Ranjtha hebbar m

Horror

4.2  

Ranjtha hebbar m

Horror

ಸೊಪ್ಪವ್ವ

ಸೊಪ್ಪವ್ವ

4 mins
375


ಬೃಹತ್ ಮರಗಳಿಂದ ಆವರಿಸಿರುವ ಕತ್ತಲೆ ತುಂಬಿರುವ ಕಾಡು ದೂರದಿಂದ ನೋಡುವವರ ಕಣ್ಣಿಗೆ "ಭಯಾನಕ ದೃಶ್ಯದಂತೆ" ಕಾಣುತಿತ್ತು". ಇಂತಹ ದಟ್ಟ ಕಾಡಿನ ನಡುವೆ ಇರುವ ಪುಟ್ಟ ಹಳ್ಳಿಯಲ್ಲಿ ಕಾಳಪ್ಪ ತನ್ನ ಕುಟುಂಬದೊಂದಿಗೆ ವಾಸವಾಗಿದ್ದ. ಇವನ ಮನೆ "ಬೆಟ್ಟದ ಮೇಲೆ" ಇತ್ತು. ಹಾಗಾಗಿ ಇವನ‌ ಮನೆಯನ್ನು ಎಲ್ಲರೂ "ಬೆಟ್ಟದ ಮನೆ" ಎಂದು ಕರೆಯುತ್ತಿದ್ದರು. ಇವರ ಮನೆಯ ಬಳಿ ಬೇರೆ ಯಾರ ಮನೆಯೂ ಇರದ ಕಾರಣ ಇದು ಒಂಟಿ ಮನೆಯೂ ಆಗಿತ್ತು. ಕಾಳಪ್ಪನಿಗೆ ತನ್ನದೇ ಆದ ಸಣ್ಣ ತೋಟವಿತ್ತು. ಅದೇ ಇವನ ಜೀವನಾಧಾರವಾಗಿತ್ತು. ಇವನ ಹೆಂಡತಿ ಮಲ್ಲಿಗೆವ್ವನು ಸಹ ತಮ್ಮದೇ ತೋಟದಲ್ಲಿ ಕೆಲಸ ಮಾಡಲು ಬೆಳಗ್ಗೆ ಹೋದರೆ ಮನೆಗೆ ಸಂಜೆಯೇ ಬರುತ್ತಿದ್ದದ್ದು. ಇವರ ಮಕ್ಕಳು ದೂರದ ನೆಂಟರ ಮನೆಯಲ್ಲಿ ಇದ್ದುಕೊಂಡು ಶಾಲೆಗೆ ಹೋಗುತ್ತಿದ್ದರು. ಅವತ್ತು ಬೆಳಿಗ್ಗೆ ಮುಂಜಾನೆಯೇ ಕಾಳಪ್ಪ ಕಷಾಯಕ್ಕೆಂದು ಕಷಾಯದ ಬೇರು ತರಲು ಕಾಡಿಗೆ ಹೋಗಿದ್ದ. ಆ "ಭಯನಕವಾದ ಕಾಡಿನಲ್ಲಿ" ಕಷಾಯದ ಬೇರನ್ನು ಹುಡುಕುವಾಗ ಕಾಳಪ್ಪನ ಕಾಲಿಗೆ ಸೀಗೆಮುಳ್ಳೊಂದು ಚುಚ್ಚಿತು. ಮೊದಲಿನಿಂದಲೂ ಆ ಕಾಡಿನಲ್ಲಿ "ಅಧಿಸಾಮಾನ್ಯ ಚಟುವಟಿಕೆಗಳು" ನಡೆಯುತ್ತವೆ ಎಂದು ಅಲ್ಲಿಗೆ ಹೋಗಲು ಆ ಹಳ್ಳಿಯ ಜನ ಬಹಳಾ ಹೆದರುತ್ತಿದ್ದರು. ಮುಳ್ಳು ಚುಚ್ಚಿ ಗಾಯವಾದ ಕಾಳಪ್ಪನ ಕಾಲ ಹಿಮ್ಮಡಿಯಿಂದ ರಕ್ತ ಜಿನುಗುತಿತ್ತು. ಹೇಗೋ ನಿಧಾನವಾಗಿ ಕುಂಟುತ್ತಾ ಸಿಕ್ಕ ಮರಗಳ ಹಿಡಿದುಕೊಂಡು ಮನೆಗೆ ಬಂದು ಸೇರಿದ. ಆದರೆ ಮನೆಯಲ್ಲಿ ಮಲ್ಲಿಗೆವ್ವ ಇರಲಿಲ್ಲ. ತೋಟಕ್ಕೇನೇದರೂ ಹೋಗಿರಬಹುದು ಮೊನ್ನೆಯಿಂದಲೂ ಹೇಳುತ್ತಿದ್ದಳು ತೋಟದ ತುಂಬಾ ಕಳೆ ಬೆಳೆದಿದೆ ಅದನೆಲ್ಲಾ ತೆಗೆದು ಹಾಕಬೇಕು ಎಂದು. ಬಹುಶಃ ಅದಕ್ಕಾಗಿಯೇ ತೋಟಕ್ಕೆ ಹೋಗಿರಬೇಕೆಂದು ಮನದಲ್ಲೇ ಯೋಚಿಸಿದವನೇ ಮನೆಯಯೊಳಗೆ ಕುಂಟುತ್ತಾ ಹೋಗಿ ಅಲ್ಲೇ ಇದ್ದ ಕುರ್ಚಿಯ ಮೇಲೆ ಕುಳಿತ. ಕಾಲಿಗೆ ಚುಚ್ಚಿದ್ದ ಮುಳ್ಳನ್ನು ತೆಗೆದು ಅದಕ್ಕೆ ಸ್ವಲ್ಪ ಅರಿಷಿನದ ಹುಡಿ ಹಾಕಿದ. ಅರಿಷಿನದ ಹುಡಿ ಗಾಯಕ್ಕೆ ಬೀಳುತ್ತಲೇ ಮತ್ತು ಉರಿ ಜಾಸ್ತಿಯೇ ಆಯಿತು. ಹೇಗೋ ಆಗುತ್ತಿದ್ದ ನೋವನ್ನು ತಡೆದುಕೊಂಡು ಬಟ್ಟೆಯೊಂದನ್ನು ಅಂಗಾಲಿಗೆ ರಕ್ತ ಹೊರಬರದಂತೆ ಕಟ್ಟಿದ. ಕಾಲಿಗೆ ಆದ ನೋವಿನಿಂದ ಆಯಾಸಗೊಂಡವನಿಗೆ ಕುರ್ಚಿಯ ಮೇಲೆ ಕುಳಿತಲ್ಲೇ ನಿದ್ರೆಯಾವರಿಸಿತು. ಸ್ವಲ್ಪ ಹೊತ್ತಿಗೆ ಯಾರೋ ಬಾಗಿಲು ಬಡಿಯುತ್ತಿರುವಂತೆ ಕೇಳಿಸಿತು. ಆ ಸದ್ದಿಗೆ ಎಚ್ಚರಗೊಂಡ ಕಾಳಪ್ಪ ಕುಂಟುತ್ತಾ ಹೋಗಿ ಬಾಗಿಲು ತೆರೆದ. ಅಲ್ಲಿ ವಯಸ್ಸಾದ ಮುದುಕಿಯೊಬ್ಬಳು ತನ್ನ ತಲೆಯಮೇಲೆ ಸೊಪ್ಪಿನ ಬುಟ್ಟಿಯೊಂದನ್ನು ಹೊತ್ತುಕೊಂಡು ನಿಂತಿದ್ದಳು. "ಮಗಾ ಸೊಪ್ಪು ತಗಾ ನಿಂಗೆ ಪುಣ್ಯ ಬರುತ್ತೆ" ಅಂದಳು. ಸೊಪ್ಪೆಲ್ಲಾ ಬೇಡ ಅಜ್ಜೀ ನಮಗೆ ನೀನು ಹೋಗು ಎಂದ ಕಾಳಪ್ಪ. ಹಾಗೇಳಬೇಡ ಮಗಾ, ಅಷ್ಟು ದೂರದಿಂದ ಬಿಸಿಲಾಗೆ ಬಂದಿದೀನಿ ಸೊಪ್ಪು ತಗಾ ಮಗಾ, ಆರೋಗ್ಯಕ್ಕೆ ಒಳ್ಳೇದು ಅಂದಳು. ಕಾಳಪ್ಪನಿಗೆ ಆ ಮುದುಕಿಯನ್ನು ನೋಡಿ ತನ್ನ ಅಜ್ಜಿಯದೇ ನೆನಪಾಯಿತು. ಸರಿ ಆಯಿತು, ಬಂದು ಇಲ್ಲಿ ಕಟ್ಟೆಯ ಮೇಲೆ ಕುಳಿತುಕೋ ಅಜ್ಜಿ. ಒಂದು ಕಟ್ಟು ಸೊಪ್ಪಿಗೆ ಎಷ್ಟು ಎಂದು ಕೇಳಿದ ಕಾಳಪ್ಪ. ಒಂದು ಕಟ್ಯಾಕೆ ಎರಡು ಕಟ್ಟು ತಗಾ ಮಗಾ, ಇಪ್ಪತ್ತು ರುಪಾಯಿ ಅಷ್ಟೆ ಎಂದಳು ಅಜ್ಜಿ. ಇಪ್ಪತ್ತು ರುಪಾಯಿಯ ಕೊಟ್ಟು ಎರಡು ಕಟ್ಟು ಹರಿವೆ ಸೊಪ್ಪನ್ನು ತೆಗೆದುಕೊಂಡ ಕಾಳಪ್ಪ. ಅದನ್ನು ಅಡಿಗೆಯಮನೆಯ ಪಾತ್ರೆಯೊಳಗಿದ್ದ ತರಕಾರಿಗಳ ಜೊತೆ ಇಟ್ಟ. ಅಜ್ಜೀ ನಿನ್ನ ಊರು ಯಾವುದು? ಈ ವಯಸ್ಸಿನಲ್ಲೂ ಯಾಕೆ ಕೆಲಸ ಮಾಡುತ್ತಿದ್ದೀಯಾ, ನಿನಗೆ ಯಾರು ಇಲ್ಲವೇ ಎಂದು ಕಾಳಪ್ಪ ಅಜ್ಜಿಯನ್ನು ಕೇಳಿದ. ಅದಕ್ಕೆ ಅಜ್ಜಿ ಜೋರಾಗಿ ಗಹಗಹಿಸಿ ನಗುತ್ತಾ, ನನಗೂ ಗಂಡ, ಮಕ್ಕಳು ಎಲ್ಲಾ ಇದ್ರು ಕಣಪ್ಪಾ ಈಗ ನಾನೊಬ್ಬಳೇ ಅದೆಲ್ಲಾ ದೊಡ್ಡು ಕಥೆ. ಹೊಟ್ಟೆಪಾಡಿಗೆ ಸೊಪ್ಪು ಮಾರುತೀನಿ ಅಷ್ಟೇ. ನನ್ನದು ಇಲ್ಲೇ ಪಕ್ಕದೂರು. ನನ್ನ ಹೆಸರು ಸಣ್ಣವ್ವಾಂತ ಕಣಪ್ಪಾ. ನಾನು ಸೊಪ್ಪು ಮಾರುತೀನಲ್ಲಾ ಅದಕ್ಕೆ ನನ್ನ ಎಲ್ಲಾ ಸೊಪ್ಪವ್ವಾ ಅಂತಾರೆ ಎಂದು ನಡುಗುವ ಧ್ವನಿಯಲ್ಲಿ ಅಜ್ಜಿ ತನ್ನ ಬಗ್ಗೆ ಹೇಳಿಕೊಂಡಳು. ಅಜ್ಜಿಯ ಮಾತನ್ನೇ ಆಲಿಸುತ್ತಿದ್ದವನಿಗೆ ಅವಳನ್ನು ನೋಡಿ ಬೇಸರವಾಯಿತು. ಈ ಮುಪ್ಪಿನ ವಯಸ್ಸಲ್ಲೂ ನೆಮ್ಮದಿಯಾಗಿರದೆ ದುಡಿದು ತಿನ್ನುತ್ತಿದ್ದಾಳೆ. ಅದೂ ಈ ಉರಿ ಬಿಸಿಲಿನಲ್ಲಿ ಪಾಪದ ಅಜ್ಜಿ ಎಂದು ಮನಸಿನಲ್ಲೇ ಅಜ್ಜಿಯ ಬಗೆಗೆ ಮರುಕ ಪಟ್ಟ ಕಾಳಪ್ಪ. ಮಗಾ ಯಾಕೋ ತುಂಬಾ ಸುಸ್ತು ಆಗ್ತಾ ಇದೆ. ಬೆಳಗ್ಗೆ ಸರಿಯಾಗಿ ತಿಂಡಿ ತಿಂನ್ಲಿಲ್ಲಾ ಕಣಪ್ಪಾ, ಬಹಳಾ ಹಸಿವಾಗ್ತಾ ಇದೆ. ಏನಾದರೂ ಇದ್ರೆ ತಿನ್ನಕ್ಕೆ ಕೊಡ್ತಿಯಾ ಎಂದು ಕ್ಷೀಣ ಸ್ವರದಲ್ಲಿ ಅಜ್ಜಿ ಕಾಳಪ್ಪನನ್ನು ಕೇಳಿದಳು. ಅಜ್ಜಿ ಹೇಳಿದ್ದು ಕೇಳುತ್ತಲೇ ಕಾಳಪ್ಪ ಕುಂಟುತ್ತಲೇ ಅಡಿಗೆಮನೆಗೆ ಹೋಗಿ, ಬೆಳಗ್ಗೆ ಹೆಂಡತಿ ಮಲ್ಲಿಗೆವ್ವ ಮಾಡಿಟ್ಟಿದ್ದ ಉಪ್ಪಿಟ್ಟನ್ನು ತಟ್ಟೆಗೆ ಹಾಕಿಕೊಂಡು, ಜೊತೆಗೆ ಲೋಟದಲ್ಲಿ ನೀರು ಇಟ್ಟುಕೊಂಡು ಅಜ್ಜಿಗೆ ಕೊಡಲೆಂದು ಕಾಳಪ್ಪ ಹೊರಬಂದಾಗ ಅವನಿಗೆ ಆಶ್ಚರ್ಯವಾಯಿತು. ಅಲ್ಲಿ ಕಟ್ಟೆಯ ಮೇಲೆ ಕುಳಿತಿದ್ದ ಅಜ್ಜಿಯ ಸೊಪ್ಪಿನ ಬುಟ್ಟಿಯೂ ಇಲ್ಲಾ, ಅಜ್ಜಿಯೂ ಇಲ್ಲಾ!. ಕಾಳಪ್ಪ ಮನೆಯ ಸುತ್ತಲೂ ಕಾಲು ನೋಯುತ್ತಿದ್ದರೂ ತನ್ನ ಶಕ್ತಿ ಮೀರಿ ಅಜ್ಜಿಯನ್ನು ಹುಡುಕಿದ. ಸೊಪ್ಪವ್ವಾ, ಸೊಪ್ಪವ್ವಾ ಎಂದು ಹಲವು ಬಾರಿ ಕೂಗಿ ಕರೆದ.ಅಜ್ಜಿ ಮಾತ್ರ ಕಾಣಲಿಲ್ಲ. ಎಲ್ಲಿ ಹೋದಳು ಈ ಅಜ್ಜೀ , ಹಸಿವಾಗ್ತಾ ಇದೆ ಅಂತ ಬೇರೆ ಹೇಳ್ತಾ ಇದ್ಲು. ಸುಸ್ತಾಗಿ ಎಲ್ಲಾದರೂ ಬಿದ್ದಳಾ ಎಂದುಕೊಂಡು,ಮತ್ತೊಮ್ಮೆ ಮನೆಯ ಸುತ್ತಮುತ್ತಲೂ ಹುಡುಕಿದ. ಅಜ್ಜಿಯ ಸುಳಿವು ಮಾತ್ರ ಸಿಗಲಿಲ್ಲ. ಅಜ್ಜಿಯನ್ನು ಹುಡುಕಿ ಸುಸ್ತಾದ ಕಾಳಪ್ಪ ಕುಂಟುತ್ತಾ ಮನೆಯೊಳಗೆ ಹೋಗಿ ಮತ್ತದೇ ಕುರ್ಚಿಯ ಮೇಲೆ ಕುಳಿತ. ಅಜ್ಜಿಗೆಂದು ತಟ್ಟೆಯಲ್ಲಿ ಹಾಕಿಟ್ಟಿದ್ದ ಉಪ್ಪಿಟನ್ನೇ ಕೊಂಚ ತಿಂದು, ನೀರು ಕುಡಿದವನೆ ಹಾಗೇ ಕುರ್ಚಿಯ ಮೇಲೆ ಕುಳಿತು ಕಣ್ಣು ಮುಚ್ಚಿಕೊಂಡ. ಹೋಯ್ ಬಾಗಿಲು ತೆಗೀರಿ, ನಾನು ಮಲ್ಲಿಗೆವ್ವಾ ಬಂದಿದೀನಿ ಎಂದು ತೋಟದಿಂದ ಬಂದ ಮಲ್ಲಿಗೆವ್ವಾ ಬಾಗಿಲು ತೆರೆಯುವಂತೆ ಕೂಗಿದಳು. ನಿದ್ರೆಯ ಗುಂಗಿನಲ್ಲಿದ್ದ ಕಾಳಪ್ಪ ಎಚ್ಚರಗೊಂಡವನೇ ಯಾರೋ ಕೂಗಿದಂತೆ ಕೇಳಿಸುತ್ತಿದೆಯಲ್ಲಾ ಬಹುಶಃ ಅಜ್ಜಿಯೇ ಬಂದಿರಬೇಕೆಂದುಕೊಂಡು ಬಾಗಿಲು ತೆರೆದವನಿಗೆ ಮಲ್ಲಿಗೆವ್ವನ ಕಂಡು ಸಂತಸವಾದರೂ ಆ ಅಜ್ಜಿಯೆಂದುಕೊಂಡೆನಲ್ಲಾ ಎಂದು ಬೇಸರವನ್ನೂ ಮಾಡಿಕೊಂಡ. ಮನೆ ಒಳಗೆ ಬಂದ ಮಲ್ಲಿಗೆಯವ್ವ ಬೇಸರದಲ್ಲಿದ್ದ ಕಾಳಪ್ಪನನ್ನು ಕಂಡು, ಯಾಕೆ ಏನಾಯಿತು ಬೇಸರದಲ್ಲಿದ್ದೀರಾ, ನಿಮ್ಮ‌ ಕಾಲಿಗೆ ಏನಾಯಿತು? ಬೆಳಿಗ್ಗೆ ಎಲ್ಲಿಗೆ ಹೋಗಿದ್ದಿರಿ? ನಾನು ನೀವು ತೋಟಕ್ಕೆ ಹೋಗಿದ್ದಿರಿ ಎಂದುಕೊಂಡು ನಾನು ತೋಟಕ್ಕೆ ಹೋದರೆ ಅಲ್ಲಿ ನೀವು ಇರಲಿಲ್ಲ. ನಮ್ಮ ತೋಟದ ಪಕ್ಕದಲ್ಲಿ ಮನೆ ಮಾಡಿಕೊಂಡಿದ್ದಾರಲ್ಲ ಸೀತವ್ವ ಅಂತ ಅವರ ಜೊತೆಗೆ ಇಷ್ಟೊತ್ತು ಮಾತನಾಡುತ್ತಾ ಇದ್ದೆ.              "ಅವರ ಮನೆಯಲ್ಲಿ ಇವತ್ತು ಅವರ ಅಜ್ಜಿ ಅದ್ಯಾರೋ ಸಣ್ಣವ್ವಾ ಅಂತೆ, ಅವರು ತೀರಿ ಹೋದ ದಿನವಂತೆ. ಇಲ್ಲೆಲ್ಲಾ ಸೊಪ್ಪು ಮಾರಿ ಜೀವನ‌ ಮಾಡುತ್ತಾ ಇದ್ದರಂತೆ. ಸುಮಾರು ವರುಷಗಳ ಹಿಂದೆ ನಮ್ಮನೆಯ ಹತ್ತಿರ ಕಾಡು ಇದೆಯಲ್ಲಾ ಆ ದೊಡ್ಡ ಸೀಗೆ ಮರಗಳು ಇರೋ ಹತ್ತಿರ ಅಲ್ಲಿ ಸೊಪ್ಪಿನ ಬುಟ್ಟಿ ಹೊತ್ತುಕೊಂಡು ಬಿಸಿಲಲ್ಲಿ ಬರುವಾಗ ಕಾಲು ಜಾರಿ ಬಿದ್ದವರು ಮತ್ತೆ ಏಳಲೇ ಇಲ್ಲವಂತೆ. ಸಾಯುವವರೆಗೂ ದುಡಿದು ತಿನ್ನಬೇಕು, ಯಾರ ಬಳಿಯೂ ಒಂದು ಪೈಸೆಯನ್ನೂ ಬೇಡಬಾರದು ಅಂತ ಅವರಿಗೆ ಹಠ ಇತ್ತಂತೆ. ಹಾಗೆ ಬದುಕಿದ್ದರಂತೆ ಕೂಡಾ ಬಹಳಾ ಒಳ್ಳೆಯವರಂತೆ ಎಂದು ಸೀತಕ್ಕಾ ಹೇಳುತ್ತಿದ್ದರು. ಅದಕ್ಕೆ ಇವತ್ತು ಅವರ ಮನೆಯಲ್ಲಿ ಅವರ ಅಜ್ಜಿಗೆ ಇಷ್ಟಾಂತಾ ಲಾಡು ಮಾಡಿದ್ದರು ನನಗೆ ಎರಡು ಕೊಟ್ಟರು ಎಂದು ಕಾಳಪ್ಪನಿಗೆ ಮಾತನಾಡಲು ಅವಕಾಶವನ್ನು ಕೊಡದೇ ಒಂದೇ ಸಮನೆ ತಾನೇ ಮಲಿಗೆವ್ವ ಮಾತನಾಡಿದಳು. ಅವಳ ಮಾತನೆಲ್ಲಾ ಆಲೈಸಿದ ಕಾಳಪ್ಪನಿಗೆ ಒಮ್ಮೆಲೇ ಗಾಬರಿಯಿಂದ ಮೈಗೆಲ್ಲಾ ವಿದ್ಯುತ್ ಸಂಚಾರವಾದಂತಾಯಿತು. ಮಲ್ಲಿಗೆವ್ವನ ಬಾಯಿಯಿಂದ ಸೊಪ್ಪವ್ವನ "ಭಯಾನಕ ಕಥೆಯನ್ನು" ಕೇಳಿಸಿಕೊಂಡ ಕಾಳಪ್ಪ ಥರ ಥರನೇ ನಡುಗಿದ. ತಕ್ಷಣ ಏನೋ ಹೊಳೆದವರಂತೆ ಅಡಿಗೆಮನೆಯೊಳಗೆ ಹೋಗಿ ತರಕಾರಿಗಳನ್ನು ಇಟ್ಟ ಪಾತ್ರೆಯ ಮುಚ್ಚಳವ ತೆಗೆದು ನೋಡಿದ. ಅಲ್ಲಿದ್ದ ತರಕಾರಿಗಳೆಲ್ಲಾ ಇಲ್ಲಿ ಯಾವ ಸೊಪ್ಪೂ ಇಲ್ಲಾ ನೀನು ಏನು ಹುಡುಕುತ್ತಾ ಇದಿಯಾ ಎಂದು ಏನೋ ಹೇಳುತ್ತಾ "ಭಯಾನಕವಾಗಿ" ಗಹಗಹಿಸಿ ನಗುತ್ತಾ, ಸೊಪ್ಪವ್ವನ "ಭಯಾನಕ ಮುಖದ" "ದೆವ್ವದ" ರೂಪವ ತಾಳಿ ತನ್ನನ್ನೇ ಕೆಕ್ಕರಿಸಿಕೊಂಡು ನೋಡುತ್ತಾ ಅಣಕಿಸುತ್ತಿರುವಂತೆ ಕಾಳಪ್ಪನಿಗೆ ಭಾಸವಾಯಿತು.

 

 


Rate this content
Log in

Similar kannada story from Horror