Ranjtha hebbar m

Children Stories Inspirational

3  

Ranjtha hebbar m

Children Stories Inspirational

(ಮಕ್ಕಳ ಕಥೆ) ನೇರ ಮಾತಿನ ಫಲ

(ಮಕ್ಕಳ ಕಥೆ) ನೇರ ಮಾತಿನ ಫಲ

2 mins
254



ಸಣ್ಣಳ್ಳಿ ಎಂಬ ಊರಿನಲ್ಲಿ ಶಂಭು ಎಂಬ ಬಾಲಕನಿದ್ದ. ಅವನು ಅದೇ ಊರಿನ ಒಂದು ಶಾಲೆಯಲ್ಲಿ ಐದನೇ ತರಗತಿಯಲ್ಲಿ ಓದುತ್ತಿದ್ದ. ಅವನ ತಂದೆತಾಯಿ ಇಬ್ಬರೂ ಕೃಷಿಕರಾಗಿದ್ದರು. ಬಡತನ ಎಂಬುದು ಅವನು ಹುಟ್ಟಿದಾಗಿನಿಂದ ಇತ್ತು. ಇದರಿಂದಾಗಿ ಅವನು ಎಲ್ಲರ ಬಳಿಯೂ ನೇರವಾಗಿ(" ನೇರ ಮಾತು") ಮಾತನಾಡುತ್ತಿದ್ದ. ಸುಳ್ಳು ಹೇಳುವುದು , ಮಾತು ತಪ್ಪುವುದು ಎರಡೂ ಅವನಿಗೆ ಗೊತ್ತಿರಲಿಲ್ಲ. ಅವನು ಓದುತ್ತಿದ್ದ ಶಾಲೆಯಲ್ಲಿ ರಂಗ ಎಂಬ ಮತ್ತೊಬ್ಬ ಬಾಲಕನೂ ಓದುತ್ತಿದ್ದ. ಅವನು ಇವನ ವ್ಯಕ್ತಿತ್ವಕ್ಕೆ ವಿರುದ್ಧವಾಗಿ ಇದ್ದ. ಯಾವಾಗಲೂ ಮಾತು ತಪ್ಪುವುದು, ಸುಳ್ಳು ಹೇಳುವುದು. ಯಾರಾದರೂ ಏನಾದರೂ ಕೇಳಿದರೆ ನೇರವಾಗಿ ಮಾತನಾಡದೆ ವಿತಂಡವಾದ ಮಾಡುವುದು. ಹೀಗೆ ಕೆಟ್ಟ ಗುಣಗಳನ್ನೇ ಬೆಳೆಸಿಕೊಂಡಿದ್ದ. ಆದರೂ ಇವರಿಬ್ಬರು ಸ್ನೇಹಿತರಾಗಿದ್ದರು. ಯಾವುದೇ ಕಪಟವನ್ನರಿಯದ ಶಂಭು, ರಂಗನನ್ನು ಸ್ನೇಹಿತನೆಂದು ಭಾವಿಸಿದ್ದ. ಒಮ್ಮೆ ಶಾಲೆಯಲ್ಲಿ ಮಾಸ್ತರರು ಗಣಿತ ವಿಷಯದ ಬಗ್ಗೆ ಪಾಠ ಮಾಡುತ್ತಿದ್ದಾಗ ರಂಗನು ಅವರು ಹೇಳಿದ್ದನ್ನು ಪುಸ್ತಕದಲ್ಲಿ ಬರೆದುಕೊಳ್ಳದೆ ಯಾವುದೋ ಹಕ್ಕಿಯ ಚಿತ್ರವ ಬಿಡಿಸುತ್ತಾ ಕೂತಿದ್ದನು. ಇದನ್ನು ಕಂಡ ಶಂಭು, ಪಾಠವನ್ನು ಕೇಳು ಇದೆಲ್ಲಾ ಬಿಡಿಸಬೇಡ ಎಂದು ಅವನಿಗೆ ಬುದ್ಧಿವಾದ ಹೇಳಿದಾಗ, ನೀನು ಬೇಕಾದರೆ ನೋಟ್ಸ್ ಮಾಡಿಕೋ , ನಾನು ನೋಟ್ಸ್ ಇಲ್ಲದೆಯೂ ಅರ್ಥ ಮಾಡಿಕೊಳ್ಳುತ್ತೇನೆ ಎಂದು ಅಹಂಕಾರದ ಮಾತನಾಡಿದ. ಅದಕ್ಕೆ ಶಂಭು ಆಗಲಿ ಎಂದು ತಾನು ನೋಟ್ಸ್ ಬರೆಯುವಲ್ಲಿ ತಲ್ಲೀನನಾದ. ನೋಟ್ಸ್ ಎಲ್ಲಾ ಸರಿಯಾಗಿ ಬರೆದುಕೊಂಡೆಯಾ ಎಂದು ಕೊನೆಯ ಬೆಂಚಿನ ಮೂಲೆಯಲಿ ಕುಳಿತು ಚಿತ್ರ ಬಿಡಿಸುವುದರಲ್ಲಿ ತಲ್ಲೀನನಾಗಿದ್ದ ರಂಗನನ್ನು ಮಾಸ್ತರರು ಪ್ರಶ್ನೆಸಿದರು. ಅದಕ್ಕೆ ನೇರ ಮಾತಿನಿಂದ ಉತ್ತರಿಸದ ರಂಗನು, ಹಾ ಸರ್ ಬರೆದುಕೊಂಡಿದ್ದೇನೆ ಎಂದು ಸುಳ್ಳು ಹೇಳಿದ. ಎಲ್ಲಿ ತೋರಿಸು ಬರೆದದ್ದನ್ನು ಎಂದಾಗ ಪಕ್ಕದಲ್ಲಿ ಕುಳಿತಿದ್ದ ಶಂಭುವಿನಿಂದ ನೋಟ್ಸ್ ಪಡೆದು ಅದನ್ನೇ ತೋರಿಸಿದ. ಮಾಸ್ತರರು ಅದು ರಂಗನ ನೋಟ್ಸ್ ಎಂದೇ ತಿಳಿದು. ಚೆನ್ನಾಗಿ ಬರೆದುಕೊಂಡಿದ್ದೀಯಾ ಎಂದರು. ಮಾಸ್ತರರ ಹೊಗಳಿದ್ದಕ್ಕೆ ಹಿಗ್ಗಿದ ರಂಗನು ತನ್ನ ನೇರ ಮಾತನಾಡದೆ ಸುಳ್ಳು ಹೇಳುವ ಬುದ್ದಿಯನ್ನೇ ಮುಂದುವರಿಸಿದನು. ತಿಂಗಳುಗಳು ಬೇಗನೆ ಕಳೆದು ವಾರ್ಷಿಕ ಪರೀಕ್ಷೆಗಳು ಶುರುವಾದವು. ಶಂಭು, ತನಗೆ ಗೊತ್ತಾಗದ ಗಣಿತದ, ಇನ್ನಿತರ ಪಾಠದ ವಿಷಯಗಳ ಬಗ್ಗೆ ಇದ್ದ ಸಮಸ್ಯೆಗಳನ್ನು ಮಾಸ್ತರರಿಗೆ ಹೇಳಿ ಅವರ ಬಳಿ ನೇರ ಮಾತನಾಡಿ , ಅವರಿಂದ ಮಾರ್ಗದರ್ಶನ ಪಡೆದು ಶಂಭು ನೋಟ್ಸ್ ಗಳನ್ನು ಚೆನ್ನಾಗಿ ಬರೆದುಕೊಂಡು ಅದನ್ನೇ ಓದಿ ಎಲ್ಲಾ ವಿಷಯದಲ್ಲೂ ಶಾಲೆಗೆ ಮೊದಲಿಗನಾಗಿ ಉತ್ತೀರ್ಣನಾದ. ಆದರೆ ನೋಟ್ಸ್ ಬರೆದುಕೊಂಡೆ ಎಂದು ಮಾಸ್ತರರ ಬಳಿ ಸುಳ್ಳನ್ನು ಹೇಳಿ "ನೇರ ಮಾತನಾಡಿ" ಪಾಠದ ವಿಷಯಗಳ ಬಗೆಗೆ ತನಗೆ ತಿಳಿಯದೇ ಇದ್ದುದನ್ನು ಕೇಳಿ ತಿಳಿದು, ಬರೆದು ಅಭ್ಯಾಸ ಮಾಡದೆ ಇದ್ದುದರಿಂದ ರಂಗ ಅನುತ್ತೀರ್ಣನಾದ. ಆಗ ರಂಗನಿಗೆ ಅನಿಸಿತು ತಾನು ಕೂಡ ಮಾಸ್ತರರ ಬಳಿ "ನೇರ ಮಾತನಾಡಿ" ಪಾಠದ ವಿಷಯಗಳ ಬಗೆಗೆ ಅವರಿಂದ ಕೇಳಿ ತಿಳಿದು ಅಭ್ಯಾಸ ಮಾಡಬೇಕಿತ್ತು ಎಂದು. ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎಂಬುದನ್ನು ಅರಿತ ರಂಗ, ನೇರ ಮಾತನಾಡುವುದನ್ನು, ಸತ್ಯ ಹೇಳುವುದನ್ನು ಹಾಗೂ ಒಳ್ಳೆಯ ದಾರಿಯಲ್ಲಿ ನಡೆಯುವುದನ್ನು ತನ್ನ ಸ್ನೇಹಿತ ಶಂಭುವಿನಿಂದ ಕೇಳಿ, ಕಲಿತುಕೊಂಡ. ಹಾಗೆ "ನೇರ ಮಾತಿನಾಡುವವರೆ" ನಿಜವಾದ ಸಜ್ಜನರು ಎಂದು ಒಪ್ಪಿಕೊಂಡ. 

ಕಥೆಯ ನೀತಿ:- ನೇರ ಮಾತನಾಡುವವರು ಜ್ಞಾನವಂತರು.


 



Rate this content
Log in