಇವಳ ಮಾತುಗಳೆಲ್ಲವನ್ನು ಕೇಳಿಸಿಕೊಂಡ ಇವನಿಗೆ ಅರ್ಥವಾದ ವಿಚಾರವೊಂದೆ ಇವಳ ಪ್ರೀತಿಸಿದವನು ಕಾಲವಾಗಿ ಹೋಗಿದ್ದಾನೆಂಬುವುದು. ಮನದ್ದಲ್ಲೇ ಸಮಧಾನವಾಗಿತ್ತು, ಮೊದಲ ನೋಟದಲ್ಲೇ ಇಷ್ಟವಾದ ಹುಡುಗಿಯನ್ನು ಹೇಗಾದರು ಮಾಡಿ ಸಮಧಾನಿಸಿ ಇವಳ ಪ್ರೀತಿಯ ದಕ್ಕಿಸಿಕೊಳ್ಳುವ ಅವಕಾಶ ಇನ್ನೂ ಇದೆ ಎಂಬುದು ಅರಿವಾಗಿತ್ತು.

" ಧಾಮಿನಿ, ನಿಮ್ಮ ಮನದ ನೋವಿನ ಅರಿವು ನನಗಾಗುತ್ತಿದೆ. ಪ್ರೀತಿಸಿದವರನ್ನು ಕಳೆದುಕೊಳ್ಳುವುದೆಂದರೆ ಅದು ಯಮ ನೀಡದ ಮತ್ತೊಂದು ಸಾವಿಗೆ ಸಮ. " ಎಂದನು.


" ಹಾಗಾಗಿಯೇ ನಾನು ಒಂದು ನಿರ್ಧಾರಕ್ಕೆ ಬಂದಿರುವುದು, ಯಮ ನೀಡದ ಸಾವು ಅನುಭವಿಸಿ ಆಯಿತು, ಈಗ ಯಮನನ್ನೇ ಬಳಿಗೆ ಕರೆಯುವೆ...... " ಎಂದು ಹೇಳಿ ಕ್ಷಣ ಮಾತ್ರಕ್ಕೇ ಕೃಷ್ಣನ ಗುಡಿಯಿಂದ ಜಿಗಿದಿದ್ದಳು.

ಕಣ್ಣ ರೆಪ್ಪೆಯ ಮುಚ್ಚಿ ತೆರೆಯುವಷ್ಟರಲ್ಲಿ ಧಾಮಿನಿ, ನೂರು ಅಡಿ ಎತ್ತರದ ಗುಡ್ಡದಿಂದ ಬಿದ್ದು ರಕ್ತ ಸಿಕ್ತವಾಗಿರುವಂತೆ ಇವನಿಗೆ ಕಂಡಳು. ಇವಳ ನಿರ್ಧಾರದ ಕಲ್ಪನೆಯೂ ಇರದವನಿಗೆ ಮೈಯಲ್ಲಾ ನಡುಕ ಶುರುವಾಗಿತ್ತು, ಇವನು, ಧಾಮಿನಿ ಜಿಗಿದ ಜಾಗದಿಂದಲೇ ಕೆಳಗೆ ಉರುಳಿದ. ಮೈಕೈಯನ್ನು ತರಚಿಕೊಂಡವನು, ಎದ್ದು ಧಾಮಿನಿಯನ್ನು ಹುಡುಕಲು ಮುಂದಾದ. ಒಂದು ಮರದ ಕೊಂಬೆಯು ಅವಳ ಬಳೆಗೆ ಸಿಕ್ಕು ನಿಲ್ಲಿಸಿತ್ತು. ಅವಳ ಹತ್ತಿರ ಹೋಗಿ ರಕ್ಷಿಸಿದ. ಧಾಮಿನಿಯ ಕೈಯಲ್ಲಿನ ಬಳೆ ಕೊಂಬೆಯಲ್ಲೇ ಉಳಿದಿತ್ತು.

ಇವನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ. ಪ್ರಜ್ಞೆಗೆ ಬಂದ ಧಾಮಿನಿ, ಗೋಕುಲ್ ಎಂದು ಕನವರಿಸುತ್ತಿದ್ದಳು. ಇವನು ಧಾಮಿನಿಯ ಹತ್ತಿರ ಓಡಿಬಂದ.


" ಧಾಮಿನಿ...... ಜಗವನ್ನೇ ಬಿಟ್ಟು ಹೋಗುವ ನಿರ್ಧಾರ ನಿನಗೆ ಸರಿ ಎನಿಸಿತೆ!? ನಿನ್ನನ್ನು ಬಾಳ ಸಂಗಾತಿಯಾಗಿ ಆಯ್ಕೆ ಮಾಡಿಕೊಂಡ ನನ್ನ ಮೇಲೆ ಯಾವುದೇ ಯೋಚನೆ ಇಲ್ಲವ ನಿನಗೆ. ಮದುವೆ ಆಗಿ ಒಂದು ದಿನವೂ ಕಳೆದಿಲ್ಲ..... ನಿನ್ನ ಮನಸ್ಸಿಗೆ ಒಂದು ಮಾತನ್ನು‌ ಕೂಗಿ ಹೇಳುತ್ತೀನಿ, ಧಾಮಿನಿ ನಿನ್ನನ್ನು ನಾನು ತುಂಬಾ ಪ್ರೀತಿಸುತ್ತಿದ್ದೀನಿ. ನನ್ನನ್ನು ದೂರ ಮಾಡಿ ಹೋಗಬೇಡ. ನಿನ್ನೆಲ್ಲಾ ಕಷ್ಟಗಳೂ ನನಗಿರಲಿ, ನನ್ನೆಲ್ಲಾ ಸುಖಗಳೂ ನಿನಗಿರಲಿ. ನಾನು ಗೋಕುಲ್ ಆಗಲು ಸಾಧ್ಯವಿಲ್ಲ, ಆದರೆ ನಾನು ಧರಣಿಯಾಗಿ ನಿನ್ನ ಪ್ರೀತಿಸಬಲ್ಲೇ..... "

" ಗೋಕುಲ್....... ಗೋಕುಲ್ " ಇವಳ ಧ್ವನಿ ಕೇವಲ ಗೋಕಲ್ ಆಗಿತ್ತು.


" ಮಿಸ್ಟರ್ ಧರಣಿ, ನಿಮ್ಮ ಹೆಂಡತಿಯವರು ಮುಂದೆ ತುಂಬಾ ತೊಂದರೆ ಎದುರಿಸಬೇಕಾಗುತ್ತದೆ. ಅವರಿಗೆ ಮಾನಸಿಕವಾಗಿ ತುಂಬಾ ಆಘಾತವಾಗಿದೆ. ದೇಹಕ್ಕಾಗುವ ಗಾಯವನ್ನು ಔಷಧಿಯಿಂದ ಗುಣಮಾಡಬಹುದು, ಆದರೆ ಮನಸ್ಸಿಗೆ ಆಗುವ ಗಾಯ ಗುಣಮಾಡಲು ಕಷ್ಟವಿಲ‌್ಲ. ಅದೂ ಅಲ್ಲದೇ, ಧಾಮಿನಿಯವರಿಗೆ ಮನಸ್ಸು ಮತ್ತು ದೇಹ ಎರಡಕ್ಕೂ ಅಗಾಧವಾದ ಗಾಯವಾಗಿದೆ. ಎಂದು ಅವರು ಮನಸಿಕವಾಗಿ ಸರಿ ಹೋಗುತ್ತಾರೊ ಅಂದೇ ಅವರ ದೇಹಕ್ಕೆ ಆಗಿರುವ ಗಾಯವೂ ಗುಣವಾಗಿತ್ತದೆ. ಮುಂದೆ ಎಷ್ಟು ದಿನಗಳೋ, ವರ್ಷಗಳೋ ನಾನು ಹೇಳಲಾರೆ, ಅವರನ್ನು ಮಗುವಂತೆ ನೋಡಿಕೊಳ್ಳಿ. ಧಾಮಿನಿ, ಧರಣಿಯನ್ನು ಒಪ್ಪುವುದಿಲ್ಲ ಗೋಕುಲ್ ಎಂಬುವುವವನೇ ಧಾಮಿನಿಯನ್ನು ಸರಿ ಮಾಡಬಲ್ಲ. "


" ಡಾಕ್ಟರ್ ಅದು ಸಾಧ್ಯವಿಲ್ಲ, ಗೋಕುಲ್ ರಸ್ತೆ ಅಪಘಾತದಲ್ಲಿ ಸತ್ತು ಹೋಗಿದ್ದಾರೆ. ಗೋಕುಲ್ ಹೇಗೆ..... " ಧರಣಿಯ ಪ್ರಶ್ನೆ. " ಹೌದು, ಗೋಕುಲ್ ಸತ್ತಿದ್ದಾನೆ, ಮರಳಿ ಬರುವುದಿಲ್ಲ ಇದು ವಾಸ್ತವ, ಧಾಮಿನಿ ಆ ವಾಸ್ತವವನ್ನು ಒಪ್ಪದಂತೆ ಅವಳ ಮನಸ್ಸು ಸಂಕುಚಿತವಾಗಿದೆ. ಅವಳಿಗೆ ಅವಳೇ ಗಡಿ ಹಾಕಿಕೊಂಡಿದ್ದಾನೆ. ಗೋಕುಲ್ ಹೇಗಿದ್ದ, ಹೇಗೆ ಮಾತನಾಡುತ್ತಿದ್ದ ಎಲ್ಲವನ್ನು ನೀವು ಮರು ಸೃಷ್ಟಿಸಬೇಕು. ನೀವೆ ಗೋಕುಲ್ ಎಂದು ಧಾಮಿನಿಗೆ ನಂಬಿಸಬೇಕು..... ಒಂದಲ್ಲಾ ಒಂದು ದಿನ ಗೋಕುಲ್ ಮರೆಯಾಗಿ ಹೋಗಬೇಕು. ಅದು ಅವಳ ಮನಸ್ಸು ಗಟ್ಟಿಯಾಗುವ ತನಕ ಮಾತ್ರ..... "

" ಡಾಕ್ಟರ್ ಇದು‌ ಸಾಧ್ಯಾನಾ..... "

" ಖಂಡಿತ ಸಾಧ್ಯ. ಮಕ್ಕಳು ಚಾಕಲೇಟ್ ಕಳೆದುಕೊಂಡಾಗ ಒಂದು ದಿನ ಅಳುತ್ತಾರೆ, ಅದಾದ ಮೇಲೆ ಮಾರನೆ ದಿನ ಸರಿ ಹೋಗುತ್ತಾರೆ. ಅಕಸ್ಮಾತ್ ಆಗಿ ಕಳೆದುಕೊಂಡ ವಸ್ತು ನಮ್ಮಿಂದ ಮರೆಯಾಗುವವರೆವಿಗೂ, ಕಳೆದುಕೊಂಡ ಮನಸ್ಸಿಗೆ ಸಮಧಾನ ಮಾಡುತ್ತಲೇ ಇರಬೇಕು.‌"

" ಸರಿ ಡಾಕ್ಟರ್...... "

ಅಂದಿನಿಂದ ಧಾಮಿನಿಗಾಗಿ ಬದಲಾದ ಧರಣಿ, ಗೋಕುಲ್ ನಂತೆ ಬಲಗೈ ಮೇಲೆ ಇವಳ  ಹಚ್ಚೆಯನ್ನು ಹಾಕಿಸಿಕೊಂಡ. ಅವನಂತೆ ನಡೆಯುವುದು, ಮಾತನಾಡುವುದು ಎಲ್ಲವನ್ನು ಕಲಿತ. ಧಾಮಿನಿಯ ಮನಸ್ಸಿಗೆ ಆಗಿರುವ ಗಾಯ ಮಾಯುವವರೆವಿಗೂ ಗೋಕುಲ್ ಆಗಿ ಬದಲಾಗಿದ್ದ. ಒಮ್ಮೊಮ್ಮೆ ಸ್ವತಃ ಧರಣಿಗೆ ನಾನು ಧರಣಿ ಎಂಬುದೇ ಮರೆತು ಹೋಗುತ್ತಿತ್ತು. ಬೇರೊಂದು ಮನೆಯನ್ನು ಮಾಡಿ ಅಲ್ಲಿಯೇ ಧಾಮಿನಿಯೊಡನೆ ದಿನಗಳ ಕಳೆಯುತ್ತಿದ್ದ. ಕುತ್ತಿಗೆಗೆ ಸರವನ್ನು ಹಾಕಲು ಹಿಂಜರಿಯುತ್ತಿದ್ದ ಧರಣಿ, ಗೋಕಲನಂತೆ ಕಾಣಲು ಕುತ್ತಿಗೆಗೆ ಕರಿದಾರ ಕಟ್ಟಿಕೊಂಡಿದ್ದ. ಪ್ರತಿದಿನ ಜೊತೆಯಲ್ಲೇ ಇದ್ದರೂ ಧಾಮಿನಿ, ಗೋಕುಲನಿಗಾಗಿ ಬೇಟಿ ಮಾಡಲು ಆ ಕೃಷ್ಣನ ಗುಡ್ಡಕ್ಕೆ ಹೋಗಬೇಕಿತ್ತು.


ಧರಣಿಯನ್ನೇ ಗೋಕುಲ್ ಎಂದು ಭಾವಿಸಿ, ಹೆಗಲ ಮೇಲೆ ಮಲಗಿ ಪ್ರೀತಿ ನೀಡುತ್ತಿದ್ದಳು ಧಾಮಿನಿ, ಗೋಕುಲನ ಮೇಲಿಟ್ಟಿದ್ದ ಪ್ರೀತಿಯನ್ನು ಊಹಿಸಿ ಕಣ್ತುಂಬಿಕೊಂಡು ಭಾವುಕನಾಗುತ್ತಿದ್ದ ಧರಣಿ. ಗೋಕುಲ್ ಆಗಿ ಅಲ್ಲ ಒಮ್ಮೊಮ್ಮೆ ಧರಣಿಯಾಗಿ ಧಾಮಿನಿಯನ್ನು ಮನಸಾರೆ ಪ್ರೀತಿಸಿದ. ಇನ್ನೆಷ್ಟು ವರ್ಷಗಳು ಹೀಗೆ ಕಳೆಯಬೇಕೆಂದು ದಿನ ಯೋಚಿಸುತ್ತಿದ್ದ ಧರಣಿಗೆ ಶುಭಸುದ್ದಿ ಕಾದಿತ್ತು.


ಧಾಮಿನಿ, ಗೋಕಲನ ನೆನೆಪಾಗಿ ಅವನ ಮನೆಗೆ ಹೋಗಬೇಕೆಂದು ಹೊರಟಿದ್ದಳು. ನಿಜವಾದ ಗೋಕುಲನ ಮನೆಯ ದಾರಿ ಹಿಡಿದಳು, ಗೋಕುಲನ ಮನೆಯೊಳಗೆ ಹೋದ ಧಾಮಿನಿಯ ಎದುರಿಗೆ ಗೋಕುಲನ ಚಿತ್ರಪಟವು ಕಂಡಿತು. ಹಾರ ಹಾಕಿದ್ದ ಚಿತ್ರಪಟ, ಗೋಕುಲನ ಮುಖ ಮತ್ತು ಗೋಕುಲನಂತೆ ನಟಿಸುತ್ತಿದ್ದ ಧರಣಿಯ ಮುಖ ಕಣ್ಣೆದುರು ಬಂದು ಗೋಜಲು ಗೋಜಲಾಗಿ ತಲೆತಿರುಗಿ ಅಲ್ಲಿಯೇ ಬಿದ್ದಳು. ಗೋಕುಲನ ತಾಯಿ ಧಾಮಿನಿಯನ್ನು ಎಚ್ಚರಗೊಳಿಸಿ, ಧರಣಿಗೆ ಕರೆಮಾಡಿದರು. ಧರಣಿ ಭಯಗೊಂಡು ಇವಳ ಬಳಿಗೆ ಓಡಿಬಂದನು. ಧರಣಿಯನ್ನು ದಿಟ್ಟಿಸಿ ನೋಡಿ ಗೊಂದಲಕ್ಕೀಡಾದಳು ಧಾಮಿನಿ.


" ನೀನು..... ನೀನು.... ಯಾರು? ನೋಡಲು ಗೋಕುಲನಂತೆ ಇದ್ದೀಯ ಆದರೆ ನನ್ನ ಗೋಕುಲ್ ಸತ್ತು ತುಂಬಾ ದಿನವಾಯ್ತು, ಅವನ ಬಳಿಗೆ ಹೋಗಬೇಕು ನಾನು, ಪಾಪ ಗೋಕುಲ್ ಒಬ್ಬನೇ ಇದ್ದಾನೆ ಅಲ್ಲಿ.... " ಎಂದು ಹೇಳಿ ಅಲ್ಲಿಂದ ಓಡಿಹೋದಳು. ಕಣ್ಣೀರು ತುಂಬಿದ್ದ ಧರಣಿ ಎಚ್ಚೆತ್ತು, ಧಾಮಿನಿಯ ಹಿಂದೆಯೇ ಹೋದ.

" ಗೋಕುಲ ನೀನು ಸತ್ತು ನೆಮ್ಮದಿಯಿಂದ ಇದ್ದೀಯ, ನೋಡು ಆ ಹುಡುಗಿ ಪಾಪ. ಹೇಗಾಗಿದ್ದಾಳೆ, ಯಾಕೆ ಇಷ್ಟು ದೊಡ್ಡ ಶಿಕ್ಷೆ ಕೊಟ್ಟೆ ಅವಳಿಗೆ. ಆ ಹುಡುಗ ಮದುವೆಯಾಗಿರುವ ಹುಡುಗಿ ಹುಚ್ಚಿ ಆಗಿದ್ದರೂ, ಅವಳನ್ನು ಹೂವಿನಂತೆ ನೋಡಿಕೊಳ್ಳುತ್ತಿದ್ದಾನೆ. ಕರುಳು ಕಿತ್ತು ಬರುತ್ತಿದೆ ಕಣೊ ಗೋಕುಲ್. ಈ ತಾಯಿ ಹೃದಯ ನಿನ್ನ ಸಾವನ್ನು ಒಪ್ಪಿ ಮರೆತೇ ಬಿಟ್ಟಿದೆ, ಆದರೆ ಅವಳು ಇನ್ನೂ ನಿನ್ನ ನೆನಪಿನಲ್ಲೇ ಒದ್ದಾಡುತ್ತಿದ್ದಾಳೆ. ನೀನು ನಿಜಕ್ಕೂ ಧಾಮಿನಿಯನ್ನು ಪ್ರೀತಿಸಿದ್ದರೆ, ಯಾವುದಾದರು ಒಂದು ರೂಪದಲ್ಲಿ ಬಂದು ಧಾಮಿನಿಯನ್ನು ಸರಿ ಮಾಡೊ. " ಜೀವವಿಲ್ಲದ ಗೋಕುಲನ ಬಳಿ ಬೇಡಿಕೊಂಡವರು ಅಲ್ಲೆ ಕುಸಿದು ತಲೆ ಮೇಲೆ ಕೈ ಹೊತ್ತು ಕುಳಿತರು ಗೋಕುಲನ ತಾಯಿ.


ಮನದಲ್ಲಿ ಗೋಕುಲನ ನೆನಪನ್ನೇ ತುಂಬಿಕೊಂಡ ಧಾಮಿನಿ ನಡೆದು ಹೋಗುತ್ತಲೇ ಇದ್ದಳು‌. ಗಾಳಿ - ಬಿಸಿಲು ಇದ್ಯಾವುದನ್ನು ಗಮನಿಸುತ್ತಿರಲಿಲ್ಲ ಅವಳು. ಅಳುತ್ತಾ ಹೆಜ್ಜೆಯನ್ನು ಹಿಡುತ್ತಿದ್ದ ಧಾಮಿನಿಯ ಹಿಂದೆ ಹಿಂದೆ ಧರಣಿಯೂ ಹೋಗುತ್ತಿದ್ದ. ಧಾಮಿನಿ ಎಷ್ಟು ವೇಗವಾಗಿ ಹೋಗುತ್ತಿದ್ದಳೆಂದರೆ ಧರಣಿಗೆ ಅವಳ ಸಮಾನ ಹೋಗಲು ಓಡಬೇಕಾಗಿತ್ತು. ಧಾಮಿನಿ ರಸ್ತೆ ಎಂದು ನೋಡದೇ ರಸ್ತೆಯ‌ ಮಧ್ಯದಲ್ಲೇ ಹೋಗಿ ನಿಂತಳು. ಧರಣಿ ಇವಳ ಹಿಂದೆ ನಿಂತುಕೊಂಡ. ಕುಸಿದು ಕುಳಿತಳು ಧಾಮಿನಿ, ಆಕಾಶದ ಪಕ್ಷಿಗೂ ಇವಳ ನೋವು ಮುಟ್ಟುವಂತೆ ಕಿರುಚಿದ್ದಳು. ಆಂತರ್ಯದ ನೋವು ಅದು.


" ಇಲ್ಲೇ ಇಲ್ಲೇ ನನ್ನ ಗೋಕುಲ್ ಬಿದ್ದಿದ್ದು, ನನ್ನ ಬಿಟ್ಟು ಹೋಗಿದ್ದು ಇದೇ ಜಾಗದಲ್ಲಿ. ನನ್ನ ಬಿಟ್ಟು ಯಾಕೆ ಹೋದೆ, ನಿನಗಾಗಿ ಜೀವನ ಮುಡಿಪೆಂದೆ, ಅರ್ಧ ದಾರಿಯಲೇ ನನ್ನನ್ನು ಬಿಟ್ಟು ಕಾಣದೇ ಎಲ್ಲಿ ಹೋದೆ. ಜೀವ ಹಿಂಡುವ ಬದಲು, ಜೀವ ತಗೆದುಕೊಂಡು ಬಿಡು. ಕನಸಿನ ಗೂಡು ಕಟ್ಟಿ ಅದನ್ನೆಲ್ಲಾ ನಿನ್ನ ಜೊತೆಗೆ ತೆಗೆದುಕೊಂಡು ಹೋಗಿಬಿಟ್ಟೆ. ಗೋಕುಲ್ ಯಾಕೆ ನನ್ನ ಬಿಟ್ಟು ಹೋದೆ..... ಮರಳಿ ಬಾ, ದಯಮಾಡಿ ಒಮ್ಮೆ, ಸಮಧಾನ ಪಡಿಸುವ ನೆಪದಲ್ಲಾದರೂ. ನೀನಿಲ್ಲ ಎಂಬ ಸತ್ಯವನ್ನಾದರೂ ಹೇಳಲು, ಮರಳಿ ಬಾ ಗೋಕುಲ್ ಗೋಕುಲ್ ಸತ್ತ ಜಾಗದಲ್ಲೇ ತಲೆಯಿಟ್ಟು ಮಲಗಿದಳು, ಅವನ ಗುಂಗಿನಲೇ ಮುಳುಗಿ ಹೋಗಿದ್ದ ಧಾಮಿನಿ ಪ್ರಜ್ಞೆ ತಪ್ಪಿದ್ದಳು.


ಧಾಮಿನಿಯನ್ನು ಮನೆಗೆ ಕರೆದುಕೊಂಡು ಬಂದ ಧರಣಿ, ಸೋಪಾದ ಮೇಲೆ ಮಲಗಿಸಿದ. ಗೋಕುಲನಂತೆ ವೇಷವನ್ನು ಕಳಚಿಟ್ಟ, ಧರಣಿಯಾಗಿ ಕನ್ನಡಿ ಮುಂದೆ ನಿಂತ.


" ಇಂದೇ ಕೊನೆಯ ಪರೀಕ್ಷೆ, ಧಾಮಿನಿ ನನ್ನನ್ನು ಗಂಡನೆಂದು ಒಪ್ಪಿಕೊಳ್ಳಬೇಕು. " ಎಂದುಕೊಂಡು ಧಾಮಿನಿಯ ಕಡೆಗೆ ಹೋದ. ಧಾಮಿನಿ ಎದ್ದು, ಮೊಬೈಲ್ ನಲ್ಲಿ ಯಾರ ಜೊತೆಗೊ ಮಾತನಾಡುತ್ತಿದ್ದಳು. ಧಾಮಿನಿ ಒಂದು ಮೂಲೆ ಸೇರಿಬಿಟ್ಟಳು, ಆ‌ ದಿನವನ್ನು ಧಾಮಿನಿ ಒಬ್ಬಂಟ್ಟಿಯಾಗಿ ಕಾಲ ಕಳೆದಳು. ತೊಂದರೆ ಕೊಡಲು ಇಚ್ಚಿಸದೇ ಸುಮ್ಮನಾದ ಇವನು. ಮಾರನೆ ದಿನ ಸ್ವತಃ ಧಾಮಿನಿಯೇ ಧರಣಿಯನ್ನು ಹುಡುಕಿ ಬಂದಳು. " ನಾನು ಕೃಷ್ಣನ ಗುಡಿಗೆ ಹೋಗಬೇಕು, ನೀವು ಧರಣಿ, ನನಗೆ ತಾಳಿ ಕಟ್ಟಿದವರು, ನೆನಪಿದೆ..... " ಎಂದು ಸಮಧಾನದಿಂದಲೇ ಹೇಳಿ ಹೋದಳು. ಧರಣಿಗಾದ ಖುಷಿ ಹೇಳತೀರದು. ಕೃಷ್ಣನ ಗುಡಿಗೆ ತೆರಳಿದ ಇಬ್ಬರು ಮೌನ ತಾಳಿದ್ದರು. " ನಾನು ಹುಚ್ಚಿಯಂತೆ, ನನ್ನ ಅಮ್ಮ ಹೇಳಿದರು. ಇಷ್ಟು ದಿನ ನಾನು ಹೇಗಿದ್ದೆ ಒಂದೂ ನೆನಪಿಲ್ಲ,


ನೆನಪಿರುವುದು ಗೋಕುಲ್, ಅವನ ಸೇರ ಬೇಕೆಂದೇ ಇಲ್ಲಿಂದ ಜಿಗಿದದ್ದು, ಅದಾದ ಮೇಲೆ ಎಲ್ಲಾ ಅಸ್ಪಷ್ಟ, ಅಸ್ಪಷ್ಟ ಗೋಕುಲನ ಇರುವಿಕೆ, ಅಸ್ಪಷ್ಟ ಗೋಕುಲನ ಸಾಂಗತ್ಯ, ಅಸ್ಪಷ್ಟ ಗೋಕುಲನ ಪ್ರೀತಿ, ಅಸ್ಪಷ್ಟ ಗೋಕುಲನ ಸ್ಪರ್ಶ. ಅಸ್ಪಷ್ಟ ಕೇವಲ ಗೋಕುಲ್, ಆದರೆ ಪ್ರೀತಿ ಸಾಂಗತ್ಯ ಸ್ಪರ್ಶ ಇವೆಲ್ಲವೂ ಸ್ಪಷ್ಟವಾಗಿ ನೆನಪಿದೆ. ಆ ಪ್ರೀತಿ ಸಾಂಗತ್ಯ ಕೊಟ್ಟಿದ್ದು ಗೋಕುಲನಂತೆ ಇದ್ದ ನೀವು ತಾನೆ. ನನಗೆ ಡಾಕ್ಟರ್ ಎಲ್ಲವನ್ನು ಹೇಳಿದ್ದಾರೆ, ಆವತ್ತು ಪೋನ್ ಕರೆ ಡಾಕ್ಟರ್‌ದು. ನಾನು ಇಷ್ಟು ದಿನ ಹೇಗಿದ್ದೆ, ಏನಾಗಿದ್ದೆ, ಎಲ್ಲವನ್ನು ಹೇಳಿದರು.

"ಧಾಮಿನಿ,‌ ನಿನ್ನ ಪ್ರೀತಿ ಅಚ್ಚ ಹಸಿರು, ಗೋಕುಲನಾಗಿಯೇ ಇದ್ದು ಜೀವನ ಸವೆಸಿ ಬಿಡಬೇಕು ಎನಿಸುತ್ತಿದೆ ನನಗೆ. ಧಾಮಿನಿ...... ಇಷ್ಟೆಲ್ಲ ನಡೆದ ಮೇಲು ನಾನು ಧರಣಿ ಎನ್ನುವ ಕಾರಣಕ್ಕೆ ನನ್ನಿಂದ ದೂರ ಹೋಗಬೇಡ. ಹೇಳು ಮನಸ್ಸಾರೆ ಹೇಳು, ಗೋಕುಲನಂತೆ ನಾನು ಬದಲಾಗಿ ನಿನ್ನ ಶುದ್ಧ ಒಲವನ್ನು ಪಡೆದು ಜೀವಿಸುತ್ತೇನೆ. ಒಂದೇ ಒಂದು ಅವಕಾಶ ಕೊಡು ಧಾಮಿನಿ, " ಧಾಮಿನಿ ಕಣ್ಣಲ್ಲಿ ಕಣ್ಣಿಟ್ಟು ಹೇಳಿದ. ಬಲಗೈ ಮೇಲಿದ್ದ ಇವಳ ಹಚ್ಚೆಯ ಗಮನಿಸಿ ಧಾಮಿನಿ ಇವನ ಕಡೆಯಿಟ್ಟ ನೋಡ ಬದಲಿಸಲಿಲ್ಲ.


" ವೇಷಭೂಷಣವೆಲ್ಲ ಸುಳ್ಳಾದರೂ, ಹಚ್ಚೆ ಮಾತ್ರ ನಿಜವೇಕೆ..... ಗೋಕುಲನಂತೆ ಬದಲಾಗಿ ಮಾತ್ರವೇ, ನನಗೆ ಪ್ರೀತಿ ಕೊಡಲು ಸಾಧ್ಯವೇ! ಗೋಕುಲ್ ಸತ್ತಿದ್ದಾನೆ, ಅವನ ಬದಲಾಗಿ ನನ್ನ ಜೀವನದಲ್ಲಿ ಯಾರೂ ಸ್ಥಾನ ತುಂಬಲು ಸಾಧ್ಯವಿಲ್ಲ. ಆದರೆ..... ಧರಣಿಯಾಗಿ ಧಾಮಿನಿಯ ಜೀವನ ತುಂಬಲು ಸಾಧ್ಯವಿದೆ. " ತನಗಾಗಿ ಧರಣಿಯ ತ್ಯಾಗದ ಅರಿವು ಮಾಡಿಕೊಂಡಳು, ಧರಣಿಯನ್ನು ಬಿಗಿಯಾಗಿ ಅಪ್ಪಿಕೊಂಡಳು. ಧಾಮಿನಿಯ ಮನಸು ಬದಲಾಗಿರುವುದನ್ನು ಅರಿತ ಧರಣಿ ಇವಳನ್ನು ಸಂಪೂರ್ಣ ಸತಿಯನ್ನಾಗಿ ಸ್ವೀಕರಿಸಿದ. ಧರಣಿಯಲ್ಲೆ ಗೋಕುಲನುಸಿರ ಮರಳಿ ಅನುಭವಿಸಿದ ಧಾಮಿನಿ ವಾಸ್ತವ ಸತ್ಯವನ್ನು ಒಪ್ಪಿಕೊಂಡಿದ್ದಳು. ಅಂದು ಗೋಕುಲನು ಗುಡಿಯ ಕಂಬದ ಮೇಲೆ ಬರೆದಿದ್ದ ಹೆಸರು ಧಾಮಿನಿಧರಣಿಯಾಗಿ ಬದಲಾಗಿತ್ತು. ಗೋಕುಲನೆಂಬ ಪ್ರೇಮಿಯ, ಆತ್ಮದ, ನಿಮ್ಮದಿಯ ಉಸಿರು ಶುದ್ಧ ಗಾಳಿಯ ರೂಪತಾಳಿತ್ತು. ಭುಗಿಲೆದ್ದ ಗಾಳಿಯು ಅಂದು ಕೊಂಬೆಗೆ ಸಿಲುಗಿದ್ದ ಧಾಮಿನಿಯ ಬಳೆಯು, ಹಾರಿ ಇವಳ ಕಾಲ ಬಳಿಗೆ ಬಂದು ಬಿದ್ದಿತ್ತು. ಅದನ್ನು ತೆಗೆದುಕೊಂಡ ಧಾಮಿನಿ ದುಃಖ ತಪ್ತಳಾದಳು.


" ಇದು ಗೋಕುಲ್ ನನಗಾಗಿ ಕೊಟ್ಟಿದ್ದು...... " ಅದನು ಎದೆಗವಚಿಕೊಂಡು ಅತ್ತಳು. " ನೀನು ಯಾವಾಗಲೂ ನನ್ನಲ್ಲೇ ಇರುತ್ತೀಯ ಗೋಕುಲ್" ಎಂದಳು. ಧರಣಿಯ ಹೆಗಲ ಮೇಲೆ ತಲೆಯಿಟ್ಟ ಧಾಮಿನಿ,

" ಕೃಷ್ಣ ರಾಧೆಯಂತೆ, ನಾನು ಅವನು ದೂರವಾದೆವು, ಆದರೂ ಅವನು ನನ್ನ ಪ್ರೇಮಿ.........." ಧಾಮಿನಿಯ ಮನವು ದಿನಕಳೆದಂತೆ ತಿಳಿಯಾಗಿತು. ಧರಣಿಯ ಪ್ರೀತಿಯ ನೋಡಿ ಮೂಕಳಾಗುವ ಇವಳು, ಅವನ ಒಲವನೊಳಗೆ ಮಗುವಾಗಿ ಜೀವಿಸಿಬಿಟ್ಟಳು. ಇವರಿಬ್ಬರಿಗೂ ಯಾವ ತೊಂದರೆಯೂ ಹತ್ತಿರ ಸುಳಿಯ ಬಾರದೆಂದು ಕಾವಲು ಕಾಯುತ್ತಾ ಸಂತೋಷಪಡುತ್ತಿದ್ದದ್ದು ಮೇಲಿದ್ದ ಗೋಕುಲನ ಆತ್ಮ.


Rate this content
Log in

Similar kannada story from Drama