kaveri p u

Abstract Tragedy Inspirational

4  

kaveri p u

Abstract Tragedy Inspirational

ಸಣ್ಣ ತಪ್ಪು

ಸಣ್ಣ ತಪ್ಪು

2 mins
260


ಅವರಿಬ್ಬರು ತುಂಬಾ ಅನೋನ್ಯವಾಗಿದ್ದರು. ಅಕ್ಕಪಕ್ಕದವರು ಕೂಡ ಅವರನ್ನು ನೋಡಿ ಇದ್ದರೆ ಈ ತರ ಇರಬೇಕು ನೋಡಿ ಅಂತ ಹೇಳುತ್ತಿದ್ದರು. ಅವನು ಅವಳನ್ನು ಮಗುವಂತೆ ನೋಡಿಕೊಳ್ಳುತ್ತಿದ್ದ. ಅವಳು ಅವನನ್ನು ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದಳು. ಮದುವೆಯಾಗಿ ಮೊದಲ ವರುಷವೇ ಗರ್ಭ ಧರಿಸಿದಳು. ಎರಡು ತಿಂಗಳ ನಂತರ ಅವಳು ಆಸ್ಪತ್ರೆಗೆ ಹೋಗಿ ಎಲ್ಲಾ ಚೆಕಪ್ ಮಾಡಿಸಿಕೊಂಡಾಗ ಗೊತ್ತಾಯಿತು ಅವಳಿ ಮಕ್ಕಳಿಗೆ ತಾಯಿಯಾಗುತ್ತಿದ್ದಾಳೆ ಎಂದು.


ಒಂಬತ್ತು ತಿಂಗಳು ಅವಳನ್ನು ಯಾವುದೇ ಕೆಲಸ ಮಾಡಲು ಹಚ್ಚದೆ ತಾನೇ ಮಾಡುತ್ತಿದ್ದ ಅವಳ ಪತಿರಾಯ. ಅವಳಿಗೆ ಏನು ಇಷ್ಟವೋ ಅದೇ ನಡೆಯುತ್ತಿತ್ತು. ಅತ್ತೆ ಮಾವ ಕೂಡ ಅವಳನ್ನು ಮಗಳಂತೆ ಕಂಡಿದ್ದರು.


 ಎರಡು ಮಕ್ಕಳು ಇದ್ದ ಕಾರಣ ಅವಳ ಹೊಟ್ಟೆ ತುಂಬಾ ದೊಡ್ಡದಾಗಿತ್ತು. ಅವಳಿಗೆ ಕೆಳಗೆ ಕೂತರೆ ಮೇಲೆಳಲು ಕಷ್ಟ ಪಡುತ್ತಾಳೆ ಎಂದು ಅವಳು ಏಳಲು ಸಹಾಯ ಆಗುವಂತೆ ಹಗ್ಗ ಕಟ್ಟಿ ಕೆಳಗೆ ಬಿಟ್ಟಿದ್ದರು. ಅದನ್ನು ಹಿಡಿದುಕೊಂಡು ಅವಳು ಏಳುತ್ತಿದ್ದಳು. ಉಣ್ಣಲು ತಿನ್ನುವುದಕ್ಕೆ ಅವಳಿಗೆ ಯಾವುದಕ್ಕೂ ಕೊರತೆ ಮಾಡದೆ ಸುಖದಿಂದ ನೋಡಿಕೊಂಡಿದ್ದರು. ಒಂಬತ್ತು ತಿಂಗಳು ಮುಗಿದು ಮೇಲೆ ಸಿಜೆರಿನ್ ಮಾಡಿ ಅವಳಿ ಮಕ್ಕಳನ್ನು ತೆಗೆದರು. ಒಂದು ಗಂಡು ಮತ್ತೆ ಹೆಣ್ಣು ಮಗುವಿಗೆ ಅವಳು ಜೀವ ನೀಡಿದ್ದಳು. ಯಾವುದೇ ತೊಂದ್ರೆ ಇಲ್ಲದೆ ಬಾಣಂತನ ತಾಯಿಯ ಮನೆಯಲ್ಲಿ ಮುಗಿಸಿ ಗಂಡನ ಮನೆಗೆ ಬಂದಳು.


 ಸುಖ ಸಂತೋಷಗಳು ಅವಳ ಪಾದದ ಅಡಿಯಲ್ಲಿ ಬಿದ್ದಿರುವ ಹಾಗೆ ಅವಳ ಖುಷಿಗೆ ಪಾರವೇ ಇರಲಿಲ್ಲಾ ಇವಳು ಬೇಕು ಅನ್ನುವ ಮೊದಲೇ ಅವಳ ಪತಿ ಎಲ್ಲವನ್ನು ತಂದು ಕೊಟ್ಟು ಆದರ್ಶ ಪತಿಯಾಗಿದ್ದ. ಇವರ ಇಬ್ಬರ ಜೋಡಿ ಶಿವಾಪಾರ್ವತಿ ಹಾಗೆಯೇ ಇತ್ತು.


 ಅವರಿಬ್ಬರ ಮೇಲೆ ಅದ್ಯಾವ ವಕ್ರ ದೃಷ್ಟಿ ಬಿತ್ತೋ ! ಏನೋ ಕೆಲಸದ ನಿಮಿತ್ತ ಬೇರೊಂದು ಊರಿಗೆ ಹೊರಟಾಗ ಎದುರಿಗೆ ಬಂದ ಬಸ್ಸಿಗೆ ಡಿಕ್ಕಿ ಹೊಡೆದು ಅವಳ ಗಂಡ ರಸ್ತೆಯಲ್ಲೇ ಜೀವ ಕಳೆದುಕೊಂಡನು. ತುಂಬಿದ ಸಂಸಾರದಲ್ಲಿ ಇದೊಂದು ದೊಡ್ಡ ಪ್ರಮಾಣದ ಹೊಡೆತವಾಗಿತ್ತು. ಊರಿನ ಜನಕ್ಕೆ ವಿಷಯ ಗೊತ್ತಾದ ಮೇಲೆ ಮನೆಯವರಿಗೆ ಹೇಳಿ ಮುಂದಿನ ಕ್ರಿಯೆಗಳನ್ನು ಮುಗಿಸಿದರು. ಹೆಲ್ಮೆಟ್ ಇಲ್ಲದೆ ಯಾರು ಓಡಾಡಬೇಡಿ. ಹೆಲ್ಮೆಟ್ ಇದ್ದಿದ್ದರೆ ಅವರ ಜೀವ ಉಳಿಯುತ್ತಿತ್ತೋ ಏನೋ.


ದಯವಿಟ್ಟು ಹೆಲ್ಮೆಟ್ ಧರಿಸಿ.


ಮೂರು ನಾಲ್ಕು ದಿನ ಆದ್ರೂ ಅವಳಿಗೆ ಅವನು ಬಿಟ್ಟು ಹೋದ ನೋವು ತಡೆದುಕೊಳ್ಳಲು ಆಗುತ್ತಿಲ್ಲಾ ನಾನು ಸತ್ತುಬಿಡುವೆ ಏನಾದ್ರು ವಿಷ ಇದ್ರೆ ಕೊಟ್ಟುಬಿಡಮ್ಮಾ ಅಂತ ಅದೇನೇನೋ ಬಡಿಬಡಿಸುತ ಇದ್ದಳು. ನನ್ನ ಕಷ್ಟವನ್ನ ಯಾರ ಮುಂದೆ ಹೇಳಿಕೊಳ್ಳಲಿ, ನನ್ನ ಮುಂದಿನ ಜೀವನ ಹೇಗಮ್ಮಾ? ಅವರನ್ನ ಬಿಟ್ಟು ಹೇಗೆ ನಡೆಸಲಿ ಈ ಜೀವನವನ್ನು ಹೇಗಮ್ಮಾ? ಹೇಗೆ?ಎಂದು ಕಣ್ಣೀರು ಹಾಕತ್ತಲೇ ತಿಂಗಳುಗಳೇ ಉರುಳಿದವು. ಸ್ವಲ್ಪ ದಿನದಲ್ಲೇ ಅವಳ ಮಗನಿಗೆ ಜ್ವರ ಕಾಡ ತೊಡಗಿತು. ಮಗು ಅಮ್ಮನ ಬಿಟ್ಟು ಎಲ್ಲಿಗೂ ಹೋಗದ ಕಾರಣ ಅವಳೇ ಮುಂದಾಗಿ ಆಸ್ಪತ್ರೆಗೆ ಸೇರಿಸಿದಳು. ಅವಳ ಈ ಕಲಸಕ್ಕೆ ಮನೆಯವರ ಮೆಚ್ಚುಗೆ ವ್ಯಕ್ತಪಡಿಸಿದರು. ಹೀಗೆ ನೀನು ಗಟ್ಟಿಯಾಗಬೇಕು ಮಗಳೇ. ಇದು ನಿನ್ನ ಮನೆ ನಿನ್ನ ಇಷ್ಟದ ಹಾಗೆಯೇ ಇರತ್ತೆ ಏನೇ ಬಂದರು ನಿನ್ನ ಜೊತೆ ನಾ ಇರುವೆ ಎಂದು ಅವರ ಅತ್ತೆ ಅವಳಿಗೆ ಸಮಾಧಾನ ಮಾಡಿದಳು.


ಅವಳ 5 ವರ್ಷದ ನೆನಪಗಳು ಇನ್ನು ಹಸಿರಾಗಿದೆ.


ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಈ ದಿನ ಅವಳು ಮುಂದಿನ ಹೆಜ್ಜೆಯನ್ನು ಇಡಲೇಬೇಕಾಗಿದೆ. ಮಕ್ಕಳ ಮನಸು ಹೊಂದಿದ ಅವಳಿಗೆ ಮಕ್ಕಳನ್ನು ನಿಭಾಯಿಸುವುದನ್ನು ಕಲಿಯಬೇಕಾಗಿದೆ. ಅಪ್ಪನಾಗಿ ಅಮ್ಮನಾಗಿ ಅವಳೇ ನಿಲ್ಲಬೇಕು. ಚಿಕ್ಕ ವಯಸ್ಸಿಗೆ ದೊಡ್ಡ ಜವಾಬ್ಧಾರಿ ಹೊರುವ ಕೆಲಸ ಅವಳದಾಗಿದೆ. ಕೆಲವೊಮ್ಮೆ ದೇವರಿಗೂ ಕರುಣೆ ಇಲ್ಲವೇ ಅಂತ ಅನಿಸುತ್ತದೆ. 


 ದೇವರೇ ಅವಳ ಮಕ್ಕಳಿಗೆ ಇನ್ನು ಮುಂದೆ ಒಳ್ಳೆಯ ಉತ್ತಮ ಆರೋಗ್ಯ ಆಯುಷ್ಯ ನೀಡಿ ಕಾಪಾಡಪ್ಪಾ.



Rate this content
Log in

Similar kannada story from Abstract