ಶಾಲೆಯ ಕಡೆಗೆ
ಶಾಲೆಯ ಕಡೆಗೆ
ಎರಡು ವರ್ಷಗಳ ಕರೋನಾ ಕಾಟದಿಂದ ವಿದ್ಯಾಕೇಂದ್ರ ಗಳು ಮುಚ್ಚಿದ್ದು, ಈಗ ಸರ್ಕಾರದ ಶತಪ್ರಯತ್ನ ದ ಫಲವಾಗಿ ಶಾಲೆಗಳನ್ನು ಮತ್ತೆ ತೆಗೆಯಲಾಗಿದೆ. ಎಲ್ಲಾಕಡೆ ವ್ಯಾಕ್ಸಿನ್ ವ್ಯವಸ್ಥೆ ಮಾಡಲಾಗಿದೆ. ಶಾಲಾ ಆವರಣದಲ್ಲಿ ಕರೋನಾ ಹಿಮ್ಮೆಟ್ಟಿಸಲು ಸ್ವಚ್ಛತಾ ಅಭಿಯಾನ, ಎಲ್ಲವೂ ನಡೆದಿದ್ದು, ಶಾಲೆಯ ಸುತ್ತಲೂ ಕರೋನಾ ತಡೆಗಟ್ಟಲು ಕರೋನಾ ವಾರಿಯರ್ಸ್
ಕ್ರಮ ಕೈಗೊಳ್ಳಲಾಗಿದೆ.
"ಮಕ್ಕಳೇ, ನೀವೆಲ್ಲರೂ ಹೆದರದೇ ಧೈರ್ಯ ವಾಗಿ ಶಾಲೆಗೆ ಬನ್ನಿ, ಆದರೆ ಮಾಸ್ಕ್ ಧರಿಸಿಯೇ ಬನ್ನಿ", ಎಂದು ಶಾಲಾ ಮುಖ್ಯಸ್ಥರು ಮಕ್ಕಳಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.
ಕಡೆಗೂ ಮೇ ೧೬ರಿಂದ ಎಲ್ಲಾ ಶಾಲೆಗಳು ಮತ್ತೆ ತೆರೆದು, ಮಕ್ಕಳನ್ನು ಅದ್ದೂರಿ ಯಿಂದ ಸ್ವಾಗತಿಸಿವೆ.
ಎರಡು ವರ್ಷಗಳಿಂದ ಮನೆಯಲ್ಲೇ ಕುಳಿತು ಜಡ್ಡು ಗಟ್ಟಿದ್ದ ಮಕ್ಕಳು ಅತ್ಯಂತ ಉತ್ಸಾಹದಿಂದ ಮಾಸ್ಕ್ ಧರಿಸಿಯೇ, ಯೂನಿಫಾರ್ಮ್ ತೊಟ್ಟು, ಶಾಲೆಯ ಕಡೆಗೆ ಹೊರಟಿದ್ದಾರೆ.
ತರಗತಿಯಲ್ಲಿ ಕರಿಯ ಹಲಗೆಯ ಮುಂದೆ ಮಾಸ್ಕ್ ಧರಿಸಿಯೇ ಶಿಸ್ತಿನಿಂದ ಕುಳಿತು ಪಾಠ ಕೇಳಲು ಪ್ರಾರಂಭಿಸಿದ್ದಾರೆ. ಶಾಲಾ ಮುಖ್ಯಸ್ಥರು ಮಕ್ಕಳಿಗೆ ಸಿಹಿ ಹಂಚಿ ಶುಭಾಶಯಗಳನ್ನು ಕೋರಿದ್ದಾರೆ.
