ಸುಖದ ಸಂಸಾರ
ಸುಖದ ಸಂಸಾರ
ಒಮ್ಮೆ ಮನೆ ಯಜಮಾನನ ಕನಸಲ್ಲಿ ದೇವರು ಬಂದು ಕೇಳಿದ ನೋಡಪ್ಪಾ, ನಾನು ನಿಮ್ಮನ್ನ ಬಿಟ್ಟು ಹೋಗಬೇಕೆಂದು ಇದ್ದೇನೆ .ಹೋಗುವ ಮೊದಲು ಏನಾದರೊಂದು ವರ ಕೊಡಬೇಕು
ಎಂದು ನನಗೆ ಮನಸಾಗಿದೆ ಕೇಳು ಎಂದಾಗ ತಕ್ಷಣ ಏನೂ ಹೊಳೆಯದೆ ನನಗೆ ಒಂದು ದಿನ ಸಮಯ ಕೊಡು ಎಂದು ಕೇಳಿದಾಗ ಒಪ್ಪಿ ಮರೆಯಾದ.ಹೆಂಡತಿ ಮಕ್ಕಳನ್ನು ಹತ್ತಿರ ಕರೆದ
ಒಂದು ವರ ಕೇಳಲು ದೇವರು ಹೇಳಿದ್ದಾನೆ . ನಾಳೆ ಮತ್ತೆ ಬರುವುದರ ಒಳಗೆ ನಾನು ತಿಳಿಸಬೇಕು. ನಿಮಗೆ ಏನು ಬೇಕು ಹೇಳಿ ಎಂದ. ಅದಕ್ಕೆ ಹೆಂಡತಿ ಈ ಊರಲ್ಲಿ ಯಾರಹತ್ತಿರಾನೂ ಇರದಷ್ಟು ಬಂಗಾರದ ಒಡವೆ, ಸೀರೆ ನನ್ನ ಹತ್ತಿರ ಇರಬೇಕೆಂದು ಕೇಳಿ ಕೊಳ್ಳಿ ಎಂದಾಗ ಮಗ ಹೇಳಿದ ಅಪ್ಪ ನಿನಗ
ೊಂದು ನನಗೊಂದು ವಿದೇಶಿ ಕಾರು ಮತ್ತು ನನಗೆ ಪರೀಕ್ಷೆ ಬರೆಯದೆ ರಾಂಕ್ ಬರಬೇಕು ಹಾಗೆ ಕೇಳಿಕೊ ಅಂದ ಅಷ್ಟರಲ್ಲಿ ವಯಸ್ಸಾದ ಅವನ ತಾಯಿ ಬಂದು ಮಗನೇ ಇದು ಯಾವುದೂ ಶಾಶ್ವತ ವಲ್ಲ . ಮನಸ್ಸಿಗೆ ನೆಮ್ಮದಿ ಮತ್ತು ಆರೋಗ್ಯ ಇದ್ದು ಸಂಸಾರ ನಡೆಸಿಕೊಂಡು ಹೋಗುವಷ್ಟು ಹಣ ಮಾತ್ರ ಬೇಕೆಂದು ಕೇಳಿಕೊ ಎಂದಾಗ ಆಯ್ತು ಅಂದ. ಹೇಳಿದಂತೆ ದೇವರು ಬಂದಾಗ ತಾಯಿ ಹೇಳಿಕೊಟ್ಟ ಹಾಗೆ ಹೇಳಿದ. ಆಗ ದೇವರು ನಕ್ಕು ನಾನು ನಿಮ್ಮನ್ನ ಬಿಟ್ಟು ಹೋಗುತ್ತಿದ್ದೇನೆ ಎಂದು ಹೇಳಿದ್ದು ನಿಮಗೆ ಆಸೆಗಳು ಹೆಚ್ಚುತ್ತಾ ಹೋಗಿದ್ದ ಕಾರಣ. ಈಗ ಏನು ಬೇಡ ಆರೋಗ್ಯ ನೆಮ್ಮದಿ ಮಾತ್ರ ಬೇಕೆಂದರೆ ನಾನು ನಿಮ್ಮೊಂದಿಗೆ ಇರಬೇಕಾಗುತ್ತದೆ ಅಂದಾಗ ಯಜಮಾನನಿಗೆ ನಿದ್ದೆಯಿಂದ ಎಚ್ಚರವಾಯಿತು.